Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಪೂರ್ಣ ವಿಕಾಸ ವಿದ್ಯಾಲಯಕ್ಕೆ ಬಿ.ಟಿ. ರಾಮಯ್ಯ ಶೀಲ್ಡ್‌

ಬೆಂಗಳೂರು: ಜೆಎಸ್‌ಎಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಎಲೆಕ್ಟ್ರಾನಿಕ್‌ ಸಿಟಿಯ ಡೆಲ್ಲಿ ಪಬ್ಲಿಕ್ ಸ್ಕೂಲ್‌ ವಿರುದ್ಧ 98 ರನ್‌ ಅಂತರದಲ್ಲಿ ಜಯ ಗಳಿಸಿದ ಪೂರ್ಣ ವಿಕಾಸ ವಿದ್ಯಾಲಯ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ 14 ವರ್ಷ ವಯೋಮಿತಿಯ ಶಾಲಾ ಬಾಲಕರಿಗಾಗಿ ನಡೆಸುವ ಬಿ. ಟಿ. ರಾಮಯ್ಯ ಶೀಲ್ಡ್‌ ಎರಡನೇ ಡಿವಿಜನ್‌ ಟೂರ್ನಮೆಂಟ್‌ ಗೆದ್ದುಕೊಂಡಿದೆ. Poorna Vikas Vidyalaya won B T Ramaiah Shield by defeating Delhi Public School Electronic City.

ಮೊದಲು ಬ್ಯಾಟಿಂಗ್‌ ಮಾಡಿದ ಪೂರ್ಣ ವಿಕಾಸ ವಿದ್ಯಾಲಯ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 251 ರನ್‌‌ ಗಳಿಸಿತು. ಸಿದ್ಧಾರ್ಥ್‌ ಎಚ್‌ ಎಸ್‌‌ 98 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. 120 ಎಸೆತಗಳನ್ನು ಎದುರಿಸಿದ ಸಿದ್ಧಾರ್ಥ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಸೇರಿತ್ತು. ತಂಡದ ಮೊತ್ತಕ್ಕೆ ಶೋಹಂ ಜೋಷಿ 28 ಹಾಗೂ ಚೇತಾಸ್‌ ಎಚ್‌. 43* ತಮ್ಮದೇ ಆದ ಕೊಡುಗೆ ನೀಡಿದರು.

ಡೆಲ್ಲಿ ಪಬ್ಲಿಕ್‌ ಸ್ಕೂಲ್‌‌ ಪರ ಅನಿರುಧ್‌ ಪವನ್‌ ರಾವ್‌‌ 60 ರನ್‌ಗೆ 2 ವಿಕೆಟ್‌ ಗಳಿಸಿದರೆ, ವಿಶ್ರುತ್‌ ಮೆಹ್ರೋತ್ರ 39 ರನ್‌ಗೆ 2 ವಿಕೆಟ್‌ ಗಳಿಸಿದರು.

252 ರನ್‌ ಜಯದ ಗುರಿ ಹೊತ್ತ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ 49 ಓವರ್‌ಗಳಲ್ಲಿ 153 ರನ್‌ಗೆ ಸರ್ವಪತನ ಕಂಡಿತು. ಲಲಿತೇಶ್‌ ಆರ್‌ 27, ವಿಕ್ರಾಂತ್‌ ರೊನಾವ್‌ ಬುದಾಲ 26, ವೇದಾಂತ್‌ ಶೌರ್ಯ 38 ಹಾಗೂ ಪ್ರಸನ್ನ ರೈ 21 ರನ್‌ ಗಳಿಸಿ ಕೆಲ ಹೊತ್ತು ಪೂರ್ಣ ವಿದ್ಯಾ ಬೌಲರ್‌ಗಳನ್ನು ಎದುರಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಪೂರ್ಣ ವಿಕಾಸ ವಿದ್ಯಾಲಯದ ಪರ ಚಿರಂಜಿತ್‌ ಎಸ್‌ಪಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 24 ರನ್‌ಗೆ 4 ವಿಕೆಟ್‌ ಗಳಿಸಿದರು.


administrator