ಲಾರಿಯಸ್ ಅವಾರ್ಡ್ ನಾಮನಿರ್ದೇಶಿತರಲ್ಲಿ ಭಾರತದ ಪಂತ್
ಮ್ಯಾಡ್ರಿಡ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಶಭ್ ಪಂತ್ ಅವರ ಬದುಕಿನ ಸ್ಫೂರ್ತಿಯ ಕತೆ 2025ನೇ ಸಾಲಿನ ಲಾರಿಯಸ್ ಸ್ಪೋರ್ಟ್ಸ್ ಅವಾರ್ಡ್‌ನ ಶ್ರೇಷ್ಠ ಪುರನರಾಗಮನದ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. Rishab Pant’s incredible story earns a nomination for the Laureus World Comeback of the year award.
ಲಾರಿಯಸ್ ಪ್ರಶಸ್ತಿಯ 25ನೇ ವರ್ಷಾಚರಣೆಯ ವೇಳೆ ರಿಶಭ್ ಪಂತ್ ಭಾರತ ಹಾಗೂ ಕ್ರಿಕೆಟ್ ಕ್ರೀಡೆಯನ್ನು ಪ್ರತಿನಿಧಿಸಲಿದ್ದಾರೆ.
ಜಗತ್ತಿನ ಕ್ರೀಡಾ ಮಾಧ್ಯಮಗಳು ಮತ ಚಲಾಯಿಸುವ ಮೂಲಕ 2025ನೇ ಸಾಲಿನ ವಿಶ್ವ ಕ್ರೀಡಾ ಪ್ರಶಸ್ತಿಗಳನ್ನು ನಿರ್ಧರಿಸುತ್ತಾರೆ. ಏಪ್ರಿಲ್ 21 ರಂದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 2024ನೇ ಸಾಲಿನಲ್ಲಿ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದ ಶ್ರೇಷ್ಠ ಕ್ರೀಡಾಪಟುಗಳು ಇಲ್ಲಿ ಸೇರಲಿದ್ದಾರೆ. 2000ದಲ್ಲಿ ಆರಂಭಗೊಂಡ ಈ ಪ್ರಶಸ್ತಿ ಈಗ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದೆ.
2020ರಲ್ಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಂತ್ ಬದುಕಿ ಉಳಿದದ್ದೇ ಪವಾಡ. ಅವರನ್ನು ನುಜ್ಜುಗುಜ್ಜಾದ ಕಾರಿನಿಂದ ಹೊರ ತೆಗೆಯುತ್ತಿದ್ದಂತೆ ಕಾರು ಸ್ಪೋಟಗೊಂಡಿತು. 629 ದಿನಗಳ ಕಾಲ ಹಾಸಿಗೆ ಹಿಡಿದಿದ್ದ ಪಂತ್ ಕೊನೆಗೂ ಚೇತರಿಸಿ ಭಾರತ ತಂಡವನ್ನು ಸೇರಿದ್ದು ಕ್ರೀಡಾ ಜಗತ್ತಿನ ಸ್ಪೂರ್ತಿ. “ಈ ಪ್ರಶಸ್ತಿ ಎಂಬುದು ಸ್ಫೂರ್ತಿಯ ಸಂಕೇತವಾಗಿದೆ. ನನ್ನ ಬದುಕಿನ ಕತೆ ಜಗತ್ತಿನ ಇತರ ಕ್ರೀಡಾಪಟುಗಳಿಗೆ ಹಾಗೂ ಇತರರಿಗೆ ಸ್ಫೂರ್ತಿಯಾಗಲಿದೆ ಎಂದು ನಂಬಿರುವೆ. ಆತ್ಮವಿಶ್ವಾಸ ಬದುಕಿನಲ್ಲಿ ಪ್ರಮುಖವಾದುದುಮ,” ಎಂದು ಪಂತ್ ಹೇಳಿದ್ದಾರೆ.