ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರಕ್ಕೆ ಚಾಂಪಿಯನ್ ಪಟ್ಟ
ಬೆಂಗಳೂರು: ಡೆಲ್ಲಿ ಪಬ್ಲಿಕ್ ಸ್ಕೂಲ್ ವೈಟ್‌ಫೀಲ್ಡ್ ವಿರುದ್ಧ 1 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಬೆಂಗಳೂರು ಪೂರ್ವ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ 14 ವರ್ಷ ವಯೋಮಿತಿಯ III ಡಿವಿಜನ್ ಶಾಲಾ ಟೂರ್ನಮೆಂಟ್ ಬಿ.ಟಿ. ರಾಮಯ್ಯ ಶೀಲ್ಡ್ ಗೆದ್ದುಕೊಂಡಿದೆ. Sri Sri Ravishankar Vidya Mandir won B T Ramaiah Shield for Under 14 School Tournament
ಆರ್‌ಎಸ್‌ಐ ಅಂಗಣಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪಬ್ಲಿಕ್ ಸ್ಕೂಲ್ ವೈಟ್‌ಫೀಲ್ಡ್ 25.4 ಓವರ್‌ಗಳಲ್ಲಿ 61 ರನ್‌ಗೆ ಆಲೌಟ್ ಆಯಿತು. ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರದ ಪರ ಪಾರ್ಥ 9 ರನ್‌ಗೆ 3 ವಿಕೆಟ್, ಅಥರ್ವ 16 ರನ್‌ಗೆ 2 ವಿಕೆಟ್ ಹಾಗೂ ಅನ್ಷ್ ಶುಕ್ಲ ಯಾವುದೇ ರನ್ ನೀಡದೆಯೇ 3 ವಿಕೆಟ್ ಗಳಿಸುವ ಮೂಲಕ ಡೆಲ್ಲಿ ಪಬ್ಲಿಕ್ ಸ್ಕೂಲ್ ತಂಡ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿತು. 62 ರನ್‌ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ್ ತಂಡ 29.1 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಡೆಲ್ಲಿ ಪಬ್ಲಿಕ್ ಸ್ಕೂಲ್ ಪರ ಸೋಪ್ಯಾನ್ ಘೋಷ್ 10 ರನ್‌ಗೆ 3 ವಿಕೆಟ್, ವೈಷ್ಣವ್ ಪಿ. ರಮೇಶ್ 11 ರನ್‌ಗೆ 2 ವಿಕೆಟ್, ಆಯಾನ್ ಅಲಿ 9 ರನ್‌ಗೆ 2 ವಿಕೆಟ್ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ನಿಂತವರು: (ಎಡದಿಂದ ಬಲಕ್ಕೆ) ಜಿ.ಪಿ. ಶಶಾಂಕ್, ಆದಿತ್ಯ ಕಶ್ಯಪ್, ಅಭ್ಯುದಯ ಸಿಂಗ್, ಪವನ್ ಜೆ ಬಿ, ದೈವಿಕ್ ಶರ್ಮಾ, ಪಾರ್ಥ ಬಿ.ಎನ್, ಅನ್ಷ್ ಶುಕ್ಲ, ಸುದೀಪ್ ಬಾಲಗುರು, ಎನ್. ಅರ್ಷದ್, ಅಥರ್ವ ದೇವಿ ಪ್ರಸಾದ್, ಎನ್. ಸಿದ್ಧಾಂತ್, ಸ್ವಾಸ್ತಿಕ್ ಎಖೆ, ಎರೆಗಲಾ ಅಭಿರಾಮ್ ರೆಡ್ಡಿ.
ನಿಂತವರು (ಎಡದಿಂದ ಬಲಕ್ಕೆ): ಕೇಶವ್ ಜುಜು (ನಾಯಕ), ಡಿ. ಕಿರಣ್ ಕುಮಾ (ಪ್ರಧಾನ ಕೋಚ್), ಗೀತಾ ಜಿ (ಉಪ ಪ್ರಾಂಶುಪಾಲರು), ಡಾ. ರೇಶ್ಮಾ ಗಣೇಶ್ (ಸ್ಥಾಪಕ ಪ್ರಾಂಶುಪಾಲರು & ಕ್ಯಾಂಪಸ್ ನಿರ್ದೇಶಕರು. ದೀಪಾ ವಿ. (ಶೈಕ್ಷಣಿಕ ಪ್ರಮುಖರು), ಇ. ಅಶೋಕ್ (ಕೋಚ್), ತೇಜಸ್ವಿನಿ ಶರ್ಮಾ (ಉಪನಾಕ).