ಹೈದರಾಬಾದ್
ಮೊದಲ ಪಂದ್ಯದಲ್ಲಿ ಜಯ ಗಳಿಸಿ ದಿಟ್ಟ ಹೆಜ್ಜೆ ಇಟ್ಟಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರೊ ಕಬಡ್ಡಿ ಲೀಗ್ನ ಎರಡೇ ಪಂದ್ಯದಲ್ಲಿ ಅಚ್ಚರಿಯ ಆಘಾತ. ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ೨೪-೪೨ ಅಂತರದಲ್ಲಿ ಸೋಲನುಭವಿಸಿತು.
ಇಲ್ಲಿನ ಗಾಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ತಂಡ ಆಲ್ರೌಂಡ್ ಪ್ರದರ್ಶನ ತೋರಿ ಚಾಂಪಿಯನ್ ತಂಡಕ್ಕೆ ಸೋಲುಣಿಸಿತು. ಗುಜರಾತ್ ಪರ ಸಚಿನ್ ಆರು ರೈಡ್ ಅಂಕ ಹಾಗೂ ಸುನಿಲ್ ಕುಮಾರ್ ಆರು ಟ್ಯಾಕಲ್ ಅಂಕ ಗಳಿಸುವ ಮೂಲಕ ಜಯದ ರೂವಾರಿ ಎನಿಸಿದರು. ಬೆಂಗಳೂರು ತಂಡ ಆರಂಭದಲ್ಲೇ ಆಲೌಟ್ಗೆ ಗುರಿಯಾದದ್ದು ಸೋಲಿಗೆ ಪ್ರಮುಖ ಕಾರಣವಾಯಿತು.
ಸಚಿನ್ ಅವರ ಆತ್ಮವಿಶ್ವಾಸದ ರೈಡ್ ಹಾಗೂ ತಂಡದ ಉತ್ತಮ ರಕ್ಷಣಾತ್ಮಕ ಆಟದ ನೆರವಿನಿಂದ ಗುಜರಾತ್ ತಂಡ ಕೇವಲ ೧೨ನೇ ನಿಮಿಷಗಳಲ್ಲಿ ಬೆಂಗಳೂರು ತಂಡವನ್ನು ಆಲೌಟ್ ಮಾಡಿತು. ಜಿಬಿ ಮೋರೆ ಹಾಗೂ ರೋಹಿತ್ ಗುಲಿಯಾ ಅವರ ಅದ್ಭುತ ಆಟದ ನೆರವಿನಿಂದ ಗುಜರಾತ್ ಪಂದ್ಯದ ಮೇಲೆ ಉತ್ತಮ ರೀತಿಯಲ್ಲಿ ಹಿಡಿತ ಸಾಧಿಸಿತು. ಇದರ ಪರಿಣಾಮ ಪ್ರಥಮಾರ್ಧಕ್ಕೆ ಕೆಲವು ಕ್ಷಣಗಳು ಬಾಕಿ ಇರುವಾಗ ಬೆಂಗಳೂರು ಎರಡನೇ ಬಾರಿಗೆ ಆಲೌಟ್ಗೆ ಗುರಿಯಾಯಿತು. ಪ್ರಥಮಾರ್ಧ ರ್ ೨೧-೧೦ರಲ್ಲಿ ಕೊನೆಗೊಂಡಿತು.
ದ್ವಿತಿಯಾರ್ಧದಲ್ಲೂ ಬೆಂಗಳೂರು ಬುಲ್ಸ್ ಚೇತರಿಸಿಕೊಳ್ಳುವಲ್ಲಿ ವಿಲವಾಯಿತ. ಸಚಿನ್ ಹಾಗೂ ಮೋರೆ ರೈಡಿಂಗ್ನಲ್ಲಿ ಪ್ರ‘ುತ್ವ ಸಾಧಿಸಿದರು. ೨೭ನೇ ನಿಮಿಷದಲ್ಲಿ ಪವನ್ ಬೆಂಗಳೂರು ಪರ ಸೂಪರ್ ರೈಡ್ ಮೂಲಕ ನಾಲ್ಕು ಅಂಕ ಗಳಿಸಿದಾಗ ಚೇತರಿಕೆಯ ಲಕ್ಷಣ ಕಂಡುಬಂದಿತ್ತು. ಆದರೆ ಅಷ್ಟರಲ್ಲೇ ಗುಜರಾತ್ ೩೬-೨೧ ಅಂತರದಲ್ಲಿ ಮೇಲುಗೈ ಸಾಧಿಸಿತ್ತು. ಬದಲಿ ಆಟಗಾರ ಸೋನು ಸೂಪರ್ ರೈಡ್ ಯಶಸ್ಸು ಕಾಣುತ್ತಿದ್ದಂತೆ ಬೆಂಗಳೂರಿನ ಜಯದ ಹಾದಿ ದೂರವಾಯಿತು. ಮೂರನೇ ಬಾರಿಗೆ ಆಲೌಟ್ ಆಗುವ ಮೂಲಕ ಬೆಂಗಳೂರು ೪೨-೨೪ ಅಂತರದಲ್ಲಿ ಸೋಲೊಪ್ಪಿಕೊಂಡಿತು.