Sunday, January 5, 2025

ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸರಿಯೇ?

ಬೆಂಗಳೂರು: ವೈಫಲ್ಯಗಳು ಆಟದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಬರುತ್ತವೆ, ಹಾಗಂತ ಆ ವ್ಯಕ್ತಿಯ ಹಿಂದಿನ ಸಾಧನೆಗಳನ್ನು ಮರೆತು ತಿರಸ್ಕರಿಸುವುದು ಸೂಕ್ತವಲ್ಲ.ಭಾರತ ತಂಡದಲ್ಲಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದ್ವೇಷಗಳು ತಂಡವನ್ನು ಈ ಸ್ಥಿತಿಗೆ ತಲುಪಿಸಿರುವುದು ಸ್ಪಷ್ಟ. Personal grudges effects Indian cricket team.

ಗೌತಮ್‌ ಗಂಭೀರ್‌ ಪ್ರಧಾನ ಕೋಚ್‌ ಆದಾಗಿನಿಂದ ಭಾರತ ತಂಡದ ಪ್ರದರ್ಶನ ಕಳಪೆಯಾಗಲಾರಂಭಿಸಿತು. ಗಂಭೀರ್‌ ಅವರು ಕೋಚ್‌ ಆಗುವುದು ಹೆಚ್ಚಿನ ಆಟಗಾರರಿಗೆ ಇಷ್ಟವಿರಲಿಲ್ಲ. ಇದು ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರಿದೆ. ಸಾಕಷ್ಟು ವರ್ಷಗಳ ಕಾಲ ಆಡಿದ ಆಟಗಾರರಿಗೆ ಗೌರವಯುತವಾಗಿ ನಿವೃತ್ತಿ ಘೋಷಿಸಲು ಅವಕಾಶ ನೀಡುತ್ತಿಲ್ಲ. ಅನುಭವಿ ಸ್ಪಿನ್‌ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ನಿವೃತ್ತಿಯ ಹಿಂದೆಯೂ ಸಾಕಷ್ಟು ಚರ್ಚೆಯಾಗಿದೆ.

ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ ಎಂಬ ವರದಿ ಬಂದಿದೆ. ಅವರ ಸ್ಥಾನದಲ್ಲಿ ಶುಭ್ಮನ್‌ ಗಿಲ್‌ ಅವರು ಕೆಎಲ್‌ ರಾಹುಲ್‌ ಅವರೊಂದಿಗೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ರೋಹಿತ್‌ ಒಬ್ಬ ಸಾಮಾನ್ಯ ಆಟಗಾರನಾಗಿದ್ದರೆ ಈ ರೀತಿಯ ತೀರ್ಮಾನ ಕೈಗೊಂಡರೆ ಆ ಬಗ್ಗೆ ಚರ್ಚೆ ನಡೆಯುತ್ತಿರಲಿಲ್ಲ. ಆದರೆ ರೋಹಿತ್‌ ಪ್ರಸಕ್ತ ತಂಡದ ನಾಯಕ. ಅವರು ಬ್ಯಾಟಿಂಗ್‌ನಲ್ಲಿ ಸದ್ಯ ವೈಫಲ್ಯ ಕಾಣುತ್ತಿರುವುದು ನಿಜ, ಜೊತೆಯಲ್ಲಿ ಅವರು ನಿವೃತ್ತಿಯ ಅಂಚಿನಲ್ಲಿರುವುದು ಸ್ಪಷ್ಟ. ಈ ಕಾರಣಕ್ಕಾಗಿ ಅವರಿಗೆ ಕೊನೆಯ ಪಂದ್ಯವನ್ನು ಆಡಲು ಅವಕಾಶ ನೀಡಬೇಕಾಗಿತ್ತು ಎಂಬ ಮಾತು ಕೇಳಿ ಬಂದಿದೆ. ಐಪಿಎಲ್‌ ಚಾಂಪಿಯನ್‌ ಪಟ್ಟ ಗೆದ್ದುಕೊಟ್ಟರೂ ಅವರನ್ನು ನಾಯಕನ ಸ್ಥಾನದಿಂದ ಮುಂಬೈ ಇಂಡಿಯನ್‌ ಕೆಳಗಿಳಿಸಿತು. ಈಗ ಟೆಸ್ಟ್‌ನಿಂದ ನಿವೃತ್ತಿ ಘೋಷಿಸುವುದಕ್ಕೆ ಮೊದಲೇ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು, ಮಾತ್ರವಲ್ಲ ಆಡುವ 11 ಆಟಗಾರರಲ್ಲಿ ಸ್ಥಾನ ನಿಡದಿರುವ ತೀರ್ಮಾನ ಕೈಗೊಳ್ಳಲಾಯಿತು. ತಂಡ ಕೊನೆಯ ಪಂದ್ಯವನ್ನು ಗೆಲ್ಲುವುದು ಮತ್ತು ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡುವ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಲು ಈ ತೀರ್ಮಾನ ಕೈಗೊಳ್ಳಲಾಯಿತು ಎಂಬುದು ಕ್ರಿಕೆಟ್‌ ಪಂಡಿತರ ನಿಲುವು.

ಏನೇ ಆದರೂ ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಲಿದ್ದಾರೆ. ಆದರೆ ಅವರಿಗೆ ಗೌರವಯುತವಾಗಿ ನಿರ್ಗಮಿಸಲು ಅವಕಾಶ ನೀಡಬೇಕಾಗಿತ್ತು.

Related Articles