ಚೆನ್ನೈಯಿನ್‌ಗೆ ಸೋಲುಣಿಸಿ ಬಿಎಫ್‌ಸಿ ಪ್ಲೇಆಫ್‌ಗೆ
ಬೆಂಗಳೂರು: ಪಂದ್ಯದ ನಾಯಕ ರಾಹುಲ್ ಭೆಕೇ 37ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತವನ್ನು ತಲುಪಿದೆ. Rahul Bheke nets winner as Blues qualify for ISL Playoffs with 1-0 win over Chennaiyin FC
ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಂಗಾಮಿ ನಾಯಕ ರಾಹುಲ್ ಗಳಿಸಿದ ಗೋಲು ತಂಡವನ್ನು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ದಿತು ಮಾತ್ರವಲ್ಲ ಸತತ ಮೂರನೇ ಕ್ಲೀ ಶೀಟ್ ದಾಖಲಿಸಿತು. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಪಾಲಿಗೆ ಇದು 50ನೇ ಕ್ಲೀನ್ ಶೀಟ್ ಸಾಧನೆ.
ಬೆಂಗಳೂರಿನ ಆರಂಭ ಉತ್ತಮವಾಗಿರಲಿಲ್ಲ. ಪಂದ್ಯದ 37ನೇ ನಿಮಿಷದಲ್ಲಿ ದೊರೆತ ಫ್ರೀ ಕಿಕ್ ಬೆಂಗಳೂರು ತಂಡಕ್ಕೆ ಗೋಲು ಗಳಿಸುವ ಅವಕಾಶವನ್ನು ನೀಡಿತು. ನೊಗ್ವೆರಾ ಅವರ ಪಾಸ್ ಮೂಲಕ ರಾಹುಲ್ ಭೆಕೇ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಶನಿವಾರ ಈಸ್ಟ್ ಬೆಂಗಾಲ್ ವಿರುದ್ಧ ಮುಂದಿನ ಪಂದ್ಯವನ್ನಾಡಲು ಬೆಂಗಳೂರು ಎಫ್‌ಸಿ ಕೋಲ್ಕತಾಕ್ಕೆ ಪ್ರಯಾಣಿಸಲಿದೆ.