Thursday, November 21, 2024

ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಮಂಗಳೂರಿನವರಾ?

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 105 ರನ್‌ ಸಿಡಿಸಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿದ ಭಾರತ ಆಟಗಾರ ಶ್ರೇಯಸ್‌ ಅಯ್ಯರ್‌ ಅವರ ತಾಯಿ ಮನೆ ಮಂಗಳೂರು ಎನ್ನಲು ಹೆಮ್ಮೆ ಅನಿಸುತ್ತದೆ. Shreyas Iyer’s mother Rohini from Tulu Nadu, Mangalorean.

ಮುಂಬಯಿಯ ಚೆಂಬೂರಿನಲ್ಲಿ ನೆಲೆಸಿರುವ ಶ್ರೇಯಸ್‌ ಅಯ್ಯರ್‌ ಅವರ ತಂದೆ ಸಂತೋಷ್‌ ಅಯ್ಯರ್‌ ಮೂಲತಃ ತಮಿಳುನಾಡಿವರು. ತಾಯಿ ರೋಹಿಣಿ ಅಯ್ಯರ್‌ ಮೂಲತಃ ಮೂಲ್ಕಿ ಸಮೀಪದ ಕಿನ್ನಿಗೋಳಿಯವರು. ಆದರೆ ಇರುವುದು ಮುಂಬಯಿಯಲ್ಲಿ. ಶ್ರೇಯಸ್‌ ಅಯ್ಯರ್‌ ಜನಿಸಿದ್ದು ಮುಂಬೈಯಲ್ಲಿ. ಇದರಿಂದಾಗಿ ಊರಿನ ನಂಟು ಅಷ್ಟಾಗಿ ಉಳಿದಿಲ್ಲ.

ಈ ಬಾರಿಯ ವಿಶ್ವಕಪ್‌ನಲ್ಲಿ ಶೂನ್ಯದೊಂದಿಗೆ ಅಭಿಯಾನ ಆರಂಭಿಸಿದರೂ ಅಯ್ಯರ್‌ ನಂತರದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಸತತ ಎರಡನೇ ಶತಕ ದಾಖಲಿಸಿರುವ ಅಯ್ಯರ್‌, ನ್ಯೂಜಿಲೆಂಡ್‌ ವಿರುದ್ಧ ದಾಖಲಿಸಿರುವ ಶತಕ ಸೆಮಿಫೈನಲ್‌ನಲ್ಲಿ ದಾಖಲಾದ ವೇಗದ ಶತಕವಾಗಿದೆ. ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್‌ 20೦7ರ ವಿಶ್ವಕಪ್‌ ಫೈನಲ್‌ನಲ್ಲಿ 77 ಎಸೆತಗಳಲ್ಲಿ ಗಳಿಸಿದ ಶತಕ ಇದುವರೆಗಿನ ವೇಗದ ಶತಕವಾಗಿತ್ತು. ಸತತ ಎರಡು ಶತಕಗಳನ್ನು ಗಳಿಸುವ ಮೂಲಕ ಅಯ್ಯರ್‌ ಈಗ ರೋಹಿತ್‌ ಶರ್ಮಾ ಹಾಗೂ ದ್ರಾವಿಡ್‌ ಅವರ ಎಲೈಟ್‌ ಗುಂಪಿಗೆ ಸೇರ್ಪಡೆಯಾಗಿದ್ದಾರೆ. 2019ರ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಸತತ ಮೂರು ಶತಕಗಳನ್ನು ಗಳಿಸಿದ್ದರು. ರಾಹುಲ್‌ ದ್ರಾವಿಡ್‌ 1999ರ ಐಸಿಸಿ ಟೂರ್ನಿಯಲ್ಲಿ ಸತತ ಎರಡು  ಶತಕ ದಾಖಲಿಸಿದ್ದರು. ಅಯ್ಯರ್‌ ಒಂದೇ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ ಸಿಡಿಸುವ ಮೂಲಕ ಸೌರವ್‌ ಗಂಗೂಲಿ ಹಾಗೂ ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನು ಮುರಿದರು. ಯುವಿ ಹಾಗೂ ಸೌರವ್‌ ತಲಾ 7 ಸಿಕ್ಸರ್‌ ಗಳಿಸಿದ್ದರು.

ಇತ್ತೀಚಿಗೆ ಶ್ರೇಯಸ್‌ ಅಯ್ಯರ್‌ ತುಳು ಸಿನಿಯಾ “ಧರ್ಮ ದೈವ”ದ ಪೋಸ್ಟರನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದರು. “ದೈವಗಳು ತುಳುನಾಡಿನ ಪವಿತ್ರ ಶಕ್ತಿ” ಸಿನಿಮಾ ಕೂಡ ಅದೇ ಕತೆಯನ್ನು ಒಳಗೊಂಡಿದ್ದು, ಈ ಅವಕಾಶಕ್ಕಾಗಿ ಧನ್ಯವಾದ ಹೇಳಿದ್ದಾರೆ.

Related Articles