Saturday, April 20, 2024

ಕಾರ್ಗಿಲ್ ವೀರಚಕ್ರ ವಿಜೇತ ಟ್ರಾಫಿಕ್ ಪೊಲೀಸ್, ಕ್ರಿಕೆಟ್ ವಿಶ್ವಕಪ್ ಗೆದ್ದವ ಪೊಲೀಸ್ ಡಿಸಿಪಿ!!

ಚಂಡೀಗಢ

ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಕೊಡುವ ಗೌರವ, ಇತರ ಸಾಧಕರಿಗೆ ನೀಡುವುದಿಲ್ಲ ಎಂಬುದಕ್ಕೆ ಇಲ್ಲಿ ಮತ್ತೊಂದು ನಿದರ್ಶನವಿದೆ. ಕಾರ್ಗಿಲ್ ಯುದ್ಧದಲ್ಲಿ ಜೀವದ ಹಂಗು ತೊರೆದು ಪಾಕಿಸ್ತಾನದ ಸೇನೆಯ ಉನ್ನತ ಅಧಿಕಾರಿ ಸೇರಿದಂತೆ ಹಲವರನ್ನು ನಿರ್ನಾಮ ಮಾಡಿದ ಯೋಧನಿಗೆ ನಾವು ಕೊಟ್ಟಿದ್ದು ಟ್ರಾಫಿಕ್ ಪೊಲೀಸ್ ಹುದ್ದೆ, ಅದೇ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದ ಆಟಗಾರನಿಗೆ ಡೆಪ್ಯುಟಿ ಪೊಲೀಸ್ ಕಮಿಷನರ್ ಹುದ್ದೆಯನ್ನು ನೀಡಿ ಗೌರವಿಸಿದ್ದೇವೆ.

ಕಾರ್ಗಿಲ್ ವಿಜಯೋತ್ಸವ ದಿನದಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸರಕಾರದ ಕಣ್ಣು ತೆರೆಸುವ ಸುದ್ದಿಯೊಂದನ್ನು ವರದಿ ಮಾಡಿದೆ.
‘ಬಹುಶಃ ನಾನು ತಪ್ಪು ತೀರ್ಮಾನ ಕೈಗೊಂಡಿರಬಹುದು, ನನ್ನ ವೀರ ಚಕ್ರ ಪ್ರಶಸ್ತಿಗೆ ತಕ್ಕುದಾದ ಸ್ಥಾನ ಮಾನ ಸಿಗಲಿಲ್ಲ, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉನ್ನತ ಮಟ್ಟದ ಹುದ್ದೆ ನೀಡಲಾಗಿದೆ. ಪಾಕಿಸ್ತಾನದ ಸೇನೆಯಲ್ಲಿ ನೀಡುವ ಉನ್ನತ ಹುದ್ದೆಯನ್ನು ಗಳಿಸಿದ ಸೇನಾ ಅಧಿಕಾರಿಯನ್ನು ನಾನು ಯುದ್ಧದ ವೇಳೆ ಕೊಂದು ಹಾಕಿದೆ. ಏನೇ ಇರಲಿ, ದೇವರು ದಯಾಳು, ನನ್ನನ್ನು ಬದುಕಿಸಿದ್ದಾನೆ,‘ ಎಂದು ಟೈಗರ್ ಹಿಲ್ ವೀರಚಕ್ರ ವಿಜೇತ ಸತ್ಪಾಲ್ ಸಿಂಗ್ ಕಾರ್ಗಿಲ್ ದಿವಸದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಟಿ೨೦ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ ಜೋಗಿಂದರ್ ಶರ್ಮಾಗೆ ಸರಕಾರ ನೀಡಿದ್ದು, ಪೊಲೀಸ್ ಡೆಪ್ಯೂಟಿ ಕಮಿಷನರ್ ಹುದ್ದೆ.

ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಭವಾನಿಗಢ ಎಂಬ ಪುಟ್ಟ ಪಟ್ಟಣದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸತ್ಪಾಲ್ ಸಿಂಗ್ ಟ್ರಾಫಿಕ್ ವ್ಯವಸ್ಥೆಯನ್ನು ಸುಗಮಗೊಳಿಸುವುದರಲ್ಲಿ ನಿತ್ಯವೂ ತಲ್ಲೀನರು. ಅವರು ಧರಿಸಿರುವ ಸಮವಸ್ತ್ರವನ್ನು ಹತ್ತಿರದಿಂದ ನೋಡಿದಾಗ ಅವರೊಬ್ಬ ಸಾಮಾನ್ಯ ಟ್ರಾಫಿಕ್ ಪೊಲೀಸ್ ಅಲ್ಲ. ಅವರು ಎದೆಯ ಮೇಲೆ ಸೇನೆ ನೀಡಿದ ನಾಲ್ಕು ಸಾ‘ನಾ ಲಕಗಳಿವೆ. ಅದರಲ್ಲಿ ಅರ್ಧ ಕಿತ್ತಳೆ ಅರ್ಧ ನೀಲಿ ಬಣ್ಣದ ಪಟ್ಟಿಯಿಂದ ಕೂಡಿರುವ ವೀರಚಕ್ರ ಗೌರವ ಪದಕವೂ ಸೇರಿದೆ.
೨೦ ವರ್ಷಗಳ ಹಿಂದೆ ಸತ್ಪಾಲ್ ಸಾಮಾನ್ಯ ಸಿಪಾಯಿ ಆಗಿದ್ದರು. ಟೈಗರ್ ಹಿಲ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ತೊಡಗಿಕೊಂಡಿದ್ದರು. ಹೋರಾಟದ ಸಂದರ್ಭದಲ್ಲಿ ಸತ್ಪಾಲ್, ಪಾಕಿಸ್ತಾನದ ಉತ್ತರ ಇನ್ಫ್ಯಾಂಟ್ರಿಯ ಕ್ಯಾಪ್ಟನ್ ಕರ್ನಲ್ ಶೇರ್ ಖಾನ್ ಹಾಗೂ ಇತರ ಮೂವರನ್ನು ಕೊಂದು ಭಾರತದ  ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶೇರ್ ಖಾನ್‌ಗೆ ನಂತರ ಪಾಕಿಸ್ತಾನದ ಅತ್ಯಂತ ಉತ್ಕೃಷ್ಟ ಸೇನಾ ಪ್ರಶಸ್ತಿಯಾದ ನಿಶಾನ್-ಎ- ಹೈದರ್ ಗೌರವವನ್ನು ಮರಣೋತ್ತರವಾಗಿ ನೀಡಲಾಯಿತು.
ಈ ದೇಶದಲ್ಲಿ ಕ್ರಿಕೆಟ್ ಸಿಗುವ ಗೌರವ ಒಬ್ಬ ವೀರ ಯೋಧನಿಗೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ.

Related Articles