Sunday, November 24, 2024

ಯಾರಿದು ಸಚಿನ್‌ ತೆಂಡೂಲ್ಕರ್‌ ಅಥವಾ ಸ್ಟೀವನ್‌ ಸ್ಮಿತ್‌?

ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪ್ರತಿಮೆಯನ್ನು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಈ ಪ್ರತಿಮೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಅವರನ್ನು ಹೋಲುತ್ತದೆ ಎಂದು ನೆಟ್ಟಿಗರು ಗುಲ್ಲೆಬ್ಬಿಸಿದ್ದಾರೆ. Newly unveiled statue in Wankhede Stadium confuses fans is it Sachin or Smith?

ಸಚಿನ್‌ ತೆಂಡೂಲ್ಕರ್‌ ಅವರ ಆತ್ಮೀಯ ಕಲಾವಿದ ಪ್ರಮೋದ್‌ ಕಾಂಬ್ಳೆ ಅವರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ. ಶಿರಡಿಯ ಸಾಯಿಬಾಬ, ಸಚಿನ್‌ ತೆಂಡೂಲ್ಕರ್‌ ಮನೆಯಲ್ಲಿರುವ ಸಿಂಹದ ಮುಖ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರಮೋದ್‌ ಕಾಂಬ್ಳೆ ಅವರ ಕಲಾಕೃತಿಗಳಿವೆ. ಆದರೆ ಸಚಿನ್‌ ಅವರ  ಪ್ರತಿಮೆ ಮಾತ್ರ ಈ ಬಾರಿ ಪ್ರಮೋದ್‌ ಅವರನ್ನು ಮುಜುಗರಕ್ಕೆ ಈಡುಮಾಡದಿರದು.

ಈ ಬಗ್ಗೆ ಸ್ಟೀನವ್‌ ಸ್ಮಿತ್‌ ಟ್ವೀಟ್‌ ಮಾಡಿರದಿದ್ದರೂ ಕೆಲವು ಆನ್‌ಲೈನ್‌ ತರ್ಲೆಗಳು ಸ್ಟೀನವ್‌ ಸ್ಮಿತ್‌ ಅವರ ನಕಲಿ ಖಾತೆಯ ಮೂಲಕ “ಇದು ನನ್ನ ನನ್ನಂತೆಯೇ ಇದೆ, ಆದರೆ ನಾನು ಸ್ವಲ್ಪ ಎತ್ತರವಾಗಿದ್ದೇನೆ,” ಎಂದು ಬರೆದುಕೊಂಡಿವೆ.

ಸಚಿನ್‌ ಸ್ಟ್ರೈಟ್‌ ಡ್ರೈವ್‌ ಮಾಡುತ್ತಿರುವುದನ್ನು ಪ್ರತಿಮೆಯಲ್ಲಿ ಅಳವಡಿಸಲಾಗಿದೆ. ಇದು ಕ್ರಿಕೆಟ್‌ನಲ್ಲಿ ಹೆಚ್ಚಿನ ಆಟಗಾರರು ಈ ಹೊಡೆತವನ್ನು ಹೊಡೆಯುತ್ತಾರೆ. ಆದರೆ ಸಚಿನ್‌ ಅವರ ಈ ಹೊಡೆತ ನೋಡಲು ಅದ್ಭುತ. ಸ್ಟೀವನ್‌ ಸ್ಮಿತ್‌ ಕೂಡ ಈ ರೀತಿಯ ಭಂಗಿಯಲ್ಲಿ ಬ್ಯಾಟಿಂಗ್‌ ಮಾಡುತ್ತಾರೆ. ಪ್ರತಿಮೆಯಲ್ಲಿ ಸಚಿನ್‌ ಅವರ ಮುಖ ಇನ್ನೂ ಸ್ವಲ್ಪ ಅಗಲವಾಗಿ ಬಂದಿದ್ದರೆ ಇಂಥ ಸಮಸ್ಯೆ ಬರುತ್ತಿರಲಿಲ್ಲವೇನೋ ಎಂಬುದು ಕೆಲವರ ಅಭಿಪ್ರಾಯ.

Related Articles