Tuesday, December 3, 2024

ಪಾಕಿಸ್ತಾನಕ್ಕೆ ಬೆಂಗಳೂರಿನಲ್ಲಿ “ಲಕ್‌ ವರ್ಥ್!”‌

ಬೆಂಗಳೂರು: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮಳೆಯಿಂದಾಗಿ ಡಕ್‌ವರ್ಥ್‌ ಲೂಯಿಸ್‌ ಸ್ಟರ್ನ್‌ (ಡಿಎಲ್‌ಎಸ್‌) ನಿಯಮಾನುಸಾರ 21 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. Pakistan beat New Zealand by 21 runs on DLS method.

ನ್ಯೂಜಿಲೆಂಡ್‌ ನೀಡಿದ 402 ರನ್‌ಗಳ ಬೃಹತ್‌ ಮೊತ್ತವನ್ನು ಬೆಂಬತ್ತಿದ ಪಾಕಿಸ್ತಾನದ ಪರ ಫಖರ್‌ ಜಮಾನ್‌ 126* ಹಾಗೂ ಬಾಬರ್‌ ಅಜಾಮ್‌ 66+ ಅವರ ಮಿಂಚಿನ ಬ್ಯಾಟಿಂಗ್‌ ನೆರವಿನಿಂದ ಉತ್ತಮ ಸ್ಥಿತಿ ತಲುಪಿತ್ತು. ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಅಷ್ಟರಲ್ಲೇ ಪಾಕಿಸ್ತಾನ ಡಿಎಲ್‌ಎಸ್‌ ನಿಯಮದ ಪ್ರಕಾರ ಕಿವೀಸ್‌ಗಿಂತ 21 ರನ್‌ ಮುನ್ನಡೆ ಕಂಡಿತ್ತು. ಆ ಮೂಲಕ ಅಮೂಲ್ಯ ಜಯ ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಪಾಕಿಸ್ತಾನದ ಬೌಲರ್‌ಗಳು ಯಶಸ್ಸು ಕಾಣುವಲ್ಲಿ ವಿಫಲರಾದರು. ರಾಚಿನ್‌ ರವೀಂದ್ರ 108 ರನ್‌ ಗಳಿಸಿ ವಿಶ್ವಕಪ್‌ನಲ್ಲಿ ಮೂರನೇ ಶತಕ ದಾಖಲಿಸಿದರು. ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಕೇನ್‌ ವಿಲಿಯಮ್ಸನ್‌ 95 ರನ್‌ ಗಳಿಸುವುದರ  ಮೂಲಕ ಕಿವೀಸ್‌ 401 ರನ್‌ ಗಳಿಸಿ ಕಠಿಣ ಸವಾಲು ನೀಡಿತು.

ಈ ಜಯದೊಂದಿಗೆ ಪಾಕಿಸ್ತಾನ ಐದನೇ ಸ್ಥಾನ ತಲುಪಿದರೂ ರನ್‌ ಸರಾಸರಿಯಲ್ಲಿ ಕವೀಸ್‌ಗಿಂತ ಹಿಂದೆ ಬಿದ್ದಿದೆ. ಮುಂದಿನ ಪಂದ್ಯಗಳಲ್ಲಿ ಜಯದ ಜೊತೆಯಲ್ಲಿ ರನ್‌ ಸರಾಸರಿಯನ್ನು ಕಾಯ್ದುಕೊಳ್ಳುವುದು ಈ ತಂಡಗಳಿಗೆ ಅನಿವಾರ್ಯವಾಗಿದೆ. ವೇಗದ ಶತಕ ಸಿಡಿಸಿದ ಫಖರ್‌ ಜಮಾನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles