ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತರಾಖಂಡ್ ವಿರುದ್ಧ ಜಯ
ಕಟಕ್: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಉತ್ತರಾಖಡ್ ವಿರುದ್ಧ 46-26 ಅಂತರದಲ್ಲಿ ಜಯ ಗಳಿಸಿದೆ. Senior National Kabaddi Championships Karnataka win 46-26 over Uttarakhand
ಚಾಂಪಿಯನ್ಷಿಪ್ನ ಎರಡನೇ ದಿನದಲ್ಲಿ ಪ್ರೋ ಕಬಡ್ಡಿ ಲೀಗ್ನ ಸ್ಟಾರ್ ಆಟಗಾರ ನವೀನ್ ಕುಮಾರ್ ನಾಯಕತ್ವದ ಸರ್ವಿಸಸ್ ತಂಡ ಚತ್ತೀಸ್ಗಢದ ವಿರುದ್ಧ 70-33 ಅಂತರದಲ್ಲಿ ಜಯ ಗಳಿಸಿದೆ. ಗೋವಾ ತಂಡ ಜಮ್ಮು ಮತ್ತು ಕಾಶ್ಮೀಎದ ವಿರುದ್ಧ 38-35 ಅಂತರದಲ್ಲಿ ಪ್ರಯಾಸದ ಜಯ ಗಳಿಸಿದೆ. ರಾಜಸ್ಥಾನ 61-43 ಅಂತರದಲ್ಲಿ ಜಾರ್ಖಂಡ್ಗೆ ಸೋಲುಣಿಸಿದೆ.
ಪಂಜಾಬ್ ತಂಡ 49-24 ಅಂತರದಲ್ಲಿ ಬಂಗಾಳದ ವಿರುದ್ಧ ಪ್ರಭುತ್ವ ಸಾಧಿಸಿದೆ. ಉತ್ರ ಪ್ರದೇಶ ತಂಡ ಅಸ್ಸಾಂ ವಿರುದ್ಧ 35-19 ಅಂತರದಲ್ಲಿ ಜಯ ಗಳಿಸಿ ಮುನ್ನಡೆದಿದೆ. ತಮಿಳುನಾಡು 47-35 ಅಂತರದಲ್ಲಿ ಪಾಮಡಿಚೇರಿಗೆ ಆಘಾತ ನೀಡಿದೆ.
ಹಾಲಿ ಚಾಂಪಿಯನ್ ಹರಿಯಾಣ 39-19 ಅಂತರದಲ್ಲಿ ದೆಹಲಿ ವಿರುದ್ಧ ಜಯ ಗಳಿಸಿ ಮುನ್ನಡೆದಿದೆ.