Friday, March 29, 2024

ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡ

ಸ್ಪೋರ್ಟ್ಸ್ ಮೇಲ್ ವರದಿ

ಪಂಜಾಬ್‌ನ ಬತಿಂಡಾದಲ್ಲಿ  ಜನವರಿ 27ರರಿಂದ 30ರವರೆಗೆ ನಡೆಯಲಿರುವ 31ನೇ ರಾಷ್ಟ್ರೀಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಪ್ರಕಟಿಸಿದೆ.

ಇತ್ತೀಚಿಗೆ ಮೈಸೂರಿನ ಗಾವಡೆಗೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 2ನೇ ರಾಜ್ಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ತಂಡಗಳ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ನಂತರ 20 ಬಾಲಕ ಹಾಗೂ 20 ಬಾಲಕಿಯರಿಗೆ ರಾಜ್ಯ ನೆಟ್ ಬಾಲ್ ಸಂಸ್ಥೆಯ ಆಶ್ರಯದಲ್ಲಿ ಜನವರಿ 16 ರಿಂದ  23ರವರೆಗೆ ಮಲ್ಲೇಶ್ವರಂನಲ್ಲಿರುವ ಕ್ರೀಡಾಂಗಣದಲ್ಲಿ ತರಬೇತಿ ನೀಡಲಾಯಿತು.
ಬಾಲಕರ ವಿಭಾಗ
ರೋಹಿತ್ ಪಿ.ಡಿ. (ನಾಯಕ, ಎಂಇಎಸ್ ಸ್ಪೋರ್ಟ್ಸ್ ಕ್ಲಬ್), ನವೀನ್ ಕುಮಾರ್ ಎನ್. (ಉಪನಾಯಕ, ಅಜಯ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು), ಮಹದೇವ ನಾಯಕ್ ಜಿ. (ಮೈಸೂರು), ಸುದೀಪ್ ನಾಯಕ್ ಜೆ.ಎಸ್. (ಮೈಸೂರು), ಹರ್ಷ ಕುಮಾರ್ (ಮೈಸೂರು), ತೇಜಸ್ ಕೆ. (ಬೆಂಗಳೂರು ಗ್ರಾಮಾಂತರ), ಸುದೀಪ್ ಕೆ.ಎನ್. (ಬೆಂಗಳೂರು ಗ್ರಾಮಾಂತರ), ಶಮಂತ್ ಕುಮಾರ್ ಶೆಟ್ಟಿ (ಬೆಂಗಳೂರು ಗ್ರಾಮಾಂತರ ), ಅಕ್ಷಯ್ ಶೆಟ್ಟಿ (ಉಡುಪಿ), ಅಭಿಷೇಕ್ ಸಿ. (ಅಜಯ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು), ಸೌರಭ್  ವಿಜಯ್ ಕಾಂಬ್ಳೆ (ಬೆಳಗಾವಿ), ವೆಂಕಟೇಶ್ ಗೌಡ ಜಿ. (ತುಮಕೂರು),
ಕೋಚ್-ಮಂಜುನಾಥ್ ಎಚ್.ಕೆ. ಮ್ಯಾನೇಜರ್-ಬಸವರಾಜ್ ಪಾಟೀಲ್.
ಬಾಲಕಿಯರ ತಂಡ
ದೀಪಾ ಟಿ.ಆರ್. (ನಾಯಕಿ, ಎಂಇಎಸ್ ಸ್ಪೋರ್ಟ್ಸ್ ಕ್ಲಪ್), ಶಾಲಿನಿ ಕೆ. (ಬಿಎಂಎಸ್‌ಸಿಡಬ್ಲ್ಯು, ಉಪನಾಯಕಿ),  ದೀಪಾ ಎಸ್. (ಎಂಇಎಸ್ ಸ್ಪೋರ್ಟ್ಸ್ ಕ್ಲಬ್), ಮನಸ್ವಿ ಎಚ್. (ಎಸ್‌ಎವಿಎಂ), ಬಬಿತಾ ಆರ್ (ಎಂಎಲ್‌ಎಸಿಡಬ್ಲ್ಯು), ಶಿವಲೀಲಾ ಎಸ್. (ಜೀಲ್ ಸ್ಪೋರ್ಟ್ಸ್ ಕ್ಲಬ್), ಧನ್ಯ ಯು ಶೆಟ್ಟಿ (ವಿವಿಎಸ್ ಪಿಯು ಕಾಲೇಜ್), ಯೋಗೇಶ್ವರಿ (ಬೆಂಗಳೂರು ಗ್ರಾಮಾಂತರ), ಸಾಗರಿಕಾ ಕಿರಣ್ (ಕ್ಲೂನಿ ಕಾನ್ವೆಂಟ್), ಹರ್ಶಿನಿ (ಈಗಲ್ಸ್ ಸ್ಪೋರ್ಟ್ಸ್ ಕ್ಲಬ್), ಲೇಖಾ ಎಸ್. (ಬಿಎಂಎಸ್‌ಸಿಡಬ್ಲ್ಯು), ಹರ್ಶಿತಾ ಎಂ. (ವಿವಿಎಸ್ ಪಿಯು ಕಾಲೇಜು),
ಕೋಚ್– ಪವನ್ ಕುಮಾರ್, ಮ್ಯಾನೇಜರ್ -ತನುಶ್ರೀ ಎನ್.

Related Articles