Thursday, November 21, 2024

ಬೆಂಗಳೂರು ಕಂಬಳಕ್ಕೆ ಕೋಣಗಳೇ ಭೂಷಣ ಹೊರತು ಬ್ರಿಜ್‌ ಅಲ್ಲ!

ಒಂದು ಸಾಂಪ್ರದಾಯಿಕ ಕಲೆ, ಕ್ರೀಡೆ ಅಥವಾ ಆಚರಣೆ ಗ್ರಾಮೀಣ ಪರಿಸರವನ್ನು ಬಿಟ್ಟು ನಗರವನ್ನು ಪ್ರವೇಶಿಸಿದಾಗ ಯಾವ ರೀತಿಯಲ್ಲಿ ತನ್ನ ನೈಜತೆಯನ್ನು ಕಳೆದುಕೊಂಡು, ಕೆಲವೊಂದು ಹೊಂದಾಣಿಕೆ ಮಾಡಿಕೊಂಡು, ಪ್ರಚಾರದ ವಸ್ತುವಾಗಿ ಉಳಿಯುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಾವಳಿಯ ಕಂಬಳವೇ ಸಾಕ್ಷಿ. ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸಿದ್ದ ಬಿಜೆಪಿ ಸಂಸದ ಬೆಂಗಳೂರಿಗೆ ಆಗಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. Protest against Brij Bhushan Saran Singh visit to Bangalore.

ಕಂಬಳದಲ್ಲಿ ಬಲಿಷ್ಠವಾಗಿ ಕೊಬ್ಬಿರುವ ಮತ್ತು ಉತ್ತಮ ರೀತಿಯಲ್ಲಿ ಸಾಕಿರುವ ಕೋಣಗಳೇ ಓಡಬೇಕು. ಕಂಬಳದಲ್ಲಿ ಓಡುವ ಕೋಣಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿರುತ್ತಾರೆ. ಅವುಗಳಿಗೆ ಗೌರವ ನೀಡುತ್ತಾರೆ. ಕಂಬಳದ ದಿನ ಸಾಮಾನ್ಯ ಜನರಿಗೆ ಸಿಗದ ಗೌರವ ಕಂಬಳದ ಕೋಣಗಳಿಗೆ ನೀಡುತ್ತಾರೆ. ಇತರ ದಿನಗಳಲ್ಲೂ ಇರುತ್ತದೆ ಆದರೆ ಕಂಬಳದ ದಿನ ಜಾಸ್ತಿ.

ದಕ್ಷಿಣ ಕನ್ನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಬಳ ನಡೆಯುವಾಗ ಸಭಾ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸುವಾಗ ಊರಿನ ಗಣ್ಯರು ಮತ್ತು ಸಾಧಕರಿಗೆ ಮೊದಲ ಆದ್ಯತೆ ನೀಡುತ್ತಾರೆ. ಆದರೆ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸಿಂಬಳ ಬಳಿದಂತೆ ಲೈಂಗಿಕ ಕಿರುಕುಳದ ಆರೋಪವನ್ನು ಎದುರಿಸಿದ್ದ, ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರನ್ನು ಆಹ್ವಾನಿಸಲಾಗಿದೆ. ಇವರು ಬೆಂಗಳೂರಿಗೆ ಆಗಮಿಸಿ ಇಲ್ಲಿನ ಕುಸ್ತಿ ಪಟುಗಳಿಗೆ ಸನ್ಮಾನ ಮಾಡಲಿದ್ದಾರಂತೆ.

ನಮ್ಮೂರಲ್ಲಿ ಕಂಬಳ ನಡೆಸುವ ಉದ್ದೇಶ ಭಿನ್ನವಾಗಿರುತ್ತದೆ. ಬೆಂಗಳೂರಿನಲ್ಲಿ ಕಂಬಳ ನಡೆಸುತ್ತಿರುವುದು ಕೂಡ ಭಿನ್ನ ಉದ್ದೇಶಕ್ಕಾಗಿಯೇ. ಉದ್ದೇಶ ಏನೇ ಇರಲಿ. ಲೈಂಗಿಕ ಕಿರುಕುಳದ ಆರೋಪಿಯನ್ನು ಒಂದು ಮುಖ್ಯ ಅತಿಥಿಯ ಸ್ಥಾನಕ್ಕೆ ಆಹ್ವಾನಿಸುತ್ತಿರುವುದು ನಮ್ಮ ಕಂಬಳಕ್ಕೆ ಮಾಡುತ್ತಿರುವ ಅವಮಾನ.  ಬಿಜೆಪಿಗೆ ಇದರಿಂದ ಮುಜುಗರ ಆಗದು ಏಕೆಂದರೆ Association for Democratic Reforms (ADR) ಮಾಡಿರುವ ವರದಿ ಪ್ರಕಾರ ರಾಜ್ಯ ಸಭಾ ಮತ್ತು ಲೋಕಸಭಾ ಸದಸ್ಯರಲ್ಲಿ ಒಟ್ಟು 194 ಸಂಸದರು ಗಂಭೀರ ಕ್ರಿಮಿನಲ್‌ ಆರೋಪ ಎದರುಸುತ್ತಿದ್ದಾರೆ.  763 ಸದಸ್ಯರಲ್ಲಿ 306 ಮಂದಿ ಸದಸ್ಯರು ಕ್ರಿಮಿನಲ್ಸ್‌ಗಳೆಂದು ಘೋಷಿಸಲಾಗಿದೆ. ಇದರಲ್ಲಿ ಬಿಜೆಪಿಯ ಕೊಡುಗೆ ಮಹತ್ತರವಾದುದು. ಬಿಜೆಪಿಯ 385 ಸದಸ್ಯರಲ್ಲಿ 139 ಸದಸ್ಯರ ಮೇಲೆ ಕ್ರಿಮಿನಲ್‌ ಕೇಸಿದೆ. 98 ಸದಸ್ಯರ ಮೇಲೆ ಗಂಭಿರ ಕ್ರಿಮಿನಲ್‌ ಪ್ರಕರಣವಿದೆ. ಆದ್ದರಿಂದ ಇದು ಉತ್ತಮ ಆಯ್ಕೆಯೇ.

ಇಂತಹ ಗಣ್ಯರನ್ನು ಸಭೆ ಸಮಾರಂಭಗಳಿಗೆ ಕರೆಸಿ ಇವರ ಕೈಯಿಂದ ಸನ್ಮಾನ ಮಾಡಿಸಿಕೊಂಡರೆ ಕ್ರೀಡಾಪಟುಗಳ ಬದುಕು ಪಾವನವಾಗುತ್ತದೆ ಹಾಗೂ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗುತ್ತದೆ. ಕಂಬಳದಲ್ಲಿ ಓಡುವ ಕೋಣಗಳಿಗೆ (ನಮ್ಮ ಕಡೆ ಹೋರಿ ಎಂದೂ ಕರೆಯುತ್ತಾರೆ) ಶೀಲ ಮಾಡಿರುವುದಿಲ್ಲ. ಅಂದರೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಆಗಿರುವುದಿಲ್ಲ. ಅವು ಸದಾ ಪೌರುಷದಿಂದ ಕೂಡಿರುತ್ತವೆ. ಇವುಗಳನ್ನು ಬೀಜದ ಹೋರಿಯಾಗಿ ಬಳಸುತ್ತಾರೆಯೇ ವಿನಃ ಸಾಮಾನ್ಯ ಕೆಲಸಗಳಿಗೆ ಬಳಸುವುದಿಲ್ಲ.

Related Articles