Friday, March 29, 2024

ತೆಲುಗು ಟೈಟಾನ್ಸ್‌ಗೆ ಭರ್ಜರಿ ಜಯ

ಸ್ಪೋರ್ಟ್ಸ್ ಮೇಲ್ ವರದಿ

ದಕ್ಷಿಣದ ಡರ್ಬಿ ಎಂದೇ ಜನಪ್ರಿಯಗೊಂಡಿರು ತೆಲುಗು ಟೈಟಾನ್ಸ್ ಹಾಗೂ ತಮಿಳು ತಲೈವಾಸ್ ನಡುವಿನ ಪ್ರೊ ಕಬಡ್ಡಿಲೀಗ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ೩೩-೨೮ ಅಂತರದಲ್ಲಿ ಜಯ ಗಳಿಸಿ ಮುನ್ನಡೆದಿದೆ.

ತೆಲುಗು ಟೈಟಾನ್ಸ್ ಮೊದಲ ಪಂದ್ಯದಲ್ಲೇ ಜಯ ಗಳಿಸಿದರೆ, ತಮಿಳು ತಲೈವಾಸ್ ಸತತ ಎರಡನೇ ಆಘಾತ ಅನುಭವಿಸಿತು. ರಾಹುಲ್ ಚೌಧರಿ ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೆ, ಅವರಿಗೆ ಮೊಶೆನ್ ಮಾಗ್ಸುಡ್ಲೌ ಹಾಗೂ ನೀಲೇಶ್ ಸಾಲುಂಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದರು. ನಿರ್ಣಾಯಕ ರೈಡಿಂಗ್‌ನಲ್ಲಿ ತಂಡಕ್ಕೆ ಅಂಕ ತಂದುಕೊಟ್ಟ ರಾಹುಲ್‌ ಚೌಧರಿ ಒಟ್ಟು ೯ ಅಂಕಗಳನ್ನು ತನ್ನದಾಗಿಸಿಕೊಂಡರು. ಅಜಯ್ ಠಾಕೂರ್ (೯ ಅಂಕ) ಹಾಗೂ ಅಮಿತ್ ಹೂಡಾ ಟ್ಯಾಕಲ್‌ನಲ್ಲಿ  (೫ ಅಂಕ) ತಮಿಳು ತಲೈವಾಸ್ ಪರ ಉತ್ತಮವಾಗಿ ಆಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಆರಂಭದಲ್ಲಿ ಇತ್ತಂಡಗಳ ನಡುವೆ ಉತ್ತಮ ಪೈಪೋಟಿ ಇದ್ದರೂ ನಂತರ ಟೈಟಾನ್ ತನ್ನ ನೈಜ ಪ್ರದರ್ಶನ ತೋರಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದರು.  ಇದರೊಂದಿಗೆ ಪ್ರಥರ್ಧದಲ್ಲಿ  ೧೭-೧೧ ರಲ್ಲಿ ಅಂತ್ಯಗೊಂಡಿತು. ಮಂಜೀತ್ ಚಿಲ್ಲಾರ್ ಉತ್ತರ ಆಟ ಪ್ರದರ್ಶಿಸುವ ಮೂಲಕ ೨೫ನೇ ನಿಮಿಷದಲ್ಲಿ ಪಂದ್ಯದಲ್ಲಿ ೨೧-೧೬ ಅಂತರದಲ್ಲಿ ಸಾಗಿತು. ಮೂರು ದಿನಗಳಲ್ಲಿ ಸತತ ಮೂರನೇ ಪಂದ್ಯಆಡುತ್ತಿರುಲ ತಮಿಳು ತಲೈವಾಸ್ ಡಿಫೆನ್ಸ್ ಹಾಗೂ ರೈಡಿಂಗ್ ವಿಭಾಗದಲ್ಲಿ ವೈಲ್ಯ ಕಾಣುವುದರೊಂದಿಗೆ ೨೮-೩೩ ಅಂತರದಲ್ಲಿ ಸೋಲನುಭವಿಸಿತು.
ಡೆಲ್ಲಿ-ಗುಜರಾತ್ ಪಂದ್ಯ ೩೨-೩೨ರಲ್ಲಿ ಸಮಬಲ
ಅತ್ಯಂತ ರೋಚಕವಾಗಿ ನಡೆದ ಗುಜರಾತ್ ಫಾರ್ಚೂನ್ ಜಯಂಟ್ಸ್ ಹಹಾಗೂ ದಬಾಂಗ್ ಡೆಲ್ಲಿ ನಡುವಿನ ಪಂದ್ಯ ೩೨-೩೨ ಅಂಕಗಳಲ್ಲಿ ಸಮಬಲಗೊಂಡಿತು. ಇದರೊಂದಿಗೆ ಲೀಗ್‌ನ ಎರಡನೇ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಂತಾಯಿತು. ಚಂದನ್ ರಂಜಿತ್ ರೈಡಿಂಗ್‌ಲ್ಲಿ ೧೦ಅಂಕ ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತ್ತು. ಆರಂಭದಲ್ಲಿ ದಬಾಂಗ್ ಡೆಲ್ಲಿ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ವಿಲವಾಗಿತ್ತು. ಪ್ರಪಂಜನ್ ಎರಡು ಅಂಕ ಗಳಿಸುವ ಮೂಲಕ ಗುಜರಾತ್ ಉತ್ತಮ ಆರಂಭ  ಕಂಡಿತ್ತು. ಪ್ರಥಮಾರ್ಧ  ೧೭-೧೨ರಲ್ಲಿ ಅಂತ್ಯಗೊಂಡು ಗುಜರಾತ್ ಮೇಲುಗೈ ಕಂಡಿತ್ತು.
ದ್ವಿತಿಯಾರ್ಧದ  ಆರಂಭದಲ್ಲಿ ತಲಾ ೪ ಅಂಕಗಳನ್ನು ಗಳಿಸುವ ಮೂಲಕ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ೨೯ನೇ ನಿಮಿಷದಲ್ಲಿ ಇತ್ತಂಡಗಳು ೨೪-೧೮ರಲ್ಲಿ ಮುನ್ನಡೆ ಕಂಡವು. ಸಚಿನ್ ಉತ್ತಮ ರೈಡಿಂಗ್ ಮೂಲಕ ಆರು ಅಂಕ ಗಳಿಸುವುದುರೊಂದಿಗೆ ಗುಜರಾತ್ ೨೫-೨೦ರಲ್ಲಿ ಮೇಲುಗೈ ಕಂಡಿತು. ಡೆಲ್ಲಿ ತಿರುಗೇಟು ನೀಡುವ ಮೂಲಕ ೩೭ನೇ ನಿಮಿಷದಲ್ಲಿ ಅಂಕ ೩೦-೨೯ಕ್ಕೆ ತಲುಪಿತು. ಅಂತಿಮ ಕ್ಷಣದಲ್ಲಿ ಇತ್ತಂಡಗಳು ಸಮಬಲದ ಹೋರಾಟ ನೀಡುವುದರೊಂದಿಗೆ ಪಂದ್ಯ ೩೨-೩೨ರಲ್ಲಿ ಸಮಬಲಗೊಂಡಿತು.

Related Articles