ಜಕಾರ್ತ, (ಕ್ಸಿನುವಾ): ಇಲ್ಲಿ ನಡೆದ 2019ರ ಏಷ್ಯಾ ಕಪ್ ಮಹಿಳಾ ಸಾಫ್ಟ್‌ಬಾಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ, ಚೀನಾ ವಿರುದ್ಧ 0-15 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು.
ಹೆಲೋರಾ ಬುಂಗ್ ಕರ್ನೋ ಸಾಫ್ಟ್‌ಬಾಲ್ ಕ್ರೀಡಾಂಗಣದಲ್ಲಿ ಮೇ. 1 ರಿಂದ 7 ರವರೆಗೆ ಈ ಟೂರ್ನಿಯನ್ನು ಆಯೋಜಿಸಲಾಗಿದ್ದು, ಒಟ್ಟು 10 ತಂಡಗಳು ಭಾಗವಹಿಸಿವೆ. ಭಾರತದ ಜತೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಗೂ ಥಾಯ್ಲೆಂಡ್ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿವೆ.
‘ಬಿ’ ಗುಂಪಿನಲ್ಲಿ ಫಿಲಿಪೈನ್ಸ್, ಇಂಡೋನೇಷ್ಯಾ, ಸಿಂಗಾಪುರ, ಚೈನೀಸ್ ತೈಫೆ ಹಾಗೂ ಹಾಂಕಾಂಗ್ ಹಾಗೂ ಚೀನಾ ತಂಡಗಳಿವೆ. ಎರಡೂ ಗುಂಪುಗಳಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್ಸ್‌ಗೆ ತಲುಪಲಿವೆ. ಪ್ಲೇ ಆಫ್ಸ್ ಶನಿವಾರದಿಂದ ಆರಂಭವಾಗಲಿದೆ.
ಈ ಟೂರ್ನಿಯಲ್ಲಿ ಅಗ್ರ ಮೂರು ತಂಡಗಳು ಮಾತ್ರ ಸಾಫ್ಟ್‌ಬಾಲ್ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಅಗ್ರ ಆರು ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.