ಸ್ಪೋರ್ಟ್ಸ್ ಮೇಲ್ ವರದಿ
ಯು ಮುಂಬಾ ವಾಲಿ ವಿರುದ್ಧ 3-2 ಸೆಟ್ಗಳ ಅಂತರದಲ್ಲಿ ಜಯ ಗಳಿಸಿದ ಬ್ಲ್ಯಾಕ್ ಹಾಕ್ಸ್ ಹೈದರಾಬಾದ್ ತಂಡ ರೂಪೇ ಪ್ರೊ ವಾಲಿಬಾಲ್ ಲೀಗ್ನಲ್ಲಿ ಸೆಮಿಫೈನಲ್ ತಲಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕನ್ನಡಿಗ ಅಶ್ವಲ್ ರೈ ಲೀಗ್ನಲ್ಲಿ 50ನೇ ಅಂಕ ಗಳಿಸಿ ಈ ಸಾಧನೆ ಮಾಡಿದ ಮೂರನೇ ಆಟಗಾರರೆನಿಸಿದರು.
ಯು ಮುಂಬಾ ತಂಡಕ್ಕೆ ಇಲ್ಲಿ ಅದೃಷ್ಟ ಕೈಗೂಡಲಿಲ್ಲ. ನಿರ್ಣಾಯಕ ಸೆಟ್ನಲ್ಲಿ 6-3ರಿಂದ ಮುನ್ನಡೆ ಕಂಡಿದ್ದರೂ, ಹೈದರಾಬಾದ್ನ ಅಬ್ಬರದ ಆಟಕ್ಕೆ ಸೋಲನುಭವಿಸಬೇಕಾಯಿತ. ಮೊದಲ ನಾಲ್ಕು ಸೆಟ್ಗಳಲ್ಲಿ ಇತ್ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು. ಲೀಗ್ನಲ್ಲಿ ಐದು ಪಂದ್ಯಗಳನ್ನಾಡಿರುವ ಹೈದರಾಬಾದ್ ಎರಡು ಜಯ ಗಳಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ನಿರ್ಣಾಯಕ ಸೆಟ್ನಲ್ಲಿ ಹಿನ್ನಡೆ ಕಂಡಾಗ ಹೈದರಾಬಾದ್ ಅನುಭವಿ ಆಟಗಾರ ಅಲೆಕ್ಸಾಂಡರ್ ಅವರನ್ನು ಅಂಗಣಕ್ಕಿಳಿಸಿ ಯಶಸ್ಸು ಕಂಡಿತು, ಕ್ರಾಸ್ ಕೋರ್ಟ್ಸ್ ಸ್ಮ್ಯಾಶ್ ಮೂಲಕ ಅಲೆಕ್ಸಾಂಡರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆ ನಂತರ ಕಾರ್ಸನ್ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿ, ಸತತ ಮೂರು ಅಂಕಗಳನ್ನು ತಂದುಕೊಟ್ಟರು. ಎಡಗೈ ಆಟಗಾರ ಬಲಿಷ್ಠ ಸರ್ವ್ ಯು ಮುಂಬಾದ ಬ್ಯಾಕ್ಕೋರ್ಟ್ನ ಲಯವನ್ನು ಮುರಿಯಿತು. ನಂತರ ನಿರಂತರ ಎರಡು ಸ್ಮ್ಯಾಶ್ ಮೂಲಕ ಕಾರ್ಸನ್ ಹೈದರಾಬಾದ್ನ ಮುನ್ನಡೆಗೆ ಕಾರಣರಾದರು. ಹೈದರಾಬಾದ್ 7-6 ರಲ್ಲಿ ಮುನ್ನಡೆ ಕಂಡಿತು. ಪಂಕಜ್ ಶರ್ಮಾ ಹಾಗೂ ದೀಪಿಶ್ ಕುಮಾರ್ ಅವರು ಎರಡು ಅಂಕಗಳನ್ನು ಗಳಿಸುವ ಮೂಲಕ 11-11ರಲ್ಲಿ ಸಮಮಬಲಗೊಂಡಿದ್ದ ಪಂದ್ಯ 13-11ಕ್ಕೆ ತಿರುಗಿತು. ನಂತರ ರೋಹಿತ್ ಶರ್ಮಾ ಅವರ ಮಿಂಚಿನ ಆಟ ತಂಡಕ್ಕೆ ಜಯ ತಂದುಕೊಟ್ಟಿತು.
ಆರು ತಂಡಗಳ ಲೀಗ್ನಲ್ಲಿ ಹೈದರಾಬಾದ್ ಈಗ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿದೆ. ಯು ಮುಂಬಾ ಒಂದೂ ಜಯ ಕಾಣದೆ ಕಂಗಾಲಾಯಿತು. ಯು ಮುಂಬಾದ ಆಟಗಾರರು ಉತ್ತಮವಾಗಿ ಆಡಿದರೂ ಲಿತಾಂಶ ಮಾತ್ರ ಸೋಲಿನಲ್ಲಿ ಕೊನೆಗೊಂಡಿತು. ಅಂತಿಮವಾಗಿ ಬ್ಲ್ಯಾಕ್ ಹಾಕ್ಸ್ ಹೈದರಾಬಾದ್ 13-15, 15-11, 7-15, 15-14, 15-11 ಅಂತರದಲ್ಲಿ ಜಯ ಗಳಿಸಿತು. ಇಂದು ಕ್ಯಾಲಿಕಟ್ ಹಾಗೂ ಅಹಮದಾಬಾದ್ ಡಿೆಂಡರ್ಸ್ ನಡುವೆ ಪಂದ್ಯ ನಡೆಯಲಿದೆ.