Friday, November 22, 2024

ರಾಜ್ಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಚಾಲನೆ

ಸ್ಪೋರ್ಟ್ಸ್ ಮೇಲ್ ವರದಿ

2ನೇ ರಾಜ್ಯ ಲೀಗ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆ್ ಟೆಕ್ನಾಲಜಿ ಕಾಲೇಜಿನಲ್ಲಿ ಚಾಲನೆ ದೊರೆಯಿತು. ಪುರುಷರ ವಿಭಾಗದಲ್ಲಿ 18 ಹಾಗೂ ವನಿತೆಯರ ವಿಭಾಗದಲ್ಲಿ 15 ತಂಡಗಳು ಪಾಲ್ಗೊಂಡಿದ್ದವು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಅಮೆಚೂರ್ ನೆಟ್ ಬಾಲ್ ಸಂಸ್ಥೆಯ ಉಪಾಧ್ಯಕ್ಷ ಥಾಮಸ್ ಸಿ ನೀಲಿಯಾರ ಮಾತನಾಡಿ, ‘ಎಲ್ಲ ಆಟಗಾರರಿಗೂ ಶುಭವಾಗಲಿ, ಆಟದಲ್ಲಿ ಶಿಸ್ತು ಇರಲಿ, ಸೋಲು ಗೆಲುವು ಇರುವುದೇ, ಓದಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಬೇಕಾದರೆ ದೈಹಿಕವಾಗಿ ಸಮರ್ಥರಾಗಿರಬೇಕಾಗುತ್ತದೆ, ಅದಕ್ಕೆ ಕ್ರೀಡೆ ಪ್ರಮುಖವಾಗುತ್ತದೆ, ‘ ಎಂದರು.
ಎನ್‌ಇಎಫ್ ನ ಹೆಚ್ಚುವರಿ ಕಾರ್ಯದರ್ಶಿ ವೆಂಕಟಪ್ಪ ಮಾತನಾಡಿ, ‘ಜಗತ್ತಿನಾದ್ಯಂತ ನೆಟ್‌ಬಾಲ್ ಕ್ರೀಡೆ ಈಗ ಜನಪ್ರಿಯತೆಗೊಳ್ಳುತ್ತಿದೆ. ಈ ಆಟಕ್ಕೆ ದೈಹಿಕ ಕ್ಷಮತೆಯ ಜತೆಯಲ್ಲಿ ಮಾನಸಿಕ ಫಿಟ್ನೆಸ್ ಕೂಡ ಪ್ರಮುಖವಾಗಿ ಬೇಕಾಗುತ್ತದೆ.‘ ಎಂದರು.
ಗ್ಲೋಬಲ್ ಅಕಾಡೆಮಿ ಆಫ್  ಟೆಕ್ನಾಲಜಿಯ ಪ್ರಾಂಶುಪಾಲ ಡಾ. ರಾಣಾ ಪ್ರತಾಪ್ ರೆಡ್ಡಿ, ಜಿಎಟಿಯ ದೈಹಿಕ ಶಿಕ್ಷಣ ನಿರ್ದೇಶಕ ಸರವಣ ಆರ್., ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಗಿರೀಶ್ ಸಿ ಈ ಸಂದರ್ಭದಲ್ಲಿ ಹಾಜರಿದ್ದರು. ಇದೇ ವೇಳೆ ರಾಜ್ಯ ನೆಟ್‌ಬಾಲ್ ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

Related Articles