ಒಂಟಿಗೈ ಆಟಗಾರ ಶಯನ್ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ
ಉಡುಪಿ: ಥಾಯ್ಲೆಂಡನ್‌ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi Shayan Shetty created history by winning first ever medal at first World disability snooker championship
ಸಾಂಗ್ಲಿಯಲ್ಲಿ ನೆಲೆಸಿರುವ ಶಯನ್ ಶೆಟ್ಟಿ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಥಾನಾಪೊಯ್ ಸೀಕಾವ್ ವಿರುದ್ಧ 3-1 ಅಂತರದಲ್ಲಿ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಸೀಕಾವ್ ವಿಶ್ವ ದಿವ್ಯಾಂಗರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಜಗತ್ತಿನ ಮೊದಲ ಆಟಗಾನೆಂಬ ಹೆಗ್ಗಳಿಕೆಗೆ ಪಾತ್ರರಾದರೆ ಶಯನ್ ಶೆಟ್ಟಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆಯ ಭಾಗವಾದರು.
ಜಾಗತಿಕ ದಿವ್ಯಾಂಗರ ಸ್ನೂಕರ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಸ್ನೂಕರ್ ತಾರೆ ಎನಿಸಿ ಇತಿಹಾಸ ಬರೆದರು. ಇದೇ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮೋಹಿತ್ ಗುಪ್ತಾ Mohit Gupta 3ನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದಿದ್ದರು.
ಉಡುಪಿಯ ಜನಿಸಿರುವ ಶಯನ್ ಶೆಟ್ಟಿ 9ನೇ ವಯಸ್ಸಿನಲ್ಲಿರುವಾಗ ಲಿಫ್ಟ್ ದುರಂತದಲ್ಲಿ ಎರಡಗೈ ಕಳೆದುಕೊಂಡರು. ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ಶಯನ್ ಶೆಟ್ಟಿ ಈಗ ಪ್ರವಾಸೋದ್ಯಮ ಕಂಪೆನಿಯ ಮಾಲೀಕರಾಗಿದ್ದಾರೆ.
Pleas Subscribe Our SporsMail Channel