ಸ್ಪೋರ್ಟ್ಸ್ ಮೇಲ್ ವರದಿ:
ಸಾವಿರಾರು ಟೆನಿಸ್ ಅಭಿಮಾನಿಗಳ ಎದುರು ಹೊನಲು ಬೆಳಕಿನಲ್ಲಿ ನಡೆದ ಬೆಂಗಳೂರು ಓಪನ್ -2018 ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅವರು ಸಾಕೇತ್ ಮೈನೇನಿ ಅವರನ್ನು ಮಣಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಅಂಗಳದಲ್ಲಿ ನಡೆದ ಸಿಂಗಲ್ಸ್ ಫನಲ್ ಪಂದ್ಯದಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅವರು ಸಾಕೇತ್ ಮೈನೇನಿ ವಿರುದ್ಧ 6-2, .6-_2..ಅಂತರದಲ್ಲಿ ನೇರ ಸೆಟ್ ಗಳಿಂದ ಗೆಲುವಿನ ನಗೆ ಬೀರಿದರು . ಇದರೊಂದಿದೆ ಗಳದಲ್ಲಿ ನೆರೆದಿದ್ದ ಅಭಿಮಾನಿಗಳ ಪ್ರೀತಿಗೆ ಪ್ರಜ್ಞೇಶ್ ಪಾತ್ರರಾದರು.
ಗಾಯದಿಂದಾಗಿ ಸತತ ಎಂಟು ತಿಂಗಳು ಕಾಲ ವಿಶ್ರಾಂತಿ ಪಡೆದು ಅಂಗಳಕ್ಕೆ ಹಿಂತಿರುಗಿದ್ದ ಸಾಕೇತ್ ಟೂರ್ನಿಯಲ್ಲಿ ಅಮೋಘ ಆಟ ಪ್ರದರ್ಶನ ನೀಡಿ ಫೈನಲ್ ಪ್ರವೇಶ ಮಾಡಿದ್ದರು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಗುಣೇಶ್ವರ್ ಎದುರು ಮಂಕಾದರು. ಅಂತಿಮವಾಗಿ ಸೋಲು ಅನುಭವಿಸಿದರು.
ಆರಂಭದಿಂದಲೂ ಅತ್ಯುತ್ತಮ ಆಟವಾಡಿದ ಪ್ರಜ್ಞೇಶ್ ಗುಣೇಶ್ವರ್, ಮೊದಲ ಸೆಟ್ ನಲ್ಲಿಂದಲೇ ಪ್ರಾಬಲ್ಯ ಮೆರೆದರು. ಮೊದಲ ಸೆಟ್ ನಲ್ಲಿ ಬಲಿಷ್ಟ ಸರ್ವ್ ಗಳಿಂದ ಎದುರಾಳಿ ಆಟಗಾರನಿಗೆ ಚೆಳ್ಳೆ ಹಣ್ಣು ತಿನಿಸಿದರು. ಮೊದಲ ಸೆಟ್ ನಲ್ಲಿ ಪ್ರಜ್ಞೇಶ್ ಅವರು 6-2 ಅಂತರದಲ್ಲು ಗೆಲುವಿನ ನಗೆ ಬೀರಿದರು.
ಎರಡನೇ ಸೆಟ್ ನಲ್ಲಿ ಕಾರ್ಯಯೋಜನೆಯಲ್ಲಿ ಅಂಗಳಕ್ಕೆ ಆಗಮಿಸಿದ ಸಾಕೇತ್ ಆರಂಭದಲ್ಲೇ ಹಲವು ತಪ್ಪುಗಳನ್ನು ಮಾಡಿದರು. ಹಲವು ಡ್ರಾಪ್ ಗಳ ಮೂಲಕ ಗಮನ ಸೆಳೆದ ಸಾಕೇತ್, ಗುಣೇಶ್ವರನ್ ಎದುರು ಪ್ರಾಬಲ್ಯ ಮುಂದುವರಿಸುವಲ್ಲಿ ವಿಫಲರಾದರು. ಅಂಗಳದಲ್ಲಿ ಚಾಕಚಕ್ಯತೆಯ ಆಟ ಪ್ರದರ್ಶನ ಪ್ರಜ್ಞೇಶ್ ಗುಣೇಶ್ವರನ್ , ದ್ವಿತೀಯ ಸೆಟ್ ನಲ್ಲೂ 6.2 ಅಂತರದಲ್ಲಿ ಜಯದ ನಗೆ ಬೀರಿದರು. ಇದರೊಂದಿಗೆ, ಬೆಂಗಳೂರು ಓಪನ್ -2018 ಸಿಂಗಲ್ಸ ಕಿರೀಟವನ್ನು ಪ್ರಜ್ಞೇಶ್ ಗುಣೇಶ್ವರನ್ ಮುಡಿಗೇರಿಸಿಕೊಂಡರು.