Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ಗೆ ಸಲ್ಮಾನ್‌ ಖಾನ್‌ ರಾಯಭಾರಿ

ಹೊಸದಿಲ್ಲಿ: ಮೊದಲ ಋತುವಿನಲ್ಲಿ ಯಶಸ್ಸು ಕಂಡ ಇಂಡಿಯನ್‌ ಸೂಪರ್‌ ಕ್ರಾಸ್‌ ರೇಸಿಂಗ್‌ ಲೀಗ್‌ Indian Supercross Racing League (ISRL) ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ತನ್ನ ರಾಯಭಾರಿಯನ್ನಾಗಿ ನಿಯೋಜಿಸಿದೆ. ಇದರೊಂದಿಗೆ ಭಾರತದಲ್ಲಿ ಮೋಟಾರ್‌ ಸ್ಪೋರ್ಟ್‌ಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. Salman Khan roped in as brand ambassador of Indian Supercross Racing League

ಮೋಟಾರ್‌ ಸ್ಪೋರ್ಟ್ಸ್‌ ಭಾರತದಲ್ಲಿ ಇತರ ಕ್ರೀಡೆಗಳಂತೆ ಜನಪ್ರಿಯತೆಗೊಂಡಿಲ್ಲ. ಕಾರಣ ಇದು ದುಬಾರಿ ಕ್ರೀಡೆ. ಸಲ್ಮಾನ್‌ ಖಾನ್‌ ಅವರನ್ನು ರಾಯಭಾರಿಯನ್ನಾಗಿ ಮಾಡಿ, ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮೋಟಾರ್‌ ಸ್ಪೋರ್ಟ್‌ಗೆ ಮತ್ತಷ್ಟು ಪ್ರಚಾರ ಸಿಕ್ಕು ಯುವ ರೇಸರ್‌ಗಳು ಈ ಕ್ರೀಡೆಯತ್ತ ಮನಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ. ನಗರದಿಂದ ಗ್ರಾಮೀಣ ಜನತೆಯವರೆಗೂ ಸಲ್ಮಾನ್‌ ಖಾನ್‌ ಅವರ ಅಭಿಮಾನಿಗಳಿದ್ದಾರೆ. ಐಎಸ್‌ಆರ್‌ಎಲ್‌ ಈ ಜನಪ್ರಿಯತೆಯನ್ನು ಮೋಟಾರ್‌ ಸ್ಪೋರ್ಟ್‌ಗೆ ಬಳಸಿಕೊಂಡು ಈ ಕ್ರೀಡೆ ಭಾರತದ ಮನೆಮಾತಾಗಬೇಕೆಂಬುದು ಮುಖ್ಯ ಉದ್ದೇಶವಾಗಿದೆ.


administrator