Majesstine Sports ಇದು ಕ್ರೀಡಾ ಲೋಕದ ಹೊಸ ಅಚ್ಚರಿ
ಸ್ಪೋರ್ಟ್ಸ್ ಮೇಲ್ ವರದಿ
ಎಷ್ಟೋ ಕ್ರೀಡಾ ಪಟುಗಳು ಸಾಧನೆ ಮಾಡುತ್ತಾರೆ, ಎಷ್ಟೋ ಕ್ರೀಡಾ ಆಡಳಿತಗಾರರು ದಕ್ಷ ಆಡಳಿತ ನೀಡಿ ಮರೆಯಾಗುತ್ತಾರೆ. ಆದರೆ ಉತ್ತಮ ಸಾಧಕ, ಉತ್ತಮ ಆಡಳಿತಗಾರರಾಗಿಯೂ ಕ್ರೀಡಾ ಬದುಕಿನ ನಂತರವೂ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವವರು ಅತಿ ವಿರಳ. ಅಂತ ವಿರಳ ಪಂಕ್ತಿಯ ಸಾಧರ ಪಟ್ಟಿಯಲ್ಲಿ ಸೇರುತ್ತಾರೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಾಜಿ ಕ್ಯುರೇಟರ್ ನಾರಾಯಣ ರಾಜು.
ಬೆಂಗಳೂರಿನ NRA ಗ್ರೌಂಡ್ಸ್ ನ ಪಿಚ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನೋಡಿದಾಗಲೆಲ್ಲ ನಾರಾಯಣ ರಾಜು ಅವರ ಕಾರ್ಯಕ್ಷಮತೆ ಮತ್ತು ಬದ್ಧತೆ ಕಣ್ಣ ಮುಂದೆ ಕಟ್ಟುತ್ತದೆ. ಸತತ ಮೂರು ವರ್ಷಗಳ ಕಾಲ ಬಿಸಿಸಿಐನಿಂದ ಐಪಿಎಲ್ ನ ಉತ್ತಮ ಪಿಚ್ ಗೌರವಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆಯ್ಕೆಯಾಗಿರುವುದರ ಹಿಂದೆ ನಾರಾಯಣ್ ರಾಜು ಅವರ ಶ್ರಮವಿದೆ. ಇಂಥ ಕ್ರೀಡಾ ಸಂಘಟಕ, ಆಡಳಿತಗಾರ, ಕ್ಯುರೇಟರ್ ಮತ್ತು ದೂರದೃಷ್ಟಿಯುಳ್ಳ ನಾರಾಯಣ ರಾಜು ಅವರು ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ ನಲ್ಲಿ ವಿಶ್ವದರ್ಜೆಯ ಕ್ರೀಡಾ ಅಕಾಡೆಮಿಯೊಂದನ್ನು ಸ್ಥಾಪಿಸಿದ್ದಾರೆ. ಅದೇ ದಿ ಮೆಜಿಸ್ಟೈನ್ ಸ್ಪೋರ್ಟ್ಸ್ (The Majesstine Sports). ಮಕ್ಕಳಾದ ಸುಪ್ರೀತ್ ಮತ್ತು ಸುನಿಲ್ ಇದರ ಆಧಾರ ಸ್ತಂಭ ಎನಿಸಿದ್ದಾರೆ. ಸುನಿಲ್ ರಾಜು ರಾಜ್ಯ ಕಂಡ ಅತ್ಯತ್ತಮ ಕ್ರಿಕೆಟಿಗ. ಸುಪ್ರೀತ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು ನಂತರ ಉದ್ಯೋಗವನ್ನು ತೊರೆದು ಸಂಪೂರ್ಣ ಕ್ರಿಕೆಟ್ ಬದುಕಿನಲ್ಲಿ ತಮ್ಮನ್ನು ತೊಡಗಿಸಕೊಂಡವರು.
ಬದುಕು ನೀಡುವ ಅಕಾಡೆಮಿ
ಒಳಾಂಗಣ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ, ಫುಟ್ಬಾಲ್ ನ ಹೊಸ ಸ್ವರೂಪ ಫುಟ್ಸಾಲ್ ಮತ್ತು ಪುಟ್ಟ ಮಕ್ಕಳಿಗಾಗಿ ವಿಶೇಷ ಕ್ರೀಡಾ ವಲಯಗಳನ್ನು ನಿರ್ಮಿಸಲಾಗಿದೆ, ಜಿಮ್, ರೆಸ್ಟೋರೆಂಟ್, ಫಿಸಿಯೋಥೆರಪಿಸ್ಟ್ ಮತ್ತು ನ್ಯೂಟ್ಟಿಷನಿಸ್ಟ್, ವಸತಿ ಸೌಲಭ್ಯ ಮತ್ತು ಸಮಾರಂಭಗಳಿಗೆ ಬಾಂಕ್ವೆಟ್ ಸಬಾಂಗಣ ಕೂಡ ಇದೆ. ಒಬ್ಬ ಅಂತಾರಾಷ್ಟ್ರೀಯ ಕ್ರೀಡಾಪಟು ಸಜ್ಜಾಗಲು ವಿಶ್ವದರ್ಜೆಯ ಯಾವೆಲ್ಲ ಸೌಲಭ್ಯಗಳ ಅಗತ್ಯ ಇದೆಯೋ ಅವೆಲ್ಲವೂ ಒಂದೆ ಸೂರಿನಡಿ ನೀಡುತ್ತದೆ The Majesstine Sports.
ಉನ್ನತ ದರ್ಜೆಯ ಅನುಭವಿ ತರಬೇತುದಾರರು, ಉತ್ತಮ ಸೌಲಭ್ಯ, ವೃತ್ತಿಪರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಈ ವಿಶ್ವದರ್ಜೆಯ ಕ್ರೀಡಾ ಅಕಾಡೆಮಿ ಬೆಂಗಳೂರಿಗೇ ಹೊಸತಾಗಿದ್ದು, ಭಾರತದಲ್ಲಿ ವಿರಳ ಪಂಕ್ತಿಯಲ್ಲಿ ಕಾಣಸಿಗುತ್ತದೆ. ಆರೋಗ್ಯದ ಜತೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆ ಮಾಡಿ ರಾಜ್ಯ, ದೇಶಕ್ಕೆ ಕೀರ್ತಿ ತರುವುದರ ಜತೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಈ ಅಕಾಡೆಮಿ ಎಲ್ಲ ರೀತಿಯಲ್ಲಿ ನೆರವಾಗಲಿದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ನಾರಾಯಣ್ ರಾಜು. ಇದು ತರಬೇತಿಯ ಜತೆಯಲ್ಲಿ ಪ್ರತಿಭಾನ್ವೇಷಣೆಯ ಕೇಂದ್ರವೂ ಹೌದು. ಇನ್-ಹೌಸ್ ಜಿಮ್, ಉಷ್ಣಾಂಶ ನಿಯಂತ್ರಿತ ಈಜುಕೊಳ, ಸ್ಪಾ, ಕ್ರೀಡಾಪಟುಗಳಿಗೆ ಸೂಕ್ತವಾದ ಪೌಷ್ಠಿಕಾಂಶಯುಕ್ತ ಆಹಾರ, ಅಕಾಡೆಮಿಯಲ್ಲಿಯೇ ಸಿದ್ಧಗೊಂಡ ಆಹಾರ, ಕ್ರೀಡೆಗಳಿಗೆ ಅನುಗುಣವಾದ ಆಹಾರ ಪದ್ಧತಿ, ಅಂತಾರಾಷ್ಟ್ರೀಯ ಗುಣಮಟ್ಟದ ವಸತಿ ಸೌಲಭ್ಯ, ಶಿಕ್ಷಣ, ಸಿಸಿಟಿವಿ ಸೌಲಭ್ಯ, ಶುದ್ಧವಾದ ಕುಡಿಯುವ ನೀರು, ಬಿಸಿ ನೀರಿನ ಸೌಲಭ್ಯ ಮತ್ತು ಕ್ರೀಡಾಪಟುಗಳ ಆರೋಗ್ಯದ ಬಗ್ಗೆ ಗಮನಹರಿಸುವದು ಹೀಗೆ ಪ್ರತಿಯೊಂದು ಸೌಲಭ್ಯಗಳನ್ನು ಈ ಅಕಾಡೆಮಿ ಹೊಂದಿರುತ್ತದೆ.
ಬ್ಯಾಡ್ಮಿಂಟನ್: The Majesstine Sports ಇಲ್ಲಿ ಎಲ್ಲ ಕ್ರೀಡೆಗಳಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ, ಭಾರತದಲ್ಲಿ ಈಗ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಹೆಚ್ಚುತ್ತಿದ್ದು, ಬ್ಯಾಡ್ಮಿಂಟನ್ ಲೀಗ್ ಗಳು ನಡೆಯುತ್ತಿರುವುದರಿಂದ ಆಟಗಾರರಿಗೆ ಉತ್ತಮ ಬೇಡಿಕೆಯೂ ಇದೆ. ಬ್ಯಾಡ್ಮಿಂಟನ್ ನಲ್ಲಿ ಭಾರತ ಇಂದು ಜಾಗತಿಕ ಶಕ್ತಿಯಾಗಿ ರೂಪುಗೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡ ನಾರಾಯಣ್ ರಾಜು ಅವರು ಅಂತಾರಾಷ್ಟ್ರೀಯ ಗ್ರೇಡ್ ನ 8 ಬ್ಯಾಡ್ಮಿಂಟನ್ ಕೋರ್ಟ್ ಗಳನ್ನು ನಿರ್ಮಿಸಿದ್ದಾರೆ. ಎಲ್ಲವೂ ತೇಗ ಮರದ ಹಾಸು ಮತ್ತು ಲೀ ನಿಂಗ್ ಸೂಪರ್ ಬ್ಯಾಡ್ಮಿಂಟನ್ ಮ್ಯಾಟ್ ಗಳನ್ನು ಕೋರ್ಟ್ ಗೆ ಬಳಸಲಾಗಿದೆ. ಇಲ್ಲಿಯ ಬೆಳಕಿನ ವ್ಯವಸ್ಥೆ, ಕೋರ್ಟ್, ಪರಿಸರ, ಗಾಳಿಯ ವ್ಯವಸ್ಥೆ, ಅರೆನಾದ ಎತ್ತರ ಇವುಗಳು ಸೂಪರ್ ಸಿರೀಸ್ ಆಯೋಜಿಸುವ ಗುಣಮಟ್ಟ ಹೊಂದಿದ ಕೋರ್ಟ್ ಗಳಾಗಿವೆ, ಇದರಿಂದಾಗಿ ಈ ಅಕಾಡೆಮಿಯ ಕೋರ್ಟ್ ಗಳನ್ನು ಭಾರತದಲ್ಲೇ ಅತ್ಯುತ್ತಮ ಕೋರ್ಟ್ ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೂರ್ನಿಗಳನ್ನು ನಡೆಸಲು ಇದು ಸೂಕ್ತವಾದ ಸ್ಥಳವಾಗಿದೆ.
ಟೇಬಲ್ ಟೆನಿಸ್: ಒಲಿಂಪಿಕ್ಸ್ ಕ್ರೀಡೆಯಾಗಿರುವ ಟೇಬಲ್ ಟೆನಿಸ್ ಗೆ The Majesstine Sports ನಲ್ಲಿ ತರಬೇತಿ ಪಡೆಯಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಇದೆ. ಭಾರತದಲ್ಲಿ ಟೇಬಲ್ ಟೆನಿಸ್ ತರಬೇತಿ ನೀಡಲು ಉತ್ತಮ ಸೌಲಭ್ಯಗಳನ್ನು ಹೊಂದಿರುವ ತರಬೇತಿ ಕೇಂದ್ರಗಳಲ್ಲಿ ದಿ ಮೆಜಿಸ್ಟೈನ್ ಸ್ಪೋರ್ಟ್ಸ್ ಕೂಡ ಒಂದು.8 ಸ್ಟ್ಯಾಗ್ ಅಮೆರಿಕನ್ ಟೇಬಲ್ ಟೆನಿಸ್ ಟೇಬಲ್ ಗಳು, 12 ಎಂಎಂ ಮಲ್ಟಿ ಸ್ಪೋರ್ಟ್ಸ್ ಮ್ಯಾಟ್, ಎಲ್ಇಡಿ ಲೈಟಿಂಗ್, (700-LUX), ಉತ್ತಮ ರೀತಿಯ ಗಾಳಿ ವ್ಯವಸ್ಥೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳನ್ನು ನಡೆಸಲು ಯೋಗ್ಯವಾದ ವಾತಾವರಣ, ಎಲ್ಲ ಹಂತದ ಫೀಡಿಂಗ್ ರೊಬೊಟ್ಸ್, ವೈಕ್ತಿಕವಾಗಿ ಆಡುವವರು, ಕಾರ್ಪೋರೆಟ್ ಟೂರ್ನಿಗಳನ್ನು ನಡೆಸುವವರು, ಗಂಟೆಗಳ ಆಧಾರದಲ್ಲಿ ಆಡುವವರು ಮತ್ತು ಸದಸ್ಯರುಗಳು ಕೂಡ ಇಲ್ಲಿಯ ಟೇಬಲ್ ಬಳಸಬಹುದು.
ಈಜುಕೊಳ: ಜಾಗತಿಕ ಈಜಿಗೆ ಭಾರತದ ಕೊಡುಗೆ ಅಪಾರ. ಇದರಲ್ಲಿ ಕರ್ನಾಟಕದ ಪಾಲು ಸ್ಮರಣೀಯ. ಬೆಂಗಳೂರಿನಲ್ಲಿ ಈಜುಕೊಳಗಳು ಇಲ್ಲವೆಂದಲ್ಲ. ಆದರೆ ಅಣತಾರಾಷ್ಟ್ರೀಯ ಗುಣಮಟ್ಟದ ಈಜುಕೊಳಗಳು ವಿರಳ. ಹೆಚ್ಚಿನವುಗಳು ತರಬೇತಿಯನ್ನೇ ಗಮನದಲ್ಲಿರಿಸಿಕೊಂಡು ಹುಟ್ಟಿದವುಗಳು. ಹೊರಗಿನ ತಾಪಮಾನ ಏನೇ ಇರಲಿ ಈಜುಗಾರರಿಗೆ ಅನುಕೂಲವಾಗು ತಾಪಮಾನವನ್ನು ಹೊಂದಿರುವುದು ಇಲ್ಲಿಯ ಈಜುಕೊಳಗಳ ವಿಶೇಷತೆ. ಅಂತಾರಾಷ್ಟ್ರೀಯ ಈಜು ಸಂಸ್ಥೆಯ ನಿಯಮಗಳಿಗೆ ಅನುಸಾರವಾಗಿ ಇಲ್ಲಿಯ ಈಜುಕೊಳಗಳನ್ನು ನಿರ್ಮಿಸಲಾಗಿದೆ.
ಜರ್ಮನಿಯ Desjoyaux Pools ಕಂಪೆನಿಯು ಇಲ್ಲಿಯ ಈಜುಕೊಳಗಳನ್ನು ನಿರ್ಮಿಸಿದೆ. ಇದು 1967ರಿಂದ ಜಾಗತಿಕ ಮಟ್ಟದಲ್ಲಿ ಈಜುಕೊಳಗಳನ್ನು ನಿರ್ಮಿಸುತ್ತಿರುವ ಕಂಪೆನಿಯಾಗಿದೆ. ಚರ್ಮ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರದಂತೆ ಇಲ್ಲಿ ನೀರನ್ನು ವ್ಯವಸ್ಥೆಗೊಳಿಸಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕ ಈಜಕೊಳವಿದೆ.
ಮಕ್ಕಳಿಗಾಗಿ ವಿಶೇಷ ವಲಯ: Majesstine Kids ಇದು ಪುಟಾಣಿ ಮಕ್ಕಳಿಗಾಗಿಯೇ ನಿರ್ಮಿಸಿದ ಕ್ರೀಡಾ ಸೌಲಭ್ಯ. ಇದು ನಿಷೇಧಿತ ಪ್ರದೇಶವಾಗಿದೆ. ಏಕೆಂದರೆ ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಹೆತ್ತವರಿಗೆ ಮಾತ್ರ ಪ್ರವೇಶವಿರುತ್ತದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಆಟಿಕೆಗಳನ್ನು ಅಳವಡಿಸಲಾಗಿದೆ.
ಇಲ್ಲಿಯ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ಅನುಕೂಲವಾಗುವಂತೆ MEMBERSHIP PACKAGES ಗಳ ವ್ಯವಸ್ಥೆ ಮಾಡಲಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗು ರೀತಿಯಲ್ಲಿ ಇಲ್ಲಿ ಬೆಲೆಯನ್ನು ನಿಗದಿಪಡಿಸಲಾಗಿದೆ. ಮಕ್ಕಳ ಕಾರ್ಯಕ್ರಮಗಳಿಗೆ ಪ್ರತ್ಯೇಕವಾದ ರಿಯಾಯಿತಿ ಇರುತ್ತದೆ. ಸದ್ಯ ಗಂಟೆಗೆ 65 ರೂ.ಗಳನ್ನು ನಿಗದಿಪಡಿಸಲಾಗಿದೆ.
ಸ್ಪೋರ್ಟ್ಸ್ ಹುಟ್ಟುಹಬ್ಬ!: ಅರ್ಥವಿಲ್ಲದ ರೀತಿಯಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುವ ಬಲದಲು The Majesstine Sports ನಲ್ಲಿ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಬಹುದು. ಈಗ ಮಕ್ಕಳ ಹುಟ್ಟುಹಬ್ಬ ಆಚರಣೆಗೆ ಇದು ಸೂಕ್ತ ಸ್ಥಳವೆನಿಸಿದೆ. ವಿಶೇಷ ಆಚರಣೆಗಳ ಸಂದರ್ಭದಲ್ಲಿ ಹಿರಿಯರು ಬ್ಯಾಂಕ್ವೆಟ್ ಹಾಲ್ ಮತ್ತು ಸ್ಪೋರ್ಟ್ಸ್ ಅರೆನಾದಲ್ಲಿದ್ದರೆ ಮಕ್ಕಳು ಕಿಡ್ಸ್ ವಿಭಾಗದಲ್ಲಿ ಸಂಭ್ರಮಿಸುತ್ತಿರಬಹುದು. ಬೆಂಗಳೂರಿನ ಹೆಚ್ಚಿನ ಶಾಲೆಗಳಿಗೆ ಕ್ರೀಡಾಂಗಣವೇ ಇರುವುದಿಲ್ಲ, ಇಂಥ ಶಾಲೆಯವರು ಇಲ್ಲಿಯ ಅರೆನಾವನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ದಿನದ ಬಾಡಿಗೆ ಮತ್ತು ವರ್ಷಾವಧಿಯ ಬಾಡಿಗೆಯೂ ಸಿಗುತ್ತದೆ.
ಫುಟ್ಸಾಲ್: ಕ್ರಿಕೆಟ್ ನಲ್ಲಿ ಟಿ20 ಹೇಗೆ ಜನಪ್ರಿಯಗೊಳ್ಳುತ್ತಿದೆಯೋ ಅದೇ ರೀತಿ ಫುಟ್ಬಾಲ್ ನಲ್ಲಿ ಫುಟ್ಸಾಲ್ ಈಗ ಜನಪ್ರಿಯವಾಗುತ್ತಿದೆ. ಫಿಫಾ ಮತ್ತು ಯುಇಎಫ್ ಎ ಈ ಮಾದರಿಯ ಫುಟ್ಬಾಲ್ ಗೆ ಮಾನ್ಯತೆ ನೀಡಿದೆ. The Majesstine Sports ದಲ್ಲಿ 5 ಸೈಡ್ ಫುಟ್ಸಾಲ್ ಅರೆನಾ ಇದೆ. 12 ಎಂಎಂ ಸಿಂಥಟಿಕ್ ಮಲ್ಟಿ ಸ್ಪೋರ್ಟ್ಸ್ ಮಾಲ್, ಉತ್ತಮ ಹವಾನಿಯಂತ್ರಣ, ಲಕ್ಸ್ ಲೆವೆಲ್ಸ್ ಲೈಟಿಂಗ್ ಇವೆಲ್ಲವೂ ಒಳಾಂಗಣ ಫುಟ್ಸಾಲ್ ಗೆ ಹೊಸ ಮೆರುಗು ನೀಡಲಿದೆ.
ಕ್ರೀಡೆಯನ್ನೇ ಬದುಕಾಗಿ ರೂಪಿಸಿಕೊಳ್ಳುವವರಿಗೆ ಇಲ್ಲೇ ಉಳಿದುಕೊಂಡು ಶಿಕ್ಷಣದ ಜತೆಯಲ್ಲಿ ಕ್ರೀಡೆಯಲ್ಲಿ ಮುಂದುವರಿಯವ ಅವಕಾಶವಿದೆ. ಉತ್ತಮ ವಸತಿ ಸೌಲಭ್ಯ, 24 ಗಂಟೆಗಳ ಕಾಲ ಬಿಸಿ ನೀರು, ಎಲ್ಲಾ ಸೌಲಭ್ಯಗಳಿಗೂ ಸಿಸಿ ಟಿವಿ ಅಳವಡಿಕೆ, ಅಭ್ಯಾಸ ಮತ್ತು ಮನರಂಜನಾ ವಲಯ, ವಾಷಿಂಗ್ ಮೆಷಿನ್, ಡ್ರೈಯಜ್ ಸೌಲಭ್ಯ, ಹೋಮ್ ಸ್ಕೂಲಿಂಗ್ ಸೌಲಭ್ಯವೂ ಇರುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ
The Majesstine Sports
383/1-10, 5th Cross, Garebhavipalya,
Opp HSR Trinity Apartments,
Bandepalya, Garvebhavi Palya, Bengaluru,
Karnataka – 560 068
Phone
Call us on
Write us to