ಕೊಲಂಬೊ: ಕ್ರಿಕೆಟ್‌ನಲ್ಲಿರುವ ಭ್ರಷ್ಟಾಚಾರವನ್ನು ಬಲಯಲಿಗೆಳೆದುದಕ್ಕಾಗಿ ತನ್ನ ಜೀವಕ್ಕೆ ಅಪಾಯವಿದೆ, ಏನಾದರೂ ಅನಾಹುತ ನಡೆದರೆ ಅದಕ್ಕೆ ಲಂಕೆಯ ಅಧ್ಯಕ್ಷ ಹಾಗೂ ಪ್ರಮುಖ ಅಧಿಕಾರಿಗಳೇ ಕಾರಣ ಎಂದ ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಘೆ ಅವರನ್ನು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ. Sri Lanka sports minister sacked after claiming threat to his life for exposing corruption in cricket.
ವಾರದ ಸಂಸದೀಯ ಸಭೆಗೆ ಹಾಜರಾದ ರಣಸಿಂಘೆ ಅವರಿಗೆ ಅಧ್ಯಕ್ಷರು ಸಹಿ ಮಾಡಿದ ವಜಾ ಪತ್ರವನ್ನು ನೀಡಲಾಯಿತು. ಈ ಕೂಡಲೇ ಅನ್ವಯವಾಗುವಂತೆ ರಣಸಿಂಘೆ ಅವರನ್ನು ಯುವಜನ ಮತ್ತು ಕ್ರೀಡಾ ಇಲಾಖೆ ಮತ್ತು ನೀರಾವರಿ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಆಮದು ಮಾಡಿಕೊಂಡ ವಾಹನದ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿರುವುದು ಕೂಡ ರಣಸಿಂಘೆ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲು ಮತ್ತೊಂದು ಕಾರಣವಾಗಿತ್ತು.
“ಕ್ರಿಕೆಟ್‌ನಲ್ಲಿರುವ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಕ್ಕೆ ನನಗೆ ಸಿಕ್ಕ ಫಲ ಇದು, ಲೆಕ್ಕಪತ್ರದ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಂಡಿರುವೆ,” ಎಂದು ಶ್ರೀಲಂಕಾದ ಕ್ರಿಕೆಟ್ ಮಂಡಳಿಗೆ ಮಧ್ಯಂತರ ಸಮಿತಿಯನ್ನು ರಚಿಸಿರುವುದನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಡಾ ಸಚಿವರೇ ಭ್ರಷ್ಟಾಚಾರವನ್ನು ಬಯಲು ಮಾಡಿರುವುದನ್ನು ಸಹಿಸಿಕೊಳ್ಳಲಾಗದೆ ರಾಜಕೀಯ ಸೇಡು ತೀರಿಸಿಕೊಂಡಿದ್ದಾರೆ ಎಂದು ಕ್ರೀಡಾ ಸಚಿವರು ಆರೋಪಿಸಿದ್ದಾರೆ.