Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಲಿಕ್ಕರ್‌ ಉದ್ದಿಮೆಗೆ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌

ಹೊಸದಿಲ್ಲಿ: 2007ರ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಸಿಡಿಸಿ ದಾಖಲೆ ಬರೆದಿದ್ದ  ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಯುವರಾಜ್‌ ಸಿಂಗ್‌ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಈಗ ಮದ್ಯ ಉದ್ದಿಮೆಗೆ ಕಾಲಿಟ್ಟಿದ್ದಾರೆ. Sixer King Yuvaraj Singh started liquor business with his new brand Tequila in US.

ಫಿನೋ ಟೆಕ್ವಿಲಾ ಹೆಸರಿನ ಅತ್ಯಂತ ದುಬಾರಿ ಮದ್ಯದ ಬ್ರಾಂಡನ್ನು ಯುವರಾಜ್‌‌ ಸಿಂಗ್‌ ಅಮೆರಿದಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಮೆಕ್ಸಿಕೋದ ಜೆಲಿಕ್ಸೋದಲ್ಲಿ ಹುಟ್ಟಿದ ಈ ಬ್ರಾಂಡ್‌ ಅಮೆರಿದಕ ಚಿಕಾಗೋದಲ್ಲಿ ಬಿಡುಗಡೆಗೊಂಡಿದೆ. ಫಿನೋ ಟೆಕ್ವಿಲಾ ಬಿಡುಗಡೆಗೆ ಯುವಿ ಕೆಲವು ಗಣ್ಯರನ್ನು ಮಾತ್ರ ಆಹ್ವಾನಿಸಿದ್ದರು. ಸದ್ಯದಲ್ಲಿಯೇ ಈ ಬ್ರಾಂಡ್‌ ಜಾಗತಿಕ ಮಾರುಕಟ್ಟೆಗೆ ಬರಲಿದೆ.

2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ 6 ಎಸೆತಗಳಿಗೆ ಆರು ಸಿಕ್ಸರ್‌ ಸಿಡಿಸಿ ದಾಖಲೆ ಬರೆದಿರುವ ಯುವರಾಜ್‌ ಸಿಂಗ್‌ 12 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿ ದಾಖಲೆ ಬರೆದಿದ್ದರು. ಕ್ಯಾನ್ಸರ್‌ ನೋವನ್ನೇ ನುಂಗಿಕೊಂಡು ವಿಶ್ವಕಪ್‌ ಆಡಿದ್ದ ಯುವರಾಜ್‌ ಚೇತರಿಸಿಕೊಂಡ ನಂತರ ಯು ವಿ ಕ್ಯಾನ್‌ ಎಂಬ ಎನ್‌ಜಿಒ ಸ್ಥಾಪಿಸಿ ದೇಶದೆಲ್ಲೆಡೆ ಕ್ಯಾನ್ಸರ್‌ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು


administrator