ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ತೋರುತ್ತಿರುವ ಕಳಪೆ ಪ್ರದರ್ಶನವನ್ನು ಕಂಡ ಅಲ್ಲಿಯ ನಟಿ ಸೆಹರ್ ಶಿನ್ವಾರಿ Sehar Shinwari ಬಾಬರ್ ಅಜಾಮ್ ಪಡೆಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿದ್ದಾಳೆ. Protest against Pakistan Cricket team
ಕ್ರಿಕೆಟಿಗರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಈ ನಟಿ ಹಿಂದೊಮ್ಮೆ ಭಾರತ ಸೋತರೆ ನಿನ್ನನ್ನೇ ಮದುವೆಯಾಗುವೆ ಎಂದು ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಸವಾಲು ಹಾಕಿದ್ದಳು. ಭಾರತ ಗೆದ್ದಿತ್ತು. ಆದರೆ ಕೊಟ್ಟ ಆಫರ್ ಮಾತ್ರ ಆ ಕ್ರಿಕೆಟ್ ಅಭಿಮಾನಿಗೆ ಸಿಗಲೇ ಇಲ್ಲ.
ಪಾಕ್ ತಂಡ ಸೋತಾಗಲೆಲ್ಲ ಹತಾಶೆಗೊಳಗಾಗುವ ಈ ನಟಿ, ಏನಾದರೊಂದು ಹೇಳಿಕೆ ನೀಡಿ ಸುಮ್ಮನಾಗುತ್ತಿದ್ದಳು. “ಪಾಕ್ ತಂಡದ ಆಟಗಾರರಿಗೆ ಧಾರ್ಮಿಕ ಹಾಗೂ ರಾಜಕೀಯ ಹೇಳಿಕೆಗಳನ್ನು ನೀಡಲು ಮಾತ್ರ ಗೊತ್ತು. ಅವರಿಗೆ ಉತ್ತಮ ಪ್ರದರ್ಶನ ನೀಡಲು ಬರುತ್ತಿಲ್ಲ. ಬಾಬರ್ ಅಜಾಮ್ ನಾಯಕತ್ವದ ಇಡೀ ತಂಡ ರಾಜೀನಾಮೆ ನೀಡುವವರೆಗೂ ನಾವು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ,” ಎಂದು ನಟಿ ತನ್ನ X ಖಾತೆಯಲ್ಲಿ ಹೇಳಿಕೊಂಡಿದ್ದಾಳೆಂದು ವರದಿಯಾಗಿದೆ.
ಏಷ್ಯಾಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಸೋತಾಗಲೂ ಬಾಬರ್ ಅಜಾಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿಕೆ ನೀಡಿದ್ದಳು.