Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೆಎಸ್‌ಸಿಎ ಕ್ಲಬ್‌ ಕ್ರಿಕೆಟ್‌ ಆಡುವಾಗ ರಾಹುಲ್‌ ದ್ರಾವಿಡ್‌ಗೆ ಗಾಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ನಸ್ಸೂರ್‌ ಸ್ಮಾರಕ ಶೀಲ್ಡ್‌ I-III ಡಿವಿಜನ್‌ ಲೀಗ್‌ ಹಾಗೂ ನಾಕೌಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಅವರ ಕಾಲಿಗೆ ಗಾಯವಾಗಿದ್ದು ಇದರಿಂದ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಋತುವಿನ ಆರಂಭಕ್ಕೆ ಮುನ್ನ ನಡೆಯುವ ಅಭ್ಯಾಸಕ್ಕೆ ಗೈರಾಗಲಿದ್ದಾರೆ. Rahul Dravid Missing from Rajasthan Royals Camp for IPL 2025 After Suffering Injury During KSCA league match.

ವಿಜಯ ಕ್ರಿಕೆಟ್‌ ಕ್ಲಬ್‌ ಮಾಲೂರು ಪರ ಮಗನೊಂದಿಗೆ ಸೆಮಿಫೈನಲ್‌ ಪಂದ್ಯ ಆಡುವಾಗ ದ್ರಾವಿಡ್‌ ಗಾಯಗೊಂಡಿದ್ದಾರೆ. ದ್ರಾವಿಡ್‌ ಅವರ ಕಿರಿಯ ಮಗ ಅನ್ವಯ್‌ ದ್ರಾವಿಡ್‌ ಕೂಡ ಇದೇ ತಂಡದಲ್ಲಿದ್ದು ಅವರು ಕೂಡ ಸೆಮಿಫೈನಲ್‌‌ ಪಂದ್ಯ ಆಡಿದ್ದರು. ರಾಹುಲ್‌ ದ್ರಾವಿಡ್‌ 29 ರನ್‌ ಗಳಿಸಿದರೆ, ಅನ್ವಯ್‌ ದ್ರಾವಿಡ್‌ 22 ರನ್‌ ಗಳಿಸಿದ್ದರು. ತಂಡವು 40 ಓವರ್‌ಗಳಲ್ಲಿ 149 ರನ್‌ಗೆ ಆಲೌಟ್‌ ಆಗಿತ್ತು. ಜಯನಗರ ಕ್ರಿಕೆಟರ್ಸ್‌ ವಿರುದ್ಧ 5 ವಿಕೆಟ್‌ ಅಂತರದಲ್ಲಿ ವಿಜಯ ಕ್ರಿಕೆಟ್‌ ಕ್ಲಬ್‌ ಮಾಲೂರು ಸೋಲನುಭವಿಸಿ ಫೈನಲ್‌ ತಲಪುವಲ್ಲಿ ವಿಫಲವಾಗಿತ್ತು.


administrator