Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬ್ರೆಂಡಾನ್‌ ಹಾಲ್ಟ್‌ಗೆ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ ಪಟ್ಟ

ಬೆಂಗಳೂರು: ಎಟಿಪಿ ಚಾಲೆಂಜರ್‌ ಬೆಂಗಳೂರು ಓಪನ್‌‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಜಪಾನಿನ ಶಿಂಟಾರೋ ಮೊಚಿಝುಕಿ ವಿರುದ್ಧ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. Tennis Legend’s Son, Brandon Holt Clinches 2025 Bengaluru Open Tennis Championship.

ಭಾರತ ಪ್ರತಿಷ್ಠಿತ ಟೂರ್ನಿಯಾಗಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ 125 ಟೂರ್ನಿಯನ್ನು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಸಿಯೇಷನ್‌ (KSLTA) ಆಯೋಜಿಸಿದ್ದು, 26 ವರ್ಷದ ಬ್ರೆಂಡಾನ್‌ ಹಾಲ್ಟ್‌‌ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟೆನಿಸ್‌‌ ಹಾಲ್‌ ಆಫ್‌‌ ಫೇಮ್‌ ಟ್ರೇಸಿ ಆಸ್ಟಿನ್‌ ಅವರ ಮಗನಾಗಿರುವ ಬ್ರೆಂಡಾನ್‌, 6-3, 6-3 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಜೊತೆಯಲ್ಲಿ ಟ್ರೋಫಿಯೊಂದಿಗೆ 28,400 ಅಮೆರಿಕನ್‌ ಡಾಲರ್‌ (24,84,163 ರೂ.) ನಗದು ಬಹುಮಾನ ಗೆದ್ದರು. ಈ ಚಾಂಪಿಯನ್‌ಷಿಪ್‌‌ ಗೆದ್ದುದರಿಂದ ಬ್ರೆಂಡಾನ್‌ಗೆ 125 ಎಟಿಪಿ ಅಂಕಗಳು ಲಭಿಸಿತು. ರನ್ನರ್‌ಅಪ್‌ ಸ್ಥಾನ ಗಳಿಸಿದ ಮೊಚಿಝುಕಿ 16,700 ಅಮೆರಿಕನ್‌ ಡಾಲರ್‌ (14,60,758 ರೂ) ತಮ್ಮದಾಗಿಸಿಕೊಂಡರು. ಜೊತೆಯಲ್ಲಿ 75 ಎಟಿಪಿ ಅಂಕ ಗಳಿಸಿದರು.


administrator