Friday, December 27, 2024

ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್: ಚರಿತ್‌ಗೆ ಚಿನ್ನ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ 14ನೇ ರಾಜ್ಯಮಟ್ಟದ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನ  ಮೊದಲ ದಿನದಲ್ಲಿ ಚರಿತ್ ಗೌಡ 2 ಚಿನ್ನದ ಸಾನೆ ಮಾಡಿದ್ದಾರೆ.

೧೪ ವರ್ಷ ವಯೋಮಿತಿಯ ಬಾಲಕರ ೧ ಲ್ಯಾಪ್ ಟೈಮ್ ಟ್ರಯಲ್ ವಿಭಾಗದಲ್ಲಿ ೧೦ ನಿಮಿಷ ೪೬.೧೨ ಸೆಕೆಂಡುಗಳಲ್ಲಿ ಗುರಿ ತಲುಪಿದ ಚರಿತ್ ಗೌಡ ಅಗ್ರ ಸ್ಥಾನ ಪಡೆದರು. ಮೈಸೂರಿ ಲಕ್ಷ್ಮೀಶ್ ಎಚ್.ಆರ್. ಹಾಗೂ ವಿಜಯಪುರ ಕ್ರೀಡಾ ನಿಲಯದ ಪ್ರತಾಪ್ ಪಡಚಿ ಮೂರನೇ ಸ್ಥಾನ ಗಳಿಸಿದರು.
ಇದೇ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಕ್ಯಾರೇನ್ ಮಾರ್ಷಲ್ ೧೩ ನಿಮಿಷ ೨೯.೭೨ ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಬಾಗಲಕೋಟೆ ಜಿಲ್ಲೆಯ ಭಾವನ ಪಾಟೀಲ ಹಾಗೂ ಅನುಪಮ ಗುಳೇದ ದ್ವಿತೀಯ ಹಾಗೂ ತೃತೀಯ ಸ್ಥಾನ ಗೆದ್ದುಕೊಂಡರು.
೧೬ ವರ್ಷ ವಯೋಮಿತಿಯ ಬಾಲಕರ ಟೈಮ್ ಟ್ರಯಲ್ ವಿಭಾಗದಲ್ಲಿ ಮೈಸೂರಿನ ಎಡೋನಿಸ್ ೯ ನಿಮಿಷ ೫೬.೮೧ ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಮೈಸೂರಿನ ಹಸಮುಖ ಹಾಗೂ  ವಿಜಯಪುರ ಕ್ರೀಡಾ ನಿಲಯದ ಅನಿಲ ಕಾಳಪ್ಪಗೋಳ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
೧೬ ವರ್ಷದೊಳಗಿನ ಬಾಲಕಿಯರ ೧ ಲ್ಯಾಪ್ ಟೈಮ್ ಟ್ರಯಲ್ ವಿಭಾಗದಲ್ಲಿ ಬಿಜಾಪುರ ಕ್ರೀಡಾ ನಿಲಯದ ಅಕ್ಷತಾ ಮಾತನಾಳ ೧೧ ನಿಮಿಷ ೫೯.೯೦ ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಗಳಿಸಿದರು. ಗದಗ ಕ್ರೀಡಾ ನಿಲಯದ ಪವಿತ್ರಾ ಕುರ್ತುಕೋಟಿ ಹಾಗೂ ಬಾಗಲಕೋಟೆ ಜಿಲ್ಲೆಯ ಅನುಪಮಾ ಗುಳೇದ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
೧೮ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮೈಸೂರಿನ ಎನ್. ಕಮಲರಾಜ್ ೨೦ ನಿಮಿಷ ೪೩.೨೩ ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ಗಳಿಸಿದರು. ಮೈಸೂರಿನ ವೈಶಾಖ ಕೆ.ವಿ. ಹಾಗೂ ವಿಜಯಪುರ ಕ್ರೀಡಾ ನಿಲಯದ ಮುತ್ತಪ್ಪ ನಲವಳ್ಳಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
ಪುರುಷರ ೨ ಲ್ಯಾಪ್ ಟೈಮ್ ಟ್ರಯಲ್ ವಿಭಾಗದಲ್ಲಿ ವಿಜಾಪುರ ಜಿಲ್ಲೆಯ ನಾಗಪ್ಪ ಮರಡಿ  ೨೦ ನಿಮಿಷ ೩೪.೩೦ ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಮೈಸೂರು ಜಿಲ್ಲೆಯ ವಿನಯ್ ಆರ್. ಹಾಗೂ ಬೆಂಗಳೂರು ಜಿಲ್ಲೆಯ ಸುನೀಲ್ ನಂಜಪ್ಪ ದ್ವಿತೀಯ ಹಾಗೂ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.
ವನಿತೆಯರ ೧ ಲ್ಯಾಪ್ ಟೈಮ್ ಟ್ರಯಲ್ ವಿಭಾಗದಲ್ಲಿ ವಿಜಯಪುರ ಕ್ರೀಡಾ ನಿಲಯದ ಸೌಮ್ಯ ಅಂತಾಪೂರ ೧೨ ನಿಮಿಷ ೪೦.೯೧ ಸೆಕೆಂಡುಗಳಲ್ಲಿ ಗುರಿ ತಲುಪಿ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಗದಗ ಜಿಲ್ಲೆಯ ರೇಣುಕಾ ದಂಡಿನ ಹಾಗೂ ಬಾಲಗಲಕೋಟೆ ಜಿಲ್ಲೆಯ ದಾನಮ್ಮ ಗುರವ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
೧೪ ವರ್ಷ ವಯೋಮಿತಿಯ ಬಾಲಕರ ೨ ಲ್ಯಾಪ್ಸ್ ಮಾಸ್ಡ್ ಸ್ಟಾರ್ಟ್ ವಭಾಗದಲ್ಲಿ ಮೈಸೂರು ಜಿಲ್ಲೆಯ ಚರೀತ್ ಗೌಡ ಅಗ್ರ ಸ್ಥಾನ ಗಳಿಸಿದರು. ಮೈಸೂರು ಜಿಲ್ಲೆಯ ಲಕ್ಷ್ಮೀಶ ಎಚ್.ಆರ್.  ವಿಜಯಪುರ ಕ್ರೀಡಾ ನಿಲಯದ ರಾಘವೇಂದ್ರ ವಂದಾಲ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

Related Articles