Thursday, November 21, 2024

ಬೆಂಗಳೂರಿನಲ್ಲಿ ಕಂಬಳ ತಡೆಯಲು ಕೋರ್ಟ್‌ಗೆ ಮನವಿ!

ಬೆಂಗಳೂರು:‌ ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕ್ರೀಡೆಯನ್ನು ನಡೆಸದಂತೆ ತಡೆಯೊಡ್ಡಲು PETA (People for Ethical Treatment of Animals) ಸಂಸ್ಥೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ ಎಂದು ಬಾರ್‌ ಆಂಡ್‌ ಬೆಂಚ್‌ ವರದಿ ಮಾಡಿದೆ. PETA urges Karnataka High Court to halt Kambala race in Bangalore

ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಕಂಬಳ ಉತ್ಸವ ಜಾಗತಿಕ ಮಟ್ಟದಲ್ಲಿ ಆಕರ್ಷಣೆ ಪಡೆದಿತ್ತು. ಕರಾವಳಿಯ ಈ ಜಾನಪದ ಕ್ರೀಡೆ ಅನಾದಿ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಈ PETA ಸಂಸ್ಥೆ ಈ ಕೋಣಗಳ ಓಟದ ಸಂದರ್ಭದಲ್ಲಿ ಅವುಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದೆ.

ಕಂಬಳಕ್ಕೆ ಬಳಸುವ ಕೋಣಗಳಿಗೆ ಹೊಡೆಯಲಾಗುತ್ತಿದೆ ಎಂಬುದು ದೂರು ನೀಡಿರುವವರ ವಾದ. ಆದರೆ ಕಂಬಳಕ್ಕೆ ಬಳಸುವ ಕೋಣಗಳನ್ನು ಯಾವ ರೀತಿ ಸಾಕುತ್ತಾರೆ. ಎಷ್ಟು ಪ್ರೀತಿಯಿಂದ ಸಾಕುತ್ತಾರೆ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ.

ಕಂಬಳಕ್ಕೆ ಐತಿಹಾಸಿಕ ಹಿನ್ನಲೆ ಇದೆ. ರಾಜರ ಆಳ್ವಿಕೆಯ ಕಾಲದಿಂದಲೂ ಕಂಬಳ ನಡೆಯುತ್ತಿದೆ. ಇದರ ಹಿಂದೆ ಮನರಂಜನೆ ಇದೆಯೇ ಹೊರತು ಹಿಂಸೆಯ ಉದ್ದೇಶ ಇರುವುದಿಲ್ಲ. ತನ್ನ ಕೋಣ ವೇಗವಾಗಿ ಓಡಲಿ ಎಂದು ಹಿಂದೆ ಓಡುವ ಓಟಗಾರ ಒಂದು ಪೆಟ್ಟು ಹೊಡೆಯುವುದಿದೆ. ಅದರ ಉದ್ದೇಶ ಹಿಂಸೆ ನೀಡುವುದಾಗಿರುವುದಿಲ್ಲ. ನಾಟಿ ಮಾಡಿ ದಣಿದ ಕೆಲಸಗಾರರಿಗೆ ನಾಟಿ ಮುಗಿದ ನಂತರ ಸಿಗುವ ಮನರಂಜನೆ ಇದಾಗಿದೆ.

Related Articles