Friday, October 18, 2024

ಪುನೀತ್‌ ರಾಜ್‌ಕುಮಾರ್‌ ನೆನಪಿನ ಓಟ, ಇದು ವಂಚನೆಯ ಆಟ!

ಬೆಂಗಳೂರು: ಟಾಟಾ ಪ್ರಾಯೋಜಕತ್ವದ ಮುಂಬೈ ಮ್ಯಾರಥಾನ್‌, ಬೆಂಗಳೂರಿನ 10K ಮ್ಯಾರಥಾನ್‌, ಹೈದರಾಬಾದ್‌ ಮ್ಯಾರಥಾನ್‌ ಹೆಸರು ಕೇಳಿದ್ದೇವೆ. ಅಲ್ಲಿಯ ನಗದು ಬಹುಮಾನಗಳ  ಬಗ್ಗೆಯೂ ಗೊತ್ತಿದೆ. ಆದರೆ ನವೆಂಬರ್‌ನಲ್ಲಿ ಮಂಡ್ಯದ ಮಳವಳ್ಳಿಯಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ನಡೆಯಲಿರುವ ರಾಷ್ಟ್ರೀಯ ಓಟದ ಸ್ಪರ್ಧೆ ಈ ಎಲ್ಲ ಕಾರ್ಪೊರೇಟ್‌ ದಾಖಲೆಗಳನ್ನು ಹಿಂದಿಕ್ಕಲಿದೆ. ಇಲ್ಲಿ ಪ್ರಥಮ ಸ್ಥಾನ ಪಡೆಯುವ ಮಹಿಳಾ ಹಾಗೂ ಪುರುಷ ಸ್ಪರ್ಧಿಗಳು ಬರೋಬ್ಬರಿ ತಲಾ 5,00,000 ರೂ. ನಗದು ಬಹುಮಾನವನ್ನು ಗೆಲ್ಲಲಿದ್ದಾರೆ.ಆದರೆ ಇದು ವಂಚನೆ ಎಂಬುದು ಬೆಳಕಿಗೆ ಬಂದಿದೆ. Running competition in the name of Dr Puneeth Rajkumar total prize money 30 lakh rupees.

ಮುಂಬಯಿ, ಡೆಲ್ಲಿ, ಹೈದರಾಬಾದ್‌ ಹಾಗೂ ಬೆಂಗಳೂರು ಮ್ಯಾರಥಾನ್‌ಗಳಲ್ಲಿ ಒಟ್ಟು ಬಹುಮಾನದ ಮೊತ್ತ ದೊಡ್ಡದಿರುತ್ತದೆ. ಆದರೆ ವೈಯಕ್ತಿಕ ಮೊತ್ತ ಬಂದಾಗ, 2-3 ಲಕ್ಷ ರೂ.ಗಳಿಗೆ ಸೀಮಿತವಾಗಿರುತ್ತದೆ. ಮಂಡ್ಯದ ಮೊಳವಳ್ಳಿಯಲ್ಲಿ ನವೆಂಬರ್‌ 11 ರಂದು ನಡೆಯಲಿರುವ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನ ಮ್ಯಾರಥಾನ್‌ನಲ್ಲಿ ಒಟ್ಟು ಬಹುಮಾನದ ಮೊತ್ತ 30,00,000 ರೂ. ಇದು ಪುರುಷ ಮತ್ತು ಮಹಿಳಾ ವಿಭಾಗ ಸೇರಿರುತ್ತದೆ. ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ ಗೋಲ್ಡ್‌, ಸಿಲ್ವರ್‌ ಮತ್ತು ಎಲೈಟ್‌ ಮ್ಯಾರಥಾನ್‌ಗಳಿಗೆ ಸಾಕಷ್ಟು ಪ್ರಚಾರ ಮತ್ತು ಪ್ರಾಯೋಜಕರು ಇದ್ದರೂ ನಗದು ಬಹುಮಾನ ಬಹಳ ಕಡಿಮೆಯಾಗಿರುತ್ತದೆ. ಮಂಡ್ಯದ ಮೊಳವಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಮ್ಯಾರಥಾನ್‌ ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಮಾತ್ರವಲ್ಲ, ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲಿದೆ. ಮೊದಲ ಸ್ಥಾನ ಗಳಿಸುವ ಓಟಗಾರ ಅಥವಾ ಓಟಗಾರ್ತಿಗೆ ಇದುವರೆಗೂ 5 ಲಕ್ಷ ರೂ. ಬಹುಮಾನವನ್ನು ನೀಡಿದ ಮ್ಯಾರಥಾನ್‌ ಭಾರತದಲ್ಲಿ ಯಾವುದೂ ಇಲ್ಲ. ಒಟ್ಟು ಬಹುಮಾನದ ಮೊತ್ತ ಕೋಟಿ ರೂ. ದಾಟಿರಬಹುದು ಆದರೆ. ವೈಯಕ್ತಿಕ ಬಹುಮಾನದ ಮೊತ್ತ 5 ಲಕ್ಷ ರೂ. ನೀಡುತ್ತಿರುವುದು ಇತಿಹಾಸ.

ಅಭಿಮಾನಿಗಳಿಂದ ದೇಣಿಗೆ ಸಂಗ್ರಹ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೂಪರ್‌ವೈಸರ್‌ ಆಗಿರುವ ಸಂತೋಷ್‌ ಕುಮಾರ್‌ ಅವರು ಈ ಮ್ಯಾರಥಾನ್‌ನ ಆಯೋಜಕರಲ್ಲಿ ಒಬ್ಬರಾಗಿದ್ದಾರೆ. ಈ ಕುರಿತು www.sportsmaili.net ಜೊತೆ ಮಾತನಾಡಿದ ಅವರು, “ಇದು ರಾಷ್ಟ್ರೀಯ ಮಟ್ಟದ ಓಟ. ನಾವು ಮಂಡ್ಯದ ಮಳವಳ್ಳಿಯಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಬಳಗದವರು ಈ ಓಟದ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ಇದಕ್ಕಾಗಿ ರಾಜ್ಯದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಬೆಂಬಲ ಪಡೆಯಲಿದ್ದೇವೆ. ಪುನೀತ್‌ ಹೆಸರು ಅಜರಾಮರವಾಗಿ ಉಳಿಯಬೇಕು. ಎಂಬುದು ನಮ್ಮ ಉದ್ದೇಶ. ನಾವು ಈ ಓಟವನ್ನು ಯಶಸ್ವಿಯಾಗಿ ನೆರವೇರಿಸುತ್ತೇವೆ ಎಂಬ ಆತ್ಮವಿಶ್ವಾಸವಿದೆ,” ಎಂದು ಹೇಳಿದ್ದಾರೆ.

ಪ್ರವೇಶ ಶುಲ್ಕ 10000 ರೂ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಮ್ಯಾರಥಾನ್‌ ಓಟದಲ್ಲಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗೆ ಸಮಾನವಾಗಿ ನಗದು ಬಹುಮಾನ ನೀಡಲಾಗುತ್ತಿದೆ. ಮೊದಲ ಸ್ಥಾನ ಗೆದ್ದ ಪುರುಷ ಸ್ಪರ್ಧಿಗೆ 5 ಲಕ್ಷ ರೂ. ಹಾಗೂ ಮೊದಲ ಸ್ಥಾನ ಗೆದ್ದ ಮಹಿಳಾ ಸ್ಪರ್ಧಿಗೆ 5 ಲಕ್ಷ ರೂ. ಬಹುಮಾನ. ದ್ವಿತೀಯ ಬಹುಮಾನ 4 ಲಕ್ಷ ರೂ., ತೃತೀಯ ಬಹುಮಾನ 3 ಲಕ್ಷ ರೂ. ಚತುರ್ಥ ಬಹುಮಾನ 2 ಲಕ್ಷ ರೂ. ಹಾಗೂ ಐದನೇ ಬಹುಮಾನ 1 ಲಕ್ಷ ರೂ. ಆಗಿರುತ್ತದೆ.

2 ಸುತ್ತಿನ 4 ಕಿಮೀ ರಸ್ತೆ ಓಟ: ಈ ಓಟದ ಸ್ಪರ್ಧೆಯು 4 ಕಿಮೀ ರಸ್ತೆ ಓಟವಾಗಿರುತ್ತದೆ. ಪ್ರವೇಶ ಶುಲ್ಕ 10,000 ರೂ. ಆಗಿದ್ದರೂ ಮುಂಗಡವಾಗಿ 3500 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಉಳಿದ ಮೊತ್ತವನ್ನು ಸ್ಪರ್ಧೆ ನಡೆಯುವ ದಿನದಂದು ಕೊಡಬಹುದು. ಸ್ಪರ್ಧಿಸುವವರು 20-11-2024 ರಂದು ಬೆಳಿಗ್ಗೆ 6 ಗಂಟೆಗೆ ಹಾಜರಿರತಕ್ಕದ್ದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಊಟ ಮತ್ತು ವಸತಿ ಸೌಕರ್ಯವನ್ನು ನೀಡಲಾಗುವುದು. ಸ್ಪರ್ಧಿಗಳು ಎರಡು ಸುತ್ತಿನ ಓಟವನ್ನು ಪೂರ್ಣಗೊಳಿಸಬೇಕು. ಮೊದಲ ಸುತ್ತಿನ ಓಟ 20-11-2034 ರಂದು ನಡೆದರೆ, ಎರಡನೇ ಸುತ್ತಿನ ಓಟ 21-11-2024ರಂದು ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8884028497/8296166071 ಸಂತೋಷ್‌ ಕುಮಾರ್‌,

Related Articles