Thursday, November 21, 2024

ಬದುಕಿನಂಗಳದಿಂದ ನೆನಪಿನಂಗಳಕ್ಕೆ ಸರಿದ ಅಂಕಲ್‌ ಪರ್ಸಿ

ಕೊಲಂಬೋ: ಜಗತ್ತಿನ ಶ್ರೇಷ್ಠ ಕ್ರಿಕೆಟ್‌ ತಂಡವಾದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಶುಭ ಹಾರೈಸುತ್ತಾರೆಂದರೆ ಆ ಕ್ರಿಕೆಟ್‌ ಅಭಿಮಾನಿ ಎಷ್ಟು ಜನಪ್ರಿಯರಾಗಿರಬಹದು? ಹೌದು ಇಂದು ನಮ್ಮನ್ನಗಲಿದ ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿ ಪರ್ಸಿ ಅಬೇಸೇಕರ ಯಾನೆ ಅಂಕಲ್‌ ಪರ್ಸಿ ಕ್ರಿಕೆಟ್‌ ಜಗತ್ತಿನ ಪ್ರೀತಿಯ ಅಭಿಮಾನಿ. Sri Lankan iconic cricket fan Uncle Percy Passes away

ಏಷ್ಯಕಪ್‌‌ ಆಡಲು ಭಾರತ ತಂಡ ಶ್ರೀಲಂಕಾಕ್ಕೆ ತೆರಳಿದ್ದಾಗ ನಾಯಕ ರೋಹಿತ್‌ ಶರ್ಮಾ ಅವರು ಅಂಕಲ್‌ ಪರ್ಸಿಯ ಮನೆಗೆ ಭೇಟಿ ನೀಡಿದ್ದರು. ವಿರಾಟ್‌ ಕೊಹ್ಲಿ ಕೂಡ ಡ್ರೆಸ್ಸಿಂಗ್‌ ರೂಮ್‌ಗೆ ಕರೆದು ಮಾತನಾಡಿಸಿದ್ದರು.

87 ವರ್ಷದ ಅಂಕಲ್‌ ಪರ್ಸಿ, ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶ್ರೀಲಂಕಾ ಕ್ರಿಕೆಟಿಗರು ಆರೋಗ್ಯ ವೆಚ್ಚಕ್ಕಾಗಿ ಇತ್ತೀಚಿಗೆ 12 ಲಕ್ಷ ರೂ. ನೀಡಿದ್ದರು. ಅರ್ಜುನ ರಣತುಂಗ, ಕುಮಾರ ಸಂಗಕ್ಕಾರ ಹಾಗೂ ಸನತ್‌ ಜಯಸೂರ್ಯ ಅವರಂತ ಆಟಗಾರರು ಅಂಕಲ್‌ ಪರ್ಸಿ ಅವರನ್ನು ಲಂಕಾ ಕ್ರಿಕೆಟ್‌ನ ಒಂದು ಭಾಗವೆಂಬಂತೆ ನೋಡಿಕೊಂಡಿದ್ದರು. ಇದರಿಂದಾಗಿ ಈ ಕ್ರಿಕೆಟ್‌ ಅಭಿಮಾನಿ ಕ್ರಿಕೆಟ್‌ ಜಗತ್ತಿನ ಭಾಗವಾಗಿ ಬೆಳೆದರು.

1979ರ ವಿಶ್ವಕಪ್‌ನಿಂದ ಹಿಡಿದು ಈ ವರ್ಷದ ಕ್ರಿಕೆಟ್‌ ವಿಶ್ವಕಪ್‌ ಹೊರತುಪಡಿಸಿ ಎಲ್ಲ ಪ್ರಮುಖ ಕ್ರಿಕೆಟ್‌ ಟೂರ್ನಿಗಳಲ್ಲಿ ಅಂಕಲ್‌ ಪರ್ಸಿ ಪಾಲ್ಗೊಳ್ಳುತ್ತಿದ್ದರು.

ಅಂತಾರಾಷ್ಟ್ರೀಯ ಕಾರ್ಟೂನಿಸ್ಟ್‌ ಸತೀಶ್‌ ಆಚಾರ್ಯ ಅವರು ರಚಿಸಿದ ಕಾರ್ಟೂನ್‌ ಅಂಕಲ್‌ ಪರ್ಸಿ ಅವರ ಕ್ರಿಕೆಟ್‌ ಪ್ರತಿಯನ್ನು ಪ್ರತಿಬಿಂಭಿಸುತ್ತದೆ.

Related Articles