ಪಿಎಂ ಕೇರ್ ಗೆ ಕೊಡುಗೆ

0
84

ಸ್ಪೋರ್ಟ್ಸ್ ಮೇಲ್ ವರದಿ

ಕೊರೊನಾ ಸಂಕಷ್ಟದಲ್ಲಿರುವವರ ನೆರವಿಗಾಗಿ ಪ್ರಧಾನ ಮಂತ್ರಿಯವರ ಪಿ.ಎಂ. ಕೇರ್ ನಿಧಿಗೆ ಎಂಆರ್ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಶಿಕ್ಷಕರ ವರ್ಗ 1,94,500 ರೂ. ಕೊಡುಗೆ ನೀಡಿದೆ.

ಶಾಲೆಯ ಪ್ರಾಂಶುಪಾಲರು ಹಾಗೂ ಖ್ಯಾತ ಕ್ರೀಡಾ ಪ್ರೋತ್ಸಾಹಕರಾದ ಗೌತಮ್ ಶೆಟ್ಟಿಯವರು ಶಾಲೆಯ ಆಡಳಿತ ಮಂಡಳಿಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಖ್ಯಾತ ಕ್ರೀಡಾಪಟು, ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ನಬ್ ನ ಅಧ್ಯಕ್ಷರಾಗಿರು ಹಾಗೂ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಗೌತಮ್ ಶೆಟ್ಟಿಯವರು ಇತ್ತೀಚೆಗೆ ಎಂಆರ್ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.