ಸರ್ವಿಸಸ್‌ಗೆ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್ ಪಟ್ಟ
ಕಟಕ್: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 71ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ರೈಲ್ವೇಸ್ ವಿರುದ್ಧ 30-30 (6-4) ಅಂತರದಲ್ಲಿ ಜಯ ಗಳಿಸಿದ ಸರ್ವಿಸಸ್ ತಂಡ 2015ರ ನಂತರ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Services clinched the Senior National Men’s Kabaddi Championship for the first time since 2015
ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಪ್ರೋ ಲೀಗ್ ಸ್ಟಾರ್ ಆಟಗಾರ ನವೀನ್ ಕುಮಾರ್ ನಾಯಕತ್ವದ ಸರ್ವಿಸಸ್ ತಂಡಕ್ಕೆ ರೈಲ್ವೇಸ್ ತಂಡ ಉತ್ತಮ ಪೈಪೋಟಿ ನೀಡಿತ್ತು. ಪಂದ್ಯ 30-30 ರಲ್ಲಿ ಸಮಬಲವಾದ ಬಳಿಕ ಟೈ ಬ್ರೇಕರ್ ಮೂಲಕ 6-4 ಅಂತರದಲ್ಲಿ ಸರ್ವಿಸಸ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ರೈಲ್ವೇಸ್ ತಂಡ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿತ್ತು. ಪ್ರಥಮಾರ್ಧದಲ್ಲಿ 16-12 ಅಂತರದಲ್ಲಿ ಮುನ್ನಡೆ ಕಂಡಿತ್ತು. ಆದರೆ ದೇವಾಂಕ್ ದಲಾಲ್, ಭರತ್ ಹೂಡಾ, ರಾಹುಲ್ ಸತ್ಪಾಲ್, ಅಂಕಿತ್ ಜಗ್ಲಾನ್, ಜೈದೀಪ್ ದಹಿಯಾ ಮತ್ತು ನಾಯಕ ನವೀನ್ ಕುಮಾರ್ ಅವರನ್ನೊಳಗೊಂಡ ತಂಡ ಉತ್ತಮ ಪೈಪೋಟಿ ನೀಡಿ ಅಂತಿಮವಾಗಿ 30-30ರಲ್ಲಿ ಪಂದ್ಯವನ್ನು ಸಮಬಲಗೊಳಿಸಿತು. ಟೈ ಬ್ರೇಕರ್ ಮೂಲಕ 6-4 ಅಂತರದಲ್ಲಿ ಜಯ ಗಳಿಸಿದ ಸರ್ವಿಸಸ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
ದಿನದ ಆರಂಭದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸರ್ವಿಸಸ್ 43-35 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ದಿನದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡ ಉತ್ತರ ಪ್ರದೇಶ ವಿರುದ್ಧ 42-34 ಅಂತರದಲ್ಲಿ ಜಯ ಗಳಿಸಿ ಸತತ ಆರನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು.