Sportsmail Desk: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದು ಚಿನ್ನ ಗೆದ್ದಿರುವ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರಿಗೆ ಅಭಿನಂದನೆ ಸಲ್ಲಿಸುತ್ತ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಪ್ರಕಟಿಸಿರುವ ಫೋಟೋ ನೋಡಿ ಕ್ರೀಡಾ ಜಗತ್ತು ನಿಬ್ಬೆರಗಾಗಿದೆ. ಚಿತ್ರದಲ್ಲಿರುವ ಮೊತ್ತ ನೋಡುತ್ತಲೇ ಪಾಕಿಸ್ತಾನದ ಆದಾಯ ತೆರಿಗೆ ಅಧಿಕಾರಿಗಳು ಅರ್ಷದ್ ನದೀಮ್ ಅವರ ಮನೆಯ ಬಾಗಿಲಲ್ಲಿ ಕಾಯುತ್ತಿದ್ದಾರೆ. Pakistan Prime Minister insulted gold medalist Arshad Nadeem.
ಪಾಕಿಸ್ತಾನಕ್ಕೆ ಒಲಿಂಪಿಕ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ತಂದಿತ್ತ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅರ್ಷದ್ ನದೀಮ್ ಅವರ ಈ ಸಾಧನೆಗೆ ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಟೀಟರ್‌ನಲ್ಲಿ ಅಭಿನಂದನೆ ಸಲ್ಲಿಸುತ್ತ ಮೂರು ತಿಂಗಳ ಹಿಂದಿನ ಫೋಟೋವನ್ನು ಪ್ರಕಟಿಸಿದ್ದಾರೆ. ಅದು 10 ಲಕ್ಷ ಪಾಕ್ ರೂ. ಗಳ ಮೊತ್ತದ ಚೆಕ್ ನೀಡಿದ್ದ ಫೋಟೋ ಅದಾಗಿತ್ತು. ಈ ಫೋಟೋ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅಭಿನಂದನೆ ಸಲ್ಲಿಸುವಾಗ ದೇಶದ ಪ್ರಧಾನಿ ತನ್ನ ಹಿಂದಿನ ಫೋಟೋವನ್ನು ಪ್ರಕಟಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನೀಷ್ ಕನೇರಿಯಾ, ಪಾಕ್ ಪ್ರಧಾನಿಯ ಈ ವರ್ತನೆಯನ್ನು ನೋಡಿ ತಕ್ಕ ತಿರುಗೇಟು ನೀಡಿದ್ದಾರೆ. “ಪ್ರಧಾನಿಯವರೇ ನೀವು ಅಭಿನಂದನೆ ಸಲ್ಲಿಸಿರುವುದು ಖುಷಿ, ಆದರೆ ಆ ಚಿತ್ರವನ್ನು ಮೊದಲು ಡಿಲಿಟ್ ಮಾಡಿ. ಅದು ವಿಮಾನ ಟಿಕೆಟ್ ಖರೀದಿಗೂ ಸಾಕಾಗುವುದಿಲ್ಲ. ಇದು ನೀವು ಅರ್ಷಾದ್ ಮತ್ತು ದೇಶಕ್ಕೆ ಮಾಡುವ ಅವಮಾನ,” ಎಂದಿದ್ದಾರೆ.
ಈ ನಡುವೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಅರ್ಷದ್‌ಗೆ 10 ಕೋಟಿ ಪಾಕ್ ರೂಪಾಯಿಗಳನ್ನು ಪ್ರಕಟಿಸಿದ್ದಾರೆ.