ರಾಷ್ಟ್ರೀಯ ಪಂಜ ಕುಸ್ತಿ: ಸುರೇಶ್ ಪೂಜಾರಿಗೆ ಚಿನ್ನದ ಪದಕ
ಬೆಂಗಳೂರು: ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ರಾಷ್ಟ್ರೀಯ ಪ್ರೋ ಪಂಜಾ ಕುಸ್ತಿಯ ದಿವ್ಯಾಂಗರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂತಾರಾಷ್ಟ್ರೀಯ ಆರ್ಮ್ ರೆಸ್ಲರ್ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್ ಬಿ. ಪೂಜಾರಿ ಅವರು ಚಿನ್ನದ ಪದಕ ಗೆದ್ದಿದ್ದಾರೆ. Suresh B Poojary won the gold medal at National Open Arm-Wrestling Championship for Disabled held at Bengaluru.
ದಿವ್ಯಾಂಗರ ವಿಭಾಗದಲ್ಲಿ ಸುರೇಶ್ ಚಿನ್ನದ ಪದಕದೊಂದಿಗೆ ನಗದು ಬಹುಮಾನವನ್ನು ಗೆದ್ದಿರುತ್ತಾರೆ. ಬ್ರಹ್ಮಾವರದ ಸಿಲ್ಕ್ ಆಂಡ್ ಕ್ಲೋತ್ ಎಂಪೋರಿಯಂನಲ್ಲಿ ಉದ್ಯೋಗಿಯಾಗಿರುವ ಸುರೇಶ್ ಬ್ರಹ್ಮಾವರದ ಬಾಡಿ ಝೋನ್ ಜಿಮ್‌ನ ಸದಸ್ಯರಾಗಿರುತ್ತಾರೆ.
ಸುರೇಶ್ ಪೂಜಾರಿಯವರು ಈ ಹಿಂದೆ ಮಲೇಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದರು. ಗ್ರೀಸ್‌ನಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್‌ನಲ್ಲಿ ವೀಸಾ ಸಮಸ್ಯೆಯಿಂದಾಗಿ ಅವರು ಸ್ಪರ್ಧೆಯಿಂದ ವಂಚಿತರಾಗಿದ್ದರು. ಈಗ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.