ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ 15ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೇನ್ ಡೇವಿಸ್ ಅವರು ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. Sean Davis Karnataka State 15Red Snooker Champion.
ಫೈನಲ್ ಪಂದ್ಯದಲ್ಲಿ ಸೇನ್ ಅವರು ಅಕ್ಮಲ್ ಹುನೇನ್ ಅವರನ್ನು 5-2 (70-36, 59-64, 55-24, 69-68,68-60,47-100, 89-00) ಅಂತರದಲ್ಲಿ ಗೆದ್ದು ಚಾಂಪಿಯನ್ನರಾದರು.
ಸೆಮಿಫೈನಲ್‌ನಲ್ಲಿ ಸೇನ್ ಅವರು ಮನುದೇವ್ ವಿರುದ್ಧ 5-3 ಅಂತರದಲ್ಲಿ ಗೆದ್ದು, ಫೈನಲ್ ಪ್ರವೇಶಿಸಿದರೆ, ಅಕ್ಮಲ್ ಹುಸೇನ್ 5-2 ಅಂತರದಲ್ಲಿ ಎಂ.ಎಸ್. ಅರುಣ್ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ರಾಜ್ಯದ ಶ್ರೇಷ್ಠ 8 ಆಟಗಾರರ ಪಟ್ಟಿ: ಸೇನ್ ದೇವ್, ಅಕ್ಮಲ್ ಹುಸೇನ್, ಐಎಚ್ ಮನುದೇವ್, ಎಂಎಸ್ ಅರುಣ್, ಯೋಗೇಶ್ ಕುಮಾರ್,ಆದಿಲ್ ಶೆರಾಝಿ, ಎಂ.ಎಲ್. ಲಕ್ಷ್ಮಣ್, ರಘುನಾಥ್ ಪಿ.ಟಿ.