Thursday, September 19, 2024

ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳ ಅರಿವು ಹಳ್ಳಿಗಳಿಗೂ ತಲುಪಲಿ

ಬೆಂಗಳೂರು: ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ನೆರವು ಬೇಕಿದೆ. ಕರ್ನಾಟಕದ ಪ್ಯಾರಾಲಿಂಪಿಯನ್‌ ಎಚ್‌.ಎನ್‌. ಗಿರೀಶ್‌ ಲಂಡನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಿನಿಂದ ರಾಜ್ಯದ ದಿವ್ಯಾಂಗರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನೆರವಾಗು ರೀತಿಯಲ್ಲಿ ರಾಜ್ಯದ ದಿವ್ಯಾಂಗರ ಕ್ರೀಡಾ ಸಂಘಟನೆಗಳು ಕಾರ್ಯನಿರ್ವಹಿಸಬೇಕಾಗಿದೆ, ಈ ಎಲ್ಲ ವಿಷಯಗಳೂ ದಾಖಲೆಗಳಲ್ಲಿ ಇದ್ದಿರಬಹುದು, ಆದರೆ ಕಾರ್ಯರೂಪಕ್ಕೆ ಬರಬೇಕಾಗಿದೆ. Paralympic sports awareness should done in rural Karnataka.  

ಬೆಂಗಳೂರಿನಲ್ಲಿ ದಿವ್ಯಾಂಗರ ಕ್ರೀಡಾ ಸಂಘಟನೆಗಳು ಇರುವುದರಿಂದ ಅಲ್ಲಿಯೇ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ. ಬೆಂಗಳೂರಿನ ಸುತ್ತಮುತ್ತಲು ಇರುವ ಕ್ರೀಡಾಪಟುಗಳು ಕಷ್ಟಪಟ್ಟು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಹಳ್ಳಿಯಲ್ಲಿರುವ ದಿವ್ಯಾಂಗರು ಇದರಿಂದ ವಂಚಿತರಾಗುವುದು ಸಹಜ,

ಇದನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ, ದಿವ್ಯಾಂಗರ ಇಲಾಖೆ ಹಾಗೂ ದಿವ್ಯಾಂಗರ ಕ್ರೀಡಾ ಸಂಘಟನೆಗಳು ಒಂದಾಗಿ ರಾಜ್ಯದಲ್ಲಿರುವ ಅಂಗವಿಕಲರ ಮಾಹಿತಿಯನ್ನು ಸಂಗ್ರಹಿಸಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇರುವ ಕ್ರೀಡಾಪಟುಗಳಿಗೆ ಈ ಬಗ್ಗೆ ಮಾಹಿತಿ ಸಿಗುವಂತೆ ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ದಿವ್ಯಾಂಗರ ಸಮನ್ವಯಕಾರರು ಸರಕಾರಕ್ಕೆ ಮಾಹಿತಿಯನ್ನು ನೀಡಬೇಕು. ಆಯ್ಕೆ ಟ್ರಯಲ್ಸ್‌, ತರಬೇತಿ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಪ್ರತಿಯೊಬ್ಬ ಅಂಗವಿಕಲರಿಗೂ ಆ ಮಾಹಿತಿ ಸಿಗುವಂತಾಗಬೇಕು. ಕ್ಲಾಸಿಫಿಕೇಷನ್‌ ಆಧರಿಸಿ, ದೈಹಿಕ ಸಾಮರ್ಥ್ಯವನ್ನು ಗಮನಿಸಿ ಅವರಿಗೆ ಸೂಕ್ತವಾದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಬೇಕು. ಪ್ರತಿಯೊಂದು ಹಳ್ಳಿಯಲ್ಲಿಯೂ ಪ್ಯಾರಾಲಿಂಪಿಕ್ಸ್‌ ಕ್ರೀಡೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ದಿವ್ಯಾಂಗರು: ಕರ್ನಾಟಕದಲ್ಲಿ ಒಟ್ಟು 13.34 ಲಕ್ಷ ದಿವ್ಯಾಂಗರು ಇದ್ದಾರೆ, ಭಾರತದ ಒಟ್ಟು ದಿವ್ಯಾಂಗರ ಸಂಖ್ಯೆಯಲ್ಲಿ ಶೇ, 69ರಷ್ಟು ಜನರು ಹಳ್ಳಿಯಲ್ಲಿದ್ದಾರೆ. ಇದರಲ್ಲಿ ವಯಸ್ಸಿನ ಆಧಾರದ ಮೇಲೆ ಗುರುತಿಸಿ ಅವರಿಗೆ ಪ್ಯಾರಾಲಿಂಪಿಕ್ಸ್‌ ಬಗ್ಗೆ ಮಾಹಿತಿ ನೀಡಬೇಕು. 10 ರಿಂದ 20 ವರ್ಷ ವಯೋಮಿತಿಯ ದಿವ್ಯಾಂಗರನ್ನು ಗುರುತಿಸುವ ಕೆಲಸವನ್ನು ಮಾಡಬೇಕು.

ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳನ್ನೇ ಆಯ್ಕೆ ಮಾಡಿ: ಕ್ರೀಡೆಗಳನ್ನು ಆಯ್ಕೆ ಮಾಡುವಾಗ ದಿವ್ಯಾಂಗರು ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳನ್ನೇ ಆಯ್ಕೆ ಮಾಡಿಕೊಳ್ಳಿ. ಏಕೆಂದರೆ ಸರಕಾರಕ್ಕೆ ನೆರವು ನೀಡಲು ಅವಕಾಶ ಇರುವುದು ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳಿಗೆ ಮಾತ್ರ. ಇನ್ನಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬಹುದು, ಆದರೆ ಇತರ ದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಾಗ ಹಣಕ್ಕಾಗಿ ಇತರರ ನೆರವನ್ನು ಬಯಸಬೇಕಾಗುತ್ತದೆ. ಕೆಲವು ಕ್ರೀಡಾ ಸಂಘಟನೆಗಳು ಸರಕಾರದಲ್ಲಿ ನೋಂದಾವಣೆ ಮಾಡಿಕೊಂಡಿರುವುದಿಲ್ಲ, ಇದರಿಂದಾಗಿ ಸರಕಾರ ಸುಲಭವಾಗಿ ನೆರವು ನೀಡುವುದಿಲ್ಲ. ಮಾನವೀಯ ನೆಲೆಯಲ್ಲಿ ಸಹಾಯ ಸಿಕ್ಕರೆ ಬೇರೆ ಮಾತು. ಉದ್ಯೋಗ, ನಗದು ಬಹುಮಾನ ಹಾಗೂ ಪ್ರಶಸಸ್ತಿಗಳನ್ನು ನೀಡುವಾಗ ಸರಕಾರ ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳನ್ನೇ ಪರಿಗಣಿಸುವುದು. ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ ಕೂಡ ಈ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗುತ್ತದೆ.

Related Articles