Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೌಲರ್‌ ಆಗಿ ಎಂಟ್ರಿ ಕೊಟ್ಟ ಸ್ಮಿತ್‌ ನಂ.1 ಬ್ಯಾಟ್ಸ್ಮನ್‌ ಆಗಿ ನಿವೃತ್ತಿ

ಮೆಲ್ಬೋರ್ನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲೆಗ್‌ ಸ್ಪಿನ್ನರ್‌ ಆಗಿ ಪ್ರವೇಶ ಮಾಡಿ, ಶ್ರೇಷ್ಠ ಬ್ಯಾಟ್ಸ್ಮನ್‌ ಆಗಿ ಮಿಂಚಿದ  ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಭಾರತ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸಿದ ಮರುದಿವನೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಸದ್ಯ ಮುಂದುವರಿಯಲಿದ್ದಾರೆ. Steven Smith entered one day cricket as leg spin bowler but retired as a great batsman.

2010, ಫೆಬ್ರವರಿ 19 ರಂದು ವೆಸ್ಟ್‌ಇಂಡೀಸ್‌ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾಪರ್ಪಣೆ ಮಾಡಿದ ಸ್ಟೀವನ್‌ ಸ್ಮಿತ್‌ ಲೆಗ್‌ ಸ್ಪಿನ್‌ ಮೂಲಕ ಎರಡು ವಿಕೆಟ್‌ ಗಳಿಸಿ ತಾನೊಬ್ಬ ಉತ್ತಮ ಸ್ಪಿನ್‌ ಬೌಲರ್‌ ಎಂಬುದನ್ನು ಸಾಬೀತುಪಡಿಸಿದ್ದರು. ಆದರೆ ಸ್ಮಿತ್‌ ಖ್ಯಾತಿ ಪಡೆದದ್ದು ಬ್ಯಾಟ್ಸ್ಮನ್‌ ಆಗಿ. 170 ಏಕದಿನ ಪಂದ್ಯಗಳಲ್ಲಿ 154 ಇನ್ನಿಂಗ್ಸ್‌ ಆಡಿರುವ ಸ್ಮಿತ್‌ 5800 ರನ್‌ ಗಳಿಸಿರುತ್ತಾರೆ. 164 ಗರಿಷ್ಠ ವೈಯಕ್ತಿಕ ಮೊತ್ತ. 12 ಶತಕ ಹಾಗೂ 35 ಅರ್ಧ ಶತಕಗಳನ್ನು ಗಳಿಸಿರುತ್ತಾರೆ. 40 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿ 28 ವಿಕೆಟ್‌ ಗಳಿಸಿರುತ್ತಾರೆ. 16 ರನ್‌ಗೆ 3 ವಿಕೆಟ್‌ ಗಳಿಸಿದ್ದು ಅವರ ಉತ್ತಮ ಬೌಲಿಂಗ್‌ ಸಾಧನೆ.

ಶೇನ್‌ ವಾರ್ನ್‌ ಬದಲಿಗೆ ತಂಡದಲ್ಲಿ ಉತ್ತಮ ಸ್ಪಿನ್‌ ಬೌಲರ್‌ ಆಗಿ ಮಿಂಚಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಆದರೆ ಸ್ಮಿತ್‌ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್‌ ಆಗಿ ಹೊರಹೊಮ್ಮಿದ್ದು ವಿಶೇಷ. ಭಾರತ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ 73 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾಗಿದ್ದ ನಾಯಕ ಸ್ಮಿತ್‌ ಮರುದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆಂದು ಯಾವುದೇ ಕ್ರಿಕೆಟ್‌ ಅಭಿಮಾನಿ ಊಹಿಸಿರಲಿಲ್ಲ. ಆದರೆ ಸ್ಮಿತ್‌ ನಿವೃತ್ತಿಯ ನಿರ್ಧಾರ ಕೈಗೊಂಡರು.


administrator