Thursday, October 31, 2024

ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ

ಏಜೆನ್ಸಿಸ್ ಜಕಾರ್ತಾ 

ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ,  6 ಬೆಳ್ಳಿ  8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.

ಪುರುಷರ ಜಾವೆಲಿನ್ ಎಸೆತದಲ್ಲಿ ಸಂದೀಪ್ ಚೌಧರಿ, ಈಜಿನಲ್ಲಿ ಸುಯಶ್  ಜಾಧವ್  ಹಾಗೂ ವನಿತೆಯರ 1500 ಮೀ  ಓಟದಲ್ಲಿ ಕರ್ನಾಟಕದ ರಾಜು ರಕ್ಷಿತಾ ಚಿನ್ನದ ಸಾಧನೆ ಮಾಡಿದ್ದಾರೆ.
ಪುರುಷರ ಪವರ್ ಲಿಫ್ಟಿಂಗ್ ನಲ್ಲಿ ಕರ್ನಾಟಕದ ಫರ್ಮಾನ್ ಭಾಷಾ ಬೆಳ್ಳಿ ಪದಕ ಗೆದ್ದಿದ್ದಾರೆ. ಈಜಿನಲ್ಲಿ ದೇವಾಂಶಿ ಸಜಿತ, ಶೂಟಿಂಗ್ ನಲ್ಲಿ ಮನೀಶ್ ನರ್ವಾಲ್, ವನಿತೆಯರ ಪವರ್ ಲಿಫ್ಟಿಂಗ್ ನಲ್ಲಿ ಕರ್ನಾಟಕದ ಸಕೀನಾ ಖಾತುನ್, ಜಾವೆಲಿನ್ ನಲ್ಲಿ ರಮ್ಯಾ ನಗರನೈ,  1500 ಮೀ  ಓಟದಲ್ಲಿ  ರಾಧಾ ವೆಂಕಟೇಶ್ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಬ್ಯಾಡ್ಮಿಂಟನ್ ತಂಡ ವಿಭಾಗದಲ್ಲಿ ಸುಕಾಂತ್ ಕದಮ್, ಸುಹಾಸ್ ಲಲಿನಕೆರೆ ಯತಿರಾಜ್, ತರುಣ್, ರಾಕೇಶ್ ಪಾಂಡೆ, ಚಿರಾಗ್ ಹಾಗೂ ರಾಜ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.
ಪವರ್ ಲಿಫ್ಟಿಂಗ್ ನಲ್ಲಿ ಪರಂಜೀತ್, ೨೦೦ ಮತ್ತು ೫೦ ಮೀ. ಫ್ರೀಸ್ಟೈಲ್ ನಲ್ಲಿ  ಸುಯಶ್ ಜಾಧವ್ , ಶೂಟಿಂಗ್ ನಲ್ಲಿ ಸಿಂಘರಾಜ್, ಈಜಿನಲ್ಲಿ ದೇವಾಂಶಿ ಸತೀಜಾ, ಸ್ವಪ್ನಿಲ್ ಪಾಟೀಲ್ ಹಾಗೂ ಜಾವೆಲಿನ್ ಎಸೆತದಲ್ಲಿ ದೀಪಾ ಮಲಿಕ್ ಕಂಚಿನ ಪದಕ ಗೆದ್ದಿದ್ದಾರೆ.
ಕರ್ನಾಟಕದ ರಕ್ಷಿತಾ ರಾಜು 1500 ಮೀ  ಓಟದಲ್ಲಿ  ಚಿನ್ನ ಗೆಲ್ಲಲು ಭರತ್ ಕೆ ವಿ ಸಹ ಓಟಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅದೇ ರೀತಿ ರಾಧಾ ವೆಂಕಟೇಶ್ ಬೆಳ್ಳಿ ಗೆಲ್ಲುವಲ್ಲಿ ರಾಹುಲ್ ಬಿ. ಸಹ ಓಟಗಾರರಾಗಿರುತ್ತಾರೆ.

Related Articles