Saturday, December 21, 2024

ರಾಮಕುಮಾರ್ ಗೆ ಶಾಕ್ ನೀಡಿದ ಅರ್ಜುನ್ ಖಾಡೆ

ಪುಣೆ:

ಭಾರತದ ರಾಮಕುಮಾರ್ ರಾಮನಾಥನ್ ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಅರ್ಜುನ್ ಖಾಡೆ ಎದುರು ಸೋಲನುಭವಿಸಿ ಟೂರ್ನಿಯಿಂದ ಹೊರನಡೆದರು.

ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಮನಾಥನ್ ಆರಂಭದಿಂದಲೂ ನೀರಸ ಪ್ರದರ್ಶನ ತೋರುವ ಮೂಲಕ 3-6, 2-6 ನೇರ ಸೆಟ್‌ಗಳಿಂದ ಪರಾಭವಗೊಂಡರು. ಮೊದಲ ಸೆಟ್‌ನಲ್ಲಿ ಮೂರು ಹಾಗೂ ಎರಡನೇ ಸೆಟ್‌ನಲ್ಲಿ ನಾಲ್ಕು ಅಂಕ ಹಿನ್ನಡೆಯಾಗಿ ತಮ್ಮ ಸೋಲಿಗೆ ತಾವೇ ಕಾರಣರಾದರು.

ಮ ತ್ತೊಂದು  ಸಿಂಗಲ್ಸ್  ವಿಭಾಗದ ಮೊದಲ ಪಂದ್ಯದಲ್ಲಿ ಸಸಿ ಕುಮಾರ್ ಮುಕುಂದ್ ಬೆಂಗಳೂರು ಓಪನ್ ರನ್ನರ್ ಅಪ್ ಆಟಗಾರ ಸಾಕೇತ್ ಮೈನೆನಿ ಅವರನ್ನು 6-4, 7-6 ನೇರಸೆಟ್‌ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಪಂದ್ಯದ ಎರಡು ಸೆಟ್‌ಗಳಲ್ಲಿ ಯಶಸ್ವಿ ಹೋರಾಟ ನಡೆಸುವಲ್ಲಿ ಮುಕುಂದ್ ಸಫಲರಾದರು.
ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಥೈವಾನ್‌ನ ಸುಂಗ್ ಯಾಂಗ್ ಅವರನ್ನು 6-4, 6-4 ನೇರಸೆಟ್‌ಗಳಿಂದ ಪರಾಭವಗೊಳಿಸುವಲ್ಲಿ ಯಶಸ್ವಿಯಾಗಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಮೊದಲ ಹಾಗೂ ಎರಡನೇ ಸೆಟ್‌ಗಳಲ್ಲಿ ಎರಡೆರಡು ಪಾಯಿಂಟ್ ಮುನ್ನಡೆಯಾಗಿ ಗೆಲುವಿನ ನಗೆ ಬೀರಿದರು.ಅವರು ಮುಂದಿನ ಪಂದ್ಯದಲ್ಲಿ ಲ್ಯುಕಾಸ್ ಗ್ರೀಚ್ ಅವರೊಂದಿಗೆ ಹೋರಾಟ ನಡೆಸಲಿದ್ದಾರೆ.

Related Articles