ಸ್ಪೋರ್ಟ್ಸ್ ಮೇಲ್ ವರದಿ
ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ 17ನೇ ವರ್ಷದ ವಾಲಿಬಾಲ್ ಟೂರ್ನಿ, ವಾಲಿಬಾಲ್ ಕಪ್ ಚಾಂಪಿಯನ್‌ಷಿಪ್ ಶುಕ್ರವಾರದಿಂದ (ಡಿ,21 ರಿಂದ ) ಮಂಗಳವಾರ (ಡಿಸೆಂಬರ್ 25ರವರೆಗೆ) ರಾಜಾಜಿನಗರದ ವಿವೇಕಾನಂದ ಆಟದ ಮೈದಾನದಲ್ಲಿ ನಡೆಯಲಿದೆ.
ರಾಜ್ಯದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾಗಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 11 ತಂಡಗಳು ಪಾಲ್ಗೊಳ್ಳಲಿವೆ. ರಾಜ್ಯ ಅಸೋಸಿಯೇಷನ್ ಕಪ್ ಆಡಿದ ಪುರುಷರ 7 ಹಾಗೂ ಮಹಿಳಾ ವಿಭಾಗದ 4 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಮಾಜಿ ಮೇಯರ್ ಹಾಗೂ ಮಾಜಿ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಎಸ್. ಹರೀಶ್ ಕುಮಾರ್ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ ಎಂದು ತಿಳಿಸಿದಾರೆ. ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹರೀಶ್, ಅವರು ಕಳೆದ 17 ವರ್ಷಗಳಿಂದ ಈ ಟೂರ್ನಿಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತಾರೆ. ಮಾದರಿ ವಾಲಿಬಾಲ್ ಟೂರ್ನಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇತರ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕಾರಣದಿಂದಲೇ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಕೇಂದ್ರ ಕ್ರೀಡಾ ಸಚಿವ ರಾಜ್ಯವ‘ರ್ನ ಸಿಂಗ್ ರಾಥೋಡ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ರಾಜ್ಯ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಡಾ. ಬೆಟ್ಟೇ ಗೌಡ ಹಾಗೂ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ಕೆ. ನಂದ ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದಾರೆ.
ಐದು ದಿನಗಳ ಕಾಲ ನಡೆಯುವ ಈ ಚಾಂಪಿಯನ್‌ಷಿಪ್‌ನ ಪ್ರತಿ ದಿನವೂ ಬೆಂಗಳೂರು ನಗರದ ಪ್ರಮುಖರನ್ನು ಸಭೆಗೆ ಆಹ್ವಾನಿಸಲಾಗತ್ತದೆ. ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಗಳಿಸುವ ಪುರುಷರ ತಂಡ 40,000 ರೂ. ಬಹುಮಾನ ಗಳಿಸಲಿದೆ, ಎರಡನೇ ಸ್ಥಾನ ಗಳಿಸುವ ತಂಡ 30,000 ರೂ. ಹಾಗೂ ಮೂರನೇ ಸ್ಥಾನಕ್ಕೆ 20,000 ರೂ, ನಾಲ್ಕನೇ ಸ್ಥಾನಕ್ಕೆ 10,000 ರೂ. ಬಹುಮಾನ ನೀಡಲಾಗುವುದು. ವನಿತೆಯರ ವಿಭಾಗದಲ್ಲಿ ಚಾಂಪಿಯನ್ ತಂಡಕ್ಕೆ 20,000 ರೂ. ನಗದು ಬಹುಮಾನ, ರನ್ನರ್ ಅಪ್‌ಗೆ 15,000 ರೂ, ಮೂರನೇ ಬಹುಮಾನಕ್ಕೆ 10,000 ರೂ. ಹಾಗೂ ನಾಲ್ಕನೇ ಬಹುಮಾನ ಗಳಿಸುವ ತಂಡಕ್ಕೆ 5,000 ರೂ. ನಗದು ಬಹುಮಾನ ನೀಡಲಾಗುವುದು ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
ಕಾಡುವ ಅಜಾತಶತ್ರು
ಇದುವರೆಗೂ ೧೬ ಟೂರ್ನಿ ಗಳು ವಾಜಪೇಯೀ ಅವರು ಇದ್ದಾಗ ನಡೆದಿದೆ ಆದರೆ ಈಬಾರಿ ಅಜಾತಶತ್ರುವಿನ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ. ಅದೇ ರೀತಿ ವಾಜಪೇಯೀ ಕಪ್ ಎಂದಾಗಲೆಲ್ಲ ಎಲ್ಲಾ ರೀತಿಯ ನೆರವು ನೀಡುತ್ತಿದ್ದವರು ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ ಅವರು. ಎಲ್ಲೇ ಅಥವಾ ಯಾವುದೇ ಜವಾಬ್ಧಾರಿ ಇದ್ದರೂ ಅದನ್ನು ಬದಿಗಿಟ್ಟು ವಾಜಪೇಯೀ ಅವರ ಮೇಲಿನ ಪ್ರೀತಿ ಹಾಗೂ ಗೌರವದ ಕಾರಣ ಪಾಲ್ಗೊಳ್ಳುತ್ತಿದ್ದರು. ಆದರೆ ಅನಂತ್ ಕುಮಾರ್ ಅವರು ಈಗ ನಮ್ಮನ್ನಗಲಿದ್ದಾರೆ. ಯಾರು ನೆರವು ನೀಡುತಿದ್ದರೋ, ಯಾರ ಹೆಸರಲ್ಲಿ ನಡೆಯುತ್ತಿದೆಯೋ ಅವರಿಬ್ಬರೂ ಇಲ್ಲದಾಗ ಈಬಾರಿ ವಾಜಪೇಯೀ ಕಪ್ ವಾಲಿಬಾಲ್ ಟೂರ್ನಿ ಸಂಘಟಕರನ್ನು ಕಾಡುವುದು ಸ್ಪಷ್ಟ.