ಮುಂಬಯಿ: ಪಾಕಿಸ್ತಾನ ತಂಡ ವಿಶ್ವಕಪ್‌ನಿಂದ ನಿರ್ಗಮಿಸುತ್ತಿದೆ. ಭಾರತದ ಪಿಚ್‌ನಲ್ಲಿ ಈ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿದೆ. ಏಕೆಂದರೆ ಇಲ್ಲಿಯ ಪಿಚ್‌ಗಳಲ್ಲಿ ಆಡಿದ ಅನುಭವವಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ನಡುವೆ ಮತ್ತು ಆಲ್‌ಲೈನ್ ಕಾಮೆಂಟರಿಗಳಲ್ಲಿ ಪಾಕ್ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವ ಅವಕಾಶ ಸಿಕ್ಕಿರುತ್ತಿದ್ದರೆ ಇನ್ನೂ ಉತ್ತಮವಾಗಿ ಪ್ರದರ್ಶನ ನೀಡಿರುತ್ತಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಪಾಕಿಸ್ತಾನದ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ನೀಡದಿರುವುದಕ್ಕೆ ಕಾರಣವೂ ಬಲವಾಗಿದೆ. Why Pakistan cricketers not playing in Indian Premier League?
2008 ನವೆಂಬರ್ 26ರ ಮುಂಬಯಿ ದಾಳಿಯನ್ನು ಭಾರತೀಯರು ಮರೆಯುವಂತಿಲ್ಲ, ಹತ್ತು ಮಂದಿ ಭಯೋತ್ಪಾದಕರು ಮುಂಬಯಿಯ ತಾಜ್ ಹೊಟೇಲ್‌ನ ಮೇಲೆ ದಾಳಿ ಮಾಡಿ ಅಮಾನುಷವಾಗಿ ನೂರಾರು ಭಾರತೀಯ ಪ್ರಜೆಗಳು, ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಈ ಕಹಿ ನೆನಪು ಭಾರತೀಯರನ್ನು ಯಾವುದೇ ಕಾರಣಕ್ಕೂ ಮರೆಯಬಲು ಬಿಡದು. ಅಂದು ಐಪಿಎಲ್ ಆಡಳಿತ ಮಂಡಳಿ ಪಾಕ್ ಆಟಗಾರರಿಗೆ ಐಪಿಎಲ್‌ನಲ್ಲಿ ಆಡುವುದಕ್ಕೆ ನಿಷೇಧ ಹೇರಿತ್ತು. ಆದರೂ 2012-13ರಲ್ಲಿ ಪಾಕಿಸ್ತಾನ ತಂಡ ಭಾರತ ಪ್ರವಾಸವನ್ನು ಕೈಗೊಂಡಿತ್ತು. ಪಾಕಿಸ್ತಾನದ ಆಟಗಾರರು ಇತರ ಟೂರ್ನಿಗಳಲ್ಲಿ ಎದುರಾದರೆ ಭಾರತದ ಆಟಗಾರರು ಪ್ರೀತಿಯಿಂದ ನೋಡುತ್ತಾರೆ. ಆದರೆ ಐಪಿಎಲ್‌ನಲ್ಲಿ ಮಾತ್ರ ಆಡುವಂತಿಲ್ಲ. ಆರಂಭದಲ್ಲಿ ಕೆಲವು ಪಾಕ್ ಆಟಗಾರರು ಐಪಿಎಲ್‌ನಲ್ಲಿ ಆಡಿದ್ದರು. ಶೊಯೇಬ್ ಅಖ್ತರ್, ಶಾಹೀದ್ ಆಫ್ರಿದಿ, ಶೊಯೇಬ್ ಮಲಿಕ್, ಉಮರ್ ಗುಲ್, ಮೊಹಮ್ಮದ್ ಆಸಿಫ್, ಕಮ್ರಾನ್ ಅಕ್ಮಲ್ ಮತ್ತು ಸೊಹೆಲ್ ತನ್ವೀರ್ ಮೊದಲ ಆವೃತ್ತಿಯಲ್ಲಿ ಆಡಿದ್ದರು. ಆದರೆ ಮುಂಬಯಿ ಘಟನೆಯ ನಂತರ ಆಡುವಂತಿಲ್ಲ.
ಭಾರತ ಟೆನಿಸ್ ತಂಡ ಈ ಬಾರಿಯ ಡೇವಿಸ್ ಕಪ್ ಟೆನಿಸ್ ಚಾಂಪಿಯನ್‌ಷಿಪ್ ಆಡಲು ಪಾಕಿಸ್ತಾನಕ್ಕೆ ತೆರಳಬೇಕಿದೆ. ಆದರೆ ಭಾರತೀಯರು ಭದ್ರತೆಯ ಆಧಾರದ ಮೇಲೆ ಪಾಕ್ ನೆಲದಲ್ಲಿ ಆಡಲು ನಿರಾಕರಿಸಿದ್ದಾರೆ. ಐಟಿಎಫ್ ಡೆವಿಸ್ ಕಪ್ ನಿಯಮದ ಪ್ರಕಾರ ಪಾಕಿಸ್ತಾನ ವೇಳಾಪಟ್ಟಿಯನ್ನು ಬದಲಾಯಿಸದು, ಪಾಕಿಸ್ತಾನದಲ್ಲೇ ಭಾರತ ಆಡಬೇಕು ಎಂದು ಪಟ್ಟು ಹಿಡಿದಿದೆ. ಭಾರತ ಕ್ರಿಕೆಟ್ ತಂಡವೂ ಏಷ್ಯಾಕಪ್ ಪಂದ್ಯಗಳನ್ನು ಪಾಕಿಸ್ತಾನ ನೆಲದಲ್ಲಿ ಆಡಲು ನಿರಾಕರಿಸಿತ್ತು. ಇದರಿಂದಾಗಿ ಹೆಚ್ಚಿನ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು.