ತ್ರಿವೇಣಿ ಸಂಗಮದಲ್ಲಿ ಆರ್‌ಸಿಬಿ ಜರ್ಸಿಯನ್ನು ಮುಳುಗಿಸಿದ ಫ್ಯಾನ್
ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎಂತೆಂಥ ಅಭಿಮಾನಿಗಳಿದ್ದಾರೆ ನೋಡಿ. ಮಹಾಕುಂಭ ಮೇಳಕ್ಕೆಂದು ಹೋದ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಜರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದಾರೆ. ಇದರಿಂದ ಈ ಬಾರಿಯಾದರೂ ಆರ್‌ಸಿಬಿ ಕಪ್ ಗೆಲ್ಲಲಿ ಎಂಬುದು ಅವರ ನಂಬಿಕೆ. Royal Challengers Bengaluru fan spotted dipping RCB jersey during Maha Kumbha Mela.
ಆರ್‌ಸಿಬಿ ಕಪ್ ಗೆಲ್ಲುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಕ್ರಿಕೆಟ್ ಅಭಿಮಾನಿ ಮಾತ್ರ ಆರ್‌ಸಿಬಿ ಆಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವಿಭಿನ್ನ ರೀತಿಯ ಭಕ್ತರು, ಭಕ್ತಿಯ ಮಾದರಿಗಳು ಸುದ್ದಿಯಾಗುತ್ತಿವೆ. ಅದರಲ್ಲೂ ಇದು ಕೂಡ ಒಂದು. ಪವಿತ್ರ ಗಂಗಾ ನದಿಯಲ್ಲಿ ಆರ್‌ಸಿಬಿ ಜೆರ್ಸಿಯನ್ನು ಮುಳುಗಿಸುವುದರಿಂದ ಸಂಕಷ್ಟಗಳು ದೂರವಾಗಿ, ಬೆಂಗಳೂರಿನ ತಂಡ ಗೆಲ್ಲಲಿ ಎಂಬುದು ಕ್ರಿಕೆಟ್ ಆಭಿಮಾನಿಯ ನಂಬಿಕೆ ಆಗಿರಬಹದು. ಕ್ರಿಕೆಟ್‌ನಲ್ಲಿ ಚೆನ್ನಾಗಿ ಆಡುವ ತಂಡ ಗೆದ್ದೇ ಗೆಲ್ಲುತ್ತದೆ ಎಂಬುದು ನಂಬಿಕೆ.