ಪ್ರದೀಪ್ ಪಡುಕರೆ, Pradeep Padukare
ದಾಖಲೆಗಳ ರಾಜ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದೊಡ್ಡ ದಾಖಲೆ ಅಪಾಯದಲ್ಲಿದೆ. 48 ವರ್ಷದ ವಿಶ್ವಕಪ್ ಇತಿಹಾಸದಲ್ಲಿ ಇದು ಹದಿಮೂರನೇ ಏಕದಿನ ವಿಶ್ವಕಪ್. 2003ನೇ ವಿಶ್ವಕಪ್ ಸರಣಿಯಲ್ಲಿ ತೆಂಡೂಲ್ಕರ್ 673 ರನ್ ಹೊಡೆದಿದ್ದು ಸಾರ್ವಕಾಲಿಕ ದಾಖಲೆ. ಆದರೆ ಈ ಮೊತ್ತವನ್ನು ಮುರಿಯಲು ಯುವ ಆಟಗಾರರು ಸಜ್ಜಾಗಿದ್ದಾರೆ. Sachin Tendulkar’s records in danger!
ಕೊನೆಯ ಬಾರಿ ಹತ್ತಿರ ಹತ್ತಿರ ಬಂದ ಸಚಿನ್ ಶಿಷ್ಯ ರೋಹಿತ್ ಶರ್ಮ 648 ರನ್ ಬಾರಿಸಿದರು. ಸಚಿನ್ ದಾಖಲೆಗೆ ಅದೃಷ್ಟ ಇತ್ತು ಭಾರತ ಸೆಮಿ ಫೈನಲ್ ಸೋತಿತ್ತು. ಫೈನಲ್ ತಲುಪಿದ್ದರೆ ಹಿಟ್ ಮ್ಯಾನ್ ಸಚಿನ್ ದಾಖಲೆ ಉಡಾಯಿಸಿ ಬಿಡುತ್ತಿದ್ದರು.
ಆದರೆ ಈಗ ಸೌತ್ ಆಫ್ರೀಕಾದ ಕ್ಟಿಂಟನ್ ಡಿಕಾಕ್ ಆ ದಾಖಲೆಗೆ ದೊಡ್ಡ ಸಂಚಕಾರ ತಂದಿಟ್ಟಿದ್ದಾನೆ, ಇಂದು ಈ ವಿಶ್ವಕಪ್‌ನಲ್ಲಿ ನಾಲ್ಕನೇ ಶತಕ ಬಾರಿಸಿ 500 ರನ್ನಗಳನ್ನು ದಾಟಿ ಮುನ್ನುಗ್ಗಿ 545 ರಲ್ಲಿ ನಿಂತಿದ್ದಾನೆ ಅದು ಕೂಡ ಕೇವಲ ಏಳು ಪಂದ್ಯಗಳಲ್ಲಿ. ಸಚಿನ್ ದಾಖಲೆ ಸರಿಗಟ್ಟಲು ಇನ್ನು ಕೇವಲ 128 ರನ್ ಅವಶ್ಯಕತೆ ಇದೆ, ಇನ್ನೂ ಕನಿಷ್ಠ ನಾಲ್ಕು ಮ್ಯಾಚ್ ಸಿಗುತ್ತದೆ ಕ್ವಿಂಟಾನ್‌ಗೆ.
ಫೈನಲ್ ತಲುಪಿದರೆ ಮತ್ತೊಂದು ಪಂದ್ಯ ಜಾಸ್ತಿ..! ಕೆಲವು ದಿನಗಳ ಹಿಂದೆ ವಿಶ್ವಕಪ್‌ನಲ್ಲಿ ಸಚಿನ್ ಸಿಡಿಸಿದ ಆರು ಶತಕಗಳ ದಾಖಲೆ ರೋಹಿತ್ ಬ್ರೇಕ್ ಮಾಡಿದ್ದರು.ಈ ಕಡೆ ಕೊಹ್ಲಿ ತೆಂಡೂಲ್ಕರ್ ಏಕದಿನ ಶತಕಗಳ ಹಿಂದೆ ಬಿದ್ದಿದ್ದಾರೆ , ಇನ್ನೊಂದು ಶತಕ ಬಂದರೆ ಸಚಿನ್ ದಾಖಲೆ ಸಮಬಲ, ಎರಡು ಶತಕ ಸಿಡಿದರೆ ಆ ದಾಖಲೆಯು ಉಡಿಸ್. ಒಟ್ಟಾರೆ ಕ್ರಿಕೆಟ್ ದೇವರ ದಾಖಲೆಗಳಿಗು ಈಗ ರಾಹುಕಾಲ.!