Sunday, December 22, 2024

ಅಂಜುಮ್ , ಮೆಹುಲಿ ಗೆ ಚಿನ್ನದ ಪದಕ

ತಿರುವನಂತಪುರ: 

ಭಾರತದ ಶೂಟರ್ ಅಂಜುಮ್ ಮೌದ್ಗಿಲ್ ಮತ್ತು ಮೆಹುಲಿ ಘೋಷ್ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆೆ ಕೊರಳೊಡ್ಡಿದರು.

ಮಂಗಳವಾರ ಇಲ್ಲಿ ನಡೆದ 10 ಮೀ. ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ಅಂಜುಮ್ ಮತ್ತು ಅರ್ಜುನ್ ಬಾಬುತಾ ಅವರು 828.9 ಅಂಕಗಳೊಂದಿಗೆ  ಪ್ರಥಮ ಸ್ಥಾನ ಪಡೆದು ಸ್ವರ್ಣ ತಮ್ಮದಾಗಿಸಿಕೊಂಡರು.
ಈ ಮೂಲಕ ಟೂರ್ನಿಯಲ್ಲಿ ಅಂಜುಮ್ ಮೂರನೇ ಚಿನ್ನ ಜಯಿಸುವಲ್ಲಿ ಯಶಸ್ವಿಯಾದರು. ಮೆಹುಲಿ ಘೋಷ್ ಮತ್ತು ಅಭಿನವ್ ಶಾ ಕಿರಿಯ ಮತ್ತು ಯುವ ಮಿಶ್ರ ವಿಭಾಗದಲ್ಲಿ ಕ್ರಮವಾಗಿ 498.2 ಮತ್ತು 498.8 ಅಂಕಗಳನ್ನು ಪಡೆಯುವಲ್ಲಿ ಸಫಲವಾಗಿ ಪ್ರಥಮ ಸ್ಥಾಾನ ಪಡೆದರು. ರಾಜಸ್ಥಾನದ ಜೋಡಿಯಾದ ದಿವ್ಯಾಂಶ ಸಿಂಗ್ ಪನ್ವರ್ ಮತ್ತು ಭಾರಕ್ ಚೌಹಾನ್ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದರು.

Related Articles