Sunday, November 24, 2024

ಸೌರವ್‌ ಗಂಗೂಲಿಗೆ ಪಾಕಿಸ್ತಾನವೇ ಸೆಮಿಫೈನಲ್‌ ತಲುಪಬೇಕಂತೆ!

ಮುಂಬಯಿ: ಪಾಕಿಸ್ತಾನ ಗೆಲ್ಲುತ್ತದೆ ಎಂದು ಬೆಕ್‌ ಕಟ್ಟುತ್ತಾರೆ, ಆದರೆ ಎದುರಿಗೆ ಅಭಿಪ್ರಾಯ ಕೇಳಿದರೆ ಪಾಕಿಸ್ತಾನ ಸೋಲಬೇಕು ಎನ್ನುವವರೇ ಹೆಚ್ಚು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಎಲ್ಲರೆದುರು ಮಾತನಾಡಿ ಕೊನೆಯಲ್ಲಿ ಭಾರತ ಸೋಲುತ್ತದೆ ಎಂದು ಹಣ ಹೂಡುವವರಿಗೂ ಭಾರತದಲ್ಲಿ ಕೊರತೆ ಇಲ್ಲ. ಏಕೆಂದರೆ ಕ್ರಿಕೆಟ್‌‌ ದುಡ್ಡಿನ ಲೆಕ್ಕಾಚಾರದ್ದು. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. Saurav Ganguly wants Pakistan should reach Semi Final

ಇದಕ್ಕೆ ಮುಖ್ಯ ಕಾರಣ ಟಿಕೆಟ್‌ ಮಾರಾಟದಿಂದ ಬರುವ ಹಣ. ಒಂದು ವೇಳೆ ಭಾರತದ ಎದುರಾಳಿ ನ್ಯೂಜಿಲೆಂಡ್‌‌ ಅಥವಾ ಅಫಘಾನಿಸ್ತಾನವಾಗಿದ್ದರೆ ಸೆಮಿಫೈನಲ್‌ ಪಂದ್ಯ ನವೆಂಬರ್‌ 15 ರಂದು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ಎದುರಾಳಿ ಪಾಕಿಸ್ತಾನವಾದರೆ ನವೆಂಬರ್‌ 16 ರಂದು ಈಡನ್‌ ಗಾರ್ಡನ್‌ನಲ್ಲಿ ಸೆಮಿಫೈನಲ್‌ ಪಂದ್ಯ ನಡೆಯಲಿದೆ.  ಎದುರಾಳಿ ಯಾರೇ ಆಗಿರಲಿ ಪಾಕಿಸ್ತಾನ ತಂಡ ಸೆಮಿಪೈನಲ್‌ಗೆ ಆಗಮಿಸಿದರೆ ಪಂದ್ಯ ಈಡನ್‌ ಗಾರ್ಡ್‌ನಲ್ಲೇ ನಡೆಯಲಿದೆ ಎಂಬುದು ಮೊದಲೇ ತೀರ್ಮಾನವಾಗಿತ್ತು.

“ಪಾಕಿಸ್ತಾನ ತಂಡವು ಸೆಮಿಫೈನಲ್‌ ಪ್ರವೇಶಿಸಬೇಕೆಂಬುದು ನನ್ನ ಆಶಯ, ಈ ಎರಡು ತಂಡಗಳ ಮುಖಾಮುಖಿಗಿಂತ ದೊಡ್ಡ ಸೆಮಿಫೈನಲ್‌ ಬೇರೆ ಯಾವುದೂ ಇರಲು ಅಸಾಧ್ಯ,” ಎಂದು ಸೌರವ್‌ ಗಂಗೂಲಿ ಹೇಳಿದ್ದಾರೆ. ಈಡನ್‌ ಗಾರ್ಡನ್‌ನಲ್ಲಿ ಟಿಕೆಟ್‌ಗಳನ್ನು ಕಾಳ ಸಂತೆಯಲ್ಲಿ ಮಾರುತ್ತಿದ್ದಾರೆ. 800 ರೂ. ಬೆಲೆಯ ಟಿಕೆಟ್‌ 8,000ಕ್ಕೆ ಮಾರಾಟವಾಗುತ್ತಿದೆ. ಸೌರವ್‌ ಗಂಗೂಲಿ ಸಹೋದರ ಸ್ನೇಹಶೀಶ್‌ ಗಂಗೂಲಿ ಅವರನ್ನು ಕಾಳಸಂತೆಯಲ್ಲಿ ಟಿಕೆಟ್‌ ಮಾರಾ    ಟವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಮಾಡಿದ್ದಾರೆ. ಯಾಕೆ ಭಾರತದ ವಿರುದ್ಧ ಪಾಕಿಸ್ತಾನ ಆಡಬೇಕೆಂದು ಸೌರವ್‌ ಗಂಗೂಲಿ ಆಶಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ.

Related Articles