Friday, April 19, 2024

ನೀವು 40 ವರ್ಷ ಮೇಲ್ಪಟ್ಟವರೇ? …. ಬನ್ನಿ ಟೆನಿಸ್ ಬಾಲ್ ಟೂರ್ನಿ ಆಡಿ!!

ಸ್ಪೋರ್ಟ್ಸ್ ಮೇಲ್ ವರದಿ, ಸುರತ್ಕಲ್

Forty is the old age of youth; fifty is the youth of old age: Victor Hugo

ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕದ ಅತ್ಯಂತ ಪ್ರಸಿದ್ಧ ಕ್ಲಬ್ ಗಳಲ್ಲಿ ಒಂದು. ಇಲ್ಲಿ ಅನೇಕ ಕ್ರಿಕೆಟಿಗರು 90ರ ದಶಕದಲ್ಲಿ ಆಡಿ ಮಿಂಚಿದ್ದಾರೆ. ಕೆಲವರು ವೃತ್ತಿಪರ ಕ್ರಿಕಟಿಗರೂ ಆಗಿದ್ದಾರೆ. ಅದೇ ರೀತಿ ರಾಜ್ಯದ ಅನೇಕ ಕ್ಲಬ್ ಗಳಲ್ಲಿ 40 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಆಟಗಾರರು ಈಗಲೂ ಅಭ್ಯಾಸ ಮಾಡುತ್ತಿದ್ದು, ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಆದರೆ ಟೂರ್ನಿಗಳಲ್ಲಿ ಆಡುವ ಅವಕಾಶ ಅವರಿಗೆ ಬಹಳ ಕಡಿಮೆ. ಅಂಥವರನ್ನು ಗಮನದಲ್ಲಿರಿಸಿಕೊಂಡು ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಮೇ 1 ರಿಂದ 10 ರ ವರೆಗೆ ನಡೆಯಲಿರುವ 1 ಕೋಟಿ ರೂ. ವೆಚ್ಚದ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್-2021 ರಲ್ಲಿ 40 ಮತ್ತು ಅದಕ್ಕಿಂತ ಮೇಲ್ಪಟ್ಟ ಕ್ರಿಕೆಟಿಗರಿಗೆ ಪ್ರತ್ಯೇಕವಾದ ಟೂರ್ನಿ ನಡೆಸಲು ತೀರ್ಮಾನಿಸಿದ್ದಾರೆ.

“ರಾಜ್ಯದಲ್ಲಿ 90ರ ದಶದಕಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಡಿದ ಅನೇಕ ಆಟಗಾರರಿದ್ದಾರೆ. ಅವರಲ್ಲಿ ಈಗಲೂ ಆಡುವ ಉತ್ಸಾಹವಿದೆ. ಅವರ ಉತ್ಸಾಹಕ್ಕೆ ನಮ್ಮ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್ ವೇದಿಕೆಯಾಗಲಿ ಎಂಬುದೇ ಆಸೆ. ಎಲ್ಲರಂತೆ ಅವರಿಗೂ ಬಹುಮಾನವಿರುತ್ತದೆ. ಚಾಂಪಿಯನ್ನರಿಗೆ 2 ಲಕ್ಷ ಹಾಗೂ ರನ್ನರ್ ಅಪ್ ಗೆ 1 ಲಕ್ಷ ರೂ. ಬಹುಮಾನವಿರುತ್ತದೆ. ಈ ಕ್ರೀಡಾ ಉತ್ಸಾಹ ಮತ್ತು ಉಲ್ಲಾಸ ಸದಾ ಜೀವಂತವಾಗಿರಬೇಕೆಂಬುದೇ ನಮ್ಮ ಉದ್ದೇಶ,” ಎಂದು ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ತಿಳಿಸಿದ್ದಾರೆ.

ವಿಜೇತರಿಗೆ 2 ಲಕ್ಷ ರೂ. ಬಹುಮಾನ

ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್ ನಲ್ಲಿ ಭಾಗವಹಿಸಲು ಆಶಿಸುವ ಆಟಗಾರರು ಮಾರ್ಚ್ 30 ರ ಒಳಗಾಗಿ ರೂ. 1,000ವನ್ನು ನೀಡಿ ತಮ್ಮ ಹೆಸರನ್ನು ನೋದಾಯಿಸಿಕೊಳ್ಳಬೇಕು. ವಿಜೇತ ತಂಡಕ್ಕೆ 2 ಲಕ್ಷ ರೂ.ನಗದು ಬಹುಮಾನ, ರನ್ನರ್ ಅಪ್ ಗೆ 1 ಲಕ್ಷ ರೂ, ನಗದು ಬಹುಮಾನವಿರುತ್ತದೆ. ಪ್ರತಿಯೊಂದು ರನ್ ಕೂಡ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ವಿಕೆಟ್ ಗಳಿಕೆಗೂ ನಗದು ಬಹುಮಾನವಿರುತ್ತದೆ. ಜತೆಯಲ್ಲಿ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನೂ ನೀಡಲಾಗುತ್ತದೆ.

ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್:

ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯಲಿರುವ ಟಾರ್ಪೆಡೊಸ್ ಸ್ಪೋರ್ಟ್ಸ್ ಕಾರ್ನಿವಲ್ ಮೇ 1ರಿಂದ 10ರ ವರೆಗೆ ಮಂಗಳೂರು ಮತ್ತು ಕುಂದಾಪುರದ  ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಸುಮಾರು 1 ಕೋಟಿ ರೂ,ಗಳಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ ಈ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿದೆ.

 

Related Articles