ಮೂಡುಬಿದಿರೆ : ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 03 ಚಿನ್ನ, 06 ಬೆಳ್ಳಿ ಮತ್ತು 02 ಕಂಚಿನ ಪದಕಗಳೊಂದಿಗೆ 11 ಪದಕದೊಂದಿಗೆ 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. State level Primary School athletics Moodbidri Alvas School overall Champion with 11 medals.
ಫಲಿತಾಂಶ:
ಪ್ರೌಢ ಶಾಲಾ 14 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಫಲಿತಾಂಶ : ಅಮೂಲ್ಯ – 80ಮೀ ಹರ್ಡಲ್ಸ್ (ಪ್ರಥಮ), 4*100ಮೀ ರಿಲೇ (ದ್ವಿತೀಯ), ಪ್ರೇಕ್ಷಾ ಎಲ್ ಗೌಡ – ಎತ್ತರ ಜಿಗಿತ (ದ್ವಿತೀಯ), ಅನುಶ್ರೀ – 600ಮೀ (ದ್ವಿತೀಯ), ಕೌಶಿಕ್ – 80ಮೀ ಹರ್ಡಲ್ಸ್ (ಪ್ರಥಮ), ಉದ್ದ ಜಿಗಿತ (ತೃತೀಯ), ಲೋಹಿತ್ ಗೌಡ – ಗುಂಡು ಎಸೆತ (ಪ್ರಥಮ), ಸುಭಾಷ್ – 80ಮೀ ಹರ್ಡಲ್ಸ್ (ತೃತೀಯ), ಅನುಶ್ರೀ – 4*100ಮೀ ರಿಲೇ (ದ್ವಿತೀಯ), ಸುಜಾತ – 4*100ಮೀ ರಿಲೇ (ದ್ವಿತೀಯ), ರಕ್ಷಿತಾ – 4*100ಮೀ ರಿಲೇ (ದ್ವಿತೀಯ) ಸ್ಥಾನ ಪಡೆದರು.
ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟç ಮಟ್ಟದ ಕ್ರೀಡಾಕೂಟಕ್ಕೆ ಒಂದೇ ಶಾಲೆಯಿಂದ 05 ಕ್ರೀಡಾಪಟುಗಳು ಆಯ್ಕೆಯಾಗಿರುವುದು ಉಲ್ಲೇಖನೀಯ.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.