RCB ಮೊದಲ ಪಂದ್ಯ ಸೋತಾಗ ದೇವರಿಗೆ, ಗೆದ್ದಾಗ ಅಭಿಮಾನಿಗಳಿಗೆ
ಕೋಲ್ಕೋತಾ: ಇಂಡಿಯನ್ ಪ್ರೀಮಿಯರ್ ಲೀಗ್ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕೋತಾ ನೈಟ್‌ರೈಡರ್ಸ್ ವಿರುದ್ಧ 7 ವಿಕೆಟ್ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. Royal Challengers Bengaluru first loss to GOD first win to Fans.
ಸಮಾನ್ಯವಾಗಿ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಸೋತಾಗೆಲ್ಲ “ಇದು ದೇವರಿಗೆ” ಎಂದು ಅಭಿಮಾನಿಳಗು ಸೋಷಿಯಲ್ ಮೀಡಿಯಾದಲ್ಲಿ ಹೇಳುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಬಲಿಷ್ಠ ತಂಡದ ವಿರುದ್ಧ ಜಯ ಗಳಿಸಿದೆ. ಇದರಿಂದಾಗಿ “ಈ ಮೊದಲ ಜಯ ಅಭಿಮಾನಿಗಳಿ”ಗೆ ಎಂಬ ಮಾತು ಕೇಳಿ ಬಂದಿದೆ.
ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಉತ್ತಮ ಆರಂಭವನ್ನೇ ಕಂಡಿತ್ತು. ನಾಯಕ ಅಜಿಂಕ್ಯಾ ರಹಾನೆ (56) ಹಾಗೂ ಸುನಿಲ್ ನರೇನ್ (44) ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 10 ಓವರ್‌ಗಳಲ್ಲಿ 109 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಕ್ರುನಾಲ್ ಪಾಂಡ್ಯ( 29ಕ್ಕೆ 3) ಹಾಗೂ ಜೋಷ್ ಹೆಜಲ್‌ವುಡ್ (22ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸುವ ಮೂಲಕ ಕೆಕೆಆರ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 178 ರನ್ ಗಳಿಸಿತು.
ಆರ್‌ಸಿಬಿ ಪರ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ (59*) ಅವರ ಅಬ್ಬರದ ಆಟದಿಂದಾಗಿ ಇನ್ನೂ 22 ಎಸೆತ ಬಾಕಿ ಇರುವಾಗಲೇ ಕೇವಲ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಜಯ ದಾಖಲಿಸಿತು. ಆರ್‌ಸಿಬಿಯ ಕ್ರುನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.