Thursday, November 21, 2024

ಜೆರ್ಸಿ ನಂಬರ್‌ 45: ಅದು ಅಮ್ಮನ ಅದೃಷ್ಟದ ನಂಬರ್‌!

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ ತಲುಪಿದೆ. ಎಲ್ಲರ ಕಣ್ಣು ಈಗ ರೋಹಿತ್‌ ಶರ್ಮಾ ಅವರ ಮೇಲೆ. ಆರು ಐಪಿಎಲ್‌ ಟ್ರೋಫಿ ಗೆದ್ದಿರುವ ರೋಹಿತ್‌ ವಿಶ್ವಕಪ್‌ಗೆ ಮುತ್ತಿಡುವರೇ? ಎಂಬುದನ್ನು ಕಾದು ನೋಡುವ ಕ್ಷಣ. ಈ 45 ನಂಬರಿನ ಜೆರ್ಸಿ ಧರಿಸಿರುವ ಆಟಗಾರ ಭಾರತೀಯರ ಆಸೆಯನ್ನು ಈಡೇರಿಸುವರೇ? ಈ ಅದೃಷ್ಟದ 45 ನಂಬರಿನ ಹಿಂದಿರುವ ಕತೆಯಾದರೂ ಏನು? ಎಂಬುದನ್ನು ತಿಳಿದುಕೊಳ್ಳೋಣ. Rohit Sharma jersey number 48 is given by his mother Poornima Sharma.

ಪ್ರತಿಯೊಬ್ಬ ಆಟಗಾರನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಕೂಡಲೇ ಒಂದು ಜೆರ್ಸಿ ನಂಬರ್‌ ಆಯ್ಕೆ ಮಾಡಿಕೊಳ್ಳುವ ಅವಕಾಶ ಬಂದಿರುವುದು ಇತ್ತೀಚಿನ ವರ್ಷಗಳಲ್ಲಿ. ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ತಮ್ಮ ಜರ್ಸಿ ನಂಬರ್‌ ಆಗಿ 45ನ್ನು ಆಯ್ಕೆ ಮಾಡಿದರು. ರೋಹಿತ್‌ 45 ನಂಬರನ್ನೇ ಯಾಕೆ ಆಯ್ಕೆ ಮಾಡಿದರು ಎಂಬುದು ಕೆಲವು ಸಮಯದ ವರೆಗೆ ಯಾರಿಗೂ ಗೊತ್ತಿರಲಿಲ್ಲ. ಒಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿಯ) ಸಂದರ್ಶನವೊಂದರಲ್ಲಿ ರೋಹಿತ್‌ ಈ ನಂಬರಿನ ಹಿಂದಿರುವ ಕತೆಯನ್ನು ಹೇಳಿದರು.

“ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾದ ದಿನ ಜೆರ್ಸಿಗೆ ಯಾವ ನಂಬರ್‌ ಆಯ್ಕೆ ಮಾಡುತ್ತೀರಿ ಎಂದು ಕೇಳಿದರು. ಸ್ವಲ್ಪ ಸಮಯ ಕೊಡಿ ಮತ್ತೆ ಹೇಳುತ್ತೇನೆ ಎಂದೆ. ಅಮ್ಮನೊಂದಿಗೆ ಈ ವಿಷಯವನ್ನು ಚರ್ಚಿಸಿದೆ. ಅಮ್ಮ 45 ಅದೃಷ್ಟದ ಸಂಖ್ಯೆ ಎಂದು ಸೂಚಿಸಿದರು. ಅಮ್ಮನ ಆಯ್ಕೆಯಂತೆ 45 ನಂಬರ್‌ ಸೂಚಿಸಿದೆ,” ಎಂದು ರೋಹಿತ್‌ ಬಹಿರಂಗಗೊಳಿಸಿದ್ದಾರೆ.

ನಿಜವಾಗಿಯೂ ಪೂರ್ಣಿಮಾ ಶರ್ಮಾ ಅವರು ನೀಡಿದ 45 ನಂಬರ್‌ ಅದೃಷ್ಟದ ನಂಬರ್.‌ ಏಕೆಂದರೆ ಐಪಿಎಲ್‌ನಲ್ಲಿ ಆರು ಪ್ರಶಸ್ತಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ, ಟೆಸ್ಟ್‌ ಕ್ರಿಕೆಟ್‌ನಲ್ಲೂ ದ್ವಿಶತಕ,, ಐಪಿಎಲ್‌ನಲ್ಲೂ ಶತಕ ಇನ್ನೇನು ಬೇಕು? ತಾಯಿ ನೀಡಿದ 45 ಜೆರ್ಸಿ ನಂಬರ್‌ನ ಅದೃಷ್ಟ ಮಾತ್ರವಲ್ಲ, ರೋಹಿತ್‌ ಕೂಡ ಅದ್ಭುತ ಕ್ರಿಕೆಟಿಗ, ಕ್ರಿಕೆಟ್‌ ಜಗತ್ತಿನ ಹಿಟ್‌ ಮ್ಯಾನ್‌ ಎಂಬುದನ್ನು ಮರೆಯುವಂತಿಲ್ಲ.

Related Articles