Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

50 ಓವರ್‌ಗೆ 785 ರನ್‌, ಒಬ್ಬರು ತ್ರಿಶತಕ, ಇನ್ನೊಬ್ಬರು ದ್ವಿಶತಕ!!!

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಜೆ.ಬಿ ಮಲ್ಲಾರಾಧ್ಯ ಶೀಲ್ಡ್‌ I-IV ಡಿವಿಜನ್‌ ಲೀಗ್‌‌ ಪಂದ್ಯದಲ್ಲಿ ತಂಡವೊಂದು 50 ಓವರ್‌ಗಳಲ್ಲಿ 785 ರನ್‌ ಗಳಿಸಿದೆ. Team created history by scoring 785 runs in 50 over match in Bangalore KSCA Match

ಬೆಂಗಳೂರು ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌ (2) ಹಾಗೂ ವೈಎಂಸಿಎ ಕ್ರಿಕೆಟ್‌ ಕ್ಲಬ್‌ (1) ನಡುವೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು ಯುನೈಟೆಡ್‌ 50 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 785 ರನ್‌ಗಳ ಬೃಹತ್‌ ಮೊತ್ತವನ್ನು ದಾಖಲಿಸಿತು. ತಂಡದ ಪರ ಒಬ್ಬರು ತ್ರಿಶತಕ ಗಳಿಸಿದರೆ, ಒಬ್ಬರು ದ್ವೀಶತಕ ಹಾಗೂ ಇನ್ನೊಬ್ಬರು ಶತಕ ಗಳಿಸಿದರು. ರೋಹನ್‌ ಆರ್‌ 339 ರನ್‌ ಗಳಿಸಿ ನಾಟೌಟ್‌ ಆಗಿ ಉಳಿದರು. 131 ಎಸೆತಗಳನ್ನೆದುರಿಸಿದ ರೋಹನ್‌ 52 ಬೌಂಡರಿ ಹಾಗೂ 12 ಸಿಕ್ಸರ್‌ ಸಿಡಿಸಿದರು. ಕೇವಲ ಬೌಂಡರಿಯಲ್ಲಿಯೇ 208 ರನ್‌ ಗಳಿಸಿರುವುದು ವಿಶೇಷ, ರಿಶಿಕೇಶ್‌ 206 ರನ್‌ ಗಳಿಸಿ ನಾಟೌಟ್‌ ಆಗಿ ಉಳಿದರು. ರಿಶಿಕೇಶ್‌ 70 ಎಸೆತಗಳನ್ನೆದುರಿಸಿ 32 ಬೌಂಡರಿ ಹಾಗೂ 6 ಸಿಕ್ಸರ್‌ ಸಿಡಿಸಿದರು. ಸತೀಶ್‌ ಟಿ. (113) ಶತಕ ಸಿಡಿಸಿದ ಇನ್ನೋರ್ವ ಆಟಗಾರ. 56 ಎಸೆತಗಳನ್ನೆದುರಿಸಿ 13 ಬೌಂಡರಿ ಹಾಗೂ 5 ಸಿಕ್ಸರ್‌ ಸಿಡಿಸಿದರು.

ಬಹಳ ಬೇಸರದ ಸಂಗತಿ ಎಂದರೆ ಎದುರಾಳಿ ತಂಡ 9.1 ಓವರ್‌ಗಳಲ್ಲಿ ಕೇವಲ 35 ರನ್‌ ಗಳಿಸಿ ಆಲೌಟ್‌ ಆಯಿತು.


administrator